News Karnataka Kannada
Sunday, April 21 2024
Cricket
ಕರ್ನಾಟಕ

ಲಾಕ್‍ಡೌನ್ ವೇಳೆ 40 ಮಹಿಳೆಯರು, ಯುವತಿಯರು ನಾಪತ್ತೆ

Photo Credit :

ಲಾಕ್‍ಡೌನ್ ವೇಳೆ  40 ಮಹಿಳೆಯರು, ಯುವತಿಯರು   ನಾಪತ್ತೆ

ಹಾವೇರಿ: ಕೊರೊನಾ ಹಿನ್ನೆಲೆ ಲಾಕ್‍ಡೌನ್ ಜಾರಿಯಲ್ಲಿದ್ದ ವೇಳೆಯಲ್ಲಿ ಜಿಲ್ಲೆಯಲ್ಲಿ ಯುವತಿಯರೇ ಹೆಚ್ಚು ನಾಪತ್ತೆಯಾದ ಪ್ರಕರಣಗಳು ದಾಖಲಾಗಿವೆ. ಒಟ್ಟು 19 ಪೊಲೀಸ್ ಠಾಣೆಗಳಲ್ಲಿ 48 ಪ್ರಕರಣಗಳು ದಾಖಲಾಗಿವೆ. 8 ಜನರು ಪುರುಷರು ನಾಪತ್ತೆಯಾಗಿದ್ದು, 40 ಜನ ಮಹಿಳೆಯರು, ಯುವತಿಯರು ನಾಪತ್ತೆಯಾದ ಪ್ರಕರಣಗಳು ಠಾಣೆಗಳಲ್ಲಿ ದಾಖಲಾಗಿವೆ.
ಲಾಕ್‍ಡೌನ್ ವೇಳೆ ಒಟ್ಟು 40 ಮಹಿಳೆಯರ ನಾಪತ್ತೆ ಪ್ರಕರಣಗಳಲ್ಲಿ ಯುವತಿಯರೇ ಹೆಚ್ಚು ಕಾಣೆಯಾದ ಪ್ರಕರಣಗಳು ವರದಿಯಾಗಿವೆ ಎಂದು ಹಾವೇರಿ ಎಸ್‍ಪಿ ಕೆ.ಜೆ.ದೇವರಾಜ್ ಹೇಳಿದ್ದಾರೆ. ಯುವತಿಯರು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ, ಸ್ವಸಹಾಯ ಸಂಘಕ್ಕೆ ಹಣ ಕಟ್ಟಿ ಬರುತ್ತೇನೆ, ಬಟ್ಟೆ ತೊಳೆಯಲು ಹೋಗುತ್ತೇನೆ, ಗೆಳೆತಿಯ ಮನೆಗೆ ಹೋಗಿ ಬರುತ್ತೇನೆ. ಬ್ಲೌಸ್ ಹೊಲಿಸಿಕೊಂಡು ಬರುತ್ತೇನೆ ಹಾಗೂ ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿಯರು ನಾಪತ್ತೆಯಾದ ಪ್ರಕರಣ ದಾಖಲಾಗಿವೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಯುವತಿಯರ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ನಾಪತ್ತೆಯಾಗಿವೆ. ಈಗಾಗಲೇ 48 ಪ್ರಕರಣಗಳಲ್ಲಿ 10 ಕೇಸ್ ಗಳು ಪತ್ತೆಯಾಗಿದ್ದು, ಇಬ್ಬರು ಪುರುಷರು ಹಾಗೂ 8 ಜನ ಯುವತಿಯರನ್ನು ಪತ್ತೆ ಮಾಡಿದ್ದೇವೆ. ಪತ್ತೆಯಾದ ನಂತರ ಪ್ರೀತಿ, ಪ್ರೇಮದ ಕಾರಣಕ್ಕಾಗಿ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕೊರೊನಾ ಇರೋ ಕಾರಣಕ್ಕಾಗಿ ಹೆಚ್ಚು ಕೇಸ್ ಪತ್ತೆ ಮಾಡಲು ಆಗಿಲ್ಲ ಎಂದು ದೇವರಾಜ್ ತಿಳಿಸಿದ್ದಾರೆ.
ಉಳಿದ 38 ನಾಪತ್ತೆ ಪ್ರಕರಣಗಳನ್ನ ಶೀಘ್ರದಲ್ಲೇ ತಂಡ ರಚಿಸಿ ಪತ್ತೆ ಮಾಡುವ ಕಾರ್ಯ ಮಾಡುತ್ತೇವೆ. ಕೊರೊನಾ ಎರಡನೇ ಅಲೆ ಇರೋ ಕಾರಣ ಪೊಲೀಸ್ ಸಿಬ್ಬಂದಿ ಬಿಗಿಭದ್ರತೆ ಹಾಗೂ ವಿವಿಧ ಕಾರ್ಯಗಳಿಗೆ ನಿಯೋಜನೆ ಮಾಡಿದ್ದೇವೆ. ಕೂಡಲೇ ಒಂದು ವಿಶೇಷ ತಂಡ ರಚನೆ ಮಾಡಿ ಉಳಿದ ಪ್ರಕರಣಗಳನ್ನ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಹಾವೇರಿ ಎಸ್ಪಿ ಕೆ.ಜಿ.ದೇವರಾಜ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು