News Karnataka Kannada
Wednesday, April 24 2024
Cricket
ಕರ್ನಾಟಕ

ರೈಲ್ವೆ ತಡೆಗೋಡೆ ಮುರಿದು ಸಲಗನ ಆಕ್ರೋಶ

Photo Credit :

ರೈಲ್ವೆ ತಡೆಗೋಡೆ ಮುರಿದು ಸಲಗನ ಆಕ್ರೋಶ

ಚಾಮರಾಜನಗರ: ಕಾಡಿನಿಂದ ನಾಡಿನತ್ತ ಬರುವ ಕಾಡಾನೆಗಳನ್ನು ತಡೆಯುವ ಸಲುವಾಗಿ ಅರಣ್ಯದಂಚಿನಲ್ಲಿ  ನಿರ್ಮಿಸಿರುವ ರೈಲ್ವೆ ಕಂಬಿಯ ತಡೆಗೋಡೆಗಳನ್ನು ಮುರಿದು ಹೊರಕ್ಕೆ ಬರಲು ಕಾಡಾನೆಗಳು ಪ್ರಯತ್ನಿಸುವ ಘಟನೆಗಳು ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ.

ಈ ಹಿಂದೆ ಕಾಡಾನೆ ಕಂಬಿಯನ್ನು ಹತ್ತಲು ಯತ್ನಿಸಿದ್ದು, ಕಂಬಿಯೊಳಗೆ ನುಗ್ಗಲು ಯತ್ನಿಸಿ ಸಿಕ್ಕಿಹಾಕಿಕೊಂಡಿದ್ದು ಹೀಗೆ ಹಲವಾರು ಪ್ರಕರಣಗಳು ನಡೆದಿತ್ತು. ಇದೀಗ ಅರಣ್ಯದಿಂದ ಹೊರ ಬರಲು ಅಡ್ಡಿಯಾಗಿದ್ದ  ಕಬ್ಬಿಣದ ತಡೆಗೋಡೆಯನ್ನು  ಮುರಿದು ಹೊರ ಬರಲು ಯತ್ನಿಸಿರುವುದು ವೈರಲ್ ಆಗಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಎನ್.ಬೇಗೂರು ವಲಯದ ಕಳಸೂರು ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿ ಎದುರಲ್ಲಿಯೇ ಒಂಟಿ ಸಲಗವೊಂದು  ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಕಂಬಿಯನ್ನು  ದಾಟಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ದಾರಿ ಇಲ್ಲದಿದ್ದರೂ  ದಾರಿ ಮಾಡಿಕೊಂಡ ಸಲಗ ಕಾಡಿನಿಂದ ಹೊರ ತೆರಳಲು ಕಬ್ಬಿಣದ ತಡೆಗೋಡೆ ಮುರಿಯಲು ಹರಸಾಹಸಪಟ್ಟಿದೆ.   ಸಲಗನ  ಆರ್ಭಟ ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ  ಸಹ   ಬೆಚ್ಚಿಬಿದ್ದಿದ್ದಾರೆ.

ಇದೇ ವೇಳೆ ಸಿಮೆಂಟ್‍ನಲ್ಲಿ ನಿರ್ಮಿಸಿದ್ದ  ತಡೆಗೋಡೆಯನ್ನು ಮುರಿದು ಹಾಕಿದೆ. ಹೆಚ್.ಡಿ.ಕೋಟೆ ತಾಲೂಕಿನ ಕಳಸೂರು  ಗ್ರಾಮದಲ್ಲಿ ಘಟನೆ ನಡೆದಿದ್ದು ಕೊನೆಗೂ ತನಗೆ ಅಡ್ಡ ಬಂದ ತಡೆಗೋಡೆಯನ್ನು ಕೆಡವಿ ಕಾಡಿನತ್ತ ತೆರಳಿದೆ.

ಇದೇ ರೀತಿಯಲ್ಲಿ ಒಂದು ತಿಂಗಳ ಹಿಂದೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೊಳೆಯೂರು ವಲಯದ ನಡಹಾಡಿ ಸಮೀಪ ವಸ್ತಿಹಳ್ಳ ಸಮೀಪ ರೈಲ್ವೆ ಕಂಬಿ ಮೂಲಕ  ನುಗ್ಗಲು ಯತ್ನಿಸಿ ಮಧ್ಯಭಾಗದಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು