News Karnataka Kannada
Thursday, April 18 2024
Cricket
ಕರ್ನಾಟಕ

ರೈತರ ಬೆಳೆನಾಶ ಮಾಡುತ್ತಿರುವ ಕಾಡುಹಂದಿಗಳು

Photo Credit :

ರೈತರ ಬೆಳೆನಾಶ ಮಾಡುತ್ತಿರುವ ಕಾಡುಹಂದಿಗಳು

ಬೇಲೂರು: ಕಾಡಾನೆ ಹಾವಳಿಯಿಂದ ತತ್ತರಿಸಿದ್ದ ರೈತರಿಗೆ ಈಗ ಕಾಡುಹಂದಿಗಳ ಹಾವಳಿ ಆರಂಭವಾಗಿದ್ದು, ಕಾಡಿನಿಂದ ಬಂದು ಹೊಲಕ್ಕೆ ನುಗ್ಗುತ್ತಿರುವ ಹಂದಿಗಳು ಬೆಳೆಯನ್ನು ನಾಶಮಾಡುತ್ತಿವೆ.

ತಾಲೂಕಿನ ಹಿರೇಕೋಲೆ ಗ್ರಾಮದಲ್ಲಿ ಹೊಲಕ್ಕೆ ರಾತ್ರಿ ವೇಳೆ ನುಗ್ಗುವ ಕಾಡು ಹಂದಿಗಳ ಹಿಂಡು ಬೆಳೆದು ನಿಂತಿರುವ ಮೆಕ್ಕೆಜೋಳವನ್ನು ತಿಂದು ನಾಶ ಮಾಡುತ್ತಿವೆ. ಇದರಿಂದ  ರೈತರು ಕಂಗಾಲಾಗಿದ್ದಾರೆ.

ಹಿರೇಕೋಲೆ ಗ್ರಾಮದ ರೈತ ರವಿ ಎಂಬುವವರು ಜೋಳದ ಬೆಳೆ ಬೆಳೆದಿದ್ದು, ರಾತ್ರಿ ನುಗ್ಗಿದ ಕಾಡುಹಂದಿಗಳು ಬೆಳೆಯನ್ನು ನಾಶ ಮಾಡಿವೆ.  ಬೆಳಗ್ಗೆ ಜಮೀನಿಗೆ ತೆರಳಿದ ರೈತ ರವಿ ಅವರಿಗೆ ಬೆಳೆ ನಾಶವಾಗಿರುವುದು ಗೋಚರಿಸಿದೆ.  ಕಷ್ಟಪಟ್ಟು ಸಾಲ ಮಾಡಿ ಮೆಕ್ಕೆಜೋಳ ಬೆಳೆದಿದ್ದು, ಕಟಾವಿಗೆ ಬಂದ ಸಂದರ್ಭದಲ್ಲಿಯೇ ಕಾಡುಹಂದಿಗಳು ನಾಶಮಾಡಿದ್ದು ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ರವಿ ಅಳಲು ತೋಡಿಕೊಂಡಿದ್ದಾರೆ.

ಕಾಡಾನೆಗಳ ಹಾವಳಿ ಕುರಿತಂತೆ ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ್ ಮಾತನಾಡಿ, ಈಗಾಗಲೇ ರೈತರು ತಮ್ಮ ಜಮೀನಿನಲ್ಲಿ ಸಾಕಷ್ಟು ಬೆಳೆಗಳನ್ನು ಬೆಳೆದಿದ್ದು, ಈಗ ಕಟಾವು ಸಮಯದಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಮೊದಲೇ ಕೊವೀಡ್ ಸಂಕಷ್ಟದಿಂದ ರೈತರ ಜೀವನ ಸಂಕಷ್ಟಕ್ಕೀಡಾಗಿದ್ದು, ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ, ಅದರಲ್ಲೂ ಕಟಾವಿಗೆ  ಬಂದ ಬೆಳೆಗಳನ್ನು ಕಾಡುಹಂದಿಗಳು ಹಾನಿ ಮಾಡಿದರೆ ರೈತರ ಜೀವನ ನಡೆಸಲು ಕಷ್ಟವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಬಗ್ಗೆ ಗಮನಹರಿಸಿ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಿ ರೈತರನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು