News Karnataka Kannada
Wednesday, April 17 2024
Cricket
ಕರ್ನಾಟಕ

ಯೋಜನೆ ಕೈ ತಪ್ಪಿದರೆ ಭವಿಷ್ಯದಲ್ಲಿ ಉತ್ತರ ಕನ್ನಡದಲ್ಲಿ ನಾಗರಿಕ ವಿಮಾನ ನಿಲ್ದಾಣ ಕಾಣಲು ಸಾಧ್ಯವಿಲ್ಲ: ಸಚಿವ ಶಿವರಾಮ್ ಹೆಬ್ಬಾರ್  

Photo Credit :

ಯೋಜನೆ ಕೈ ತಪ್ಪಿದರೆ ಭವಿಷ್ಯದಲ್ಲಿ ಉತ್ತರ ಕನ್ನಡದಲ್ಲಿ ನಾಗರಿಕ ವಿಮಾನ ನಿಲ್ದಾಣ ಕಾಣಲು ಸಾಧ್ಯವಿಲ್ಲ: ಸಚಿವ ಶಿವರಾಮ್ ಹೆಬ್ಬಾರ್   

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿರ್ಮಾಣವಾಗುತ್ತಿರುವ ನಾಗರಿಕ ವಿಮಾನ ನಿಲ್ದಾಣಕ್ಕೆ ಎಲ್ಲರೂ ಕೈಜೋಡಿಸಿ, ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಕಾರ್ಮಿಕ, ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅಂಕೋಲಾದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಒಂದು ವೇಳೆ ಕೈ ತಪ್ಪಿದರೆ ಭವಿಷ್ಯದಲ್ಲಿ ಉತ್ತರ ಕನ್ನಡ ವಿಮಾನ ನಿಲ್ದಾಣ ಕಾಣಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಚುನಾವಣೆ ಬಂದಾಗ ಆರೋಪ- ಪ್ರತ್ಯಾರೋಪ ಸಹಜ. ಇಂಥ ಯೋಜನೆ ಬಂದಾಗ ಎಲ್ಲರೂ ಒಂದಾಗಬೇಕು. ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಬೇಕು ಎಂದರು.

ಯೋಜನೆ ನಿರ್ಮಾಣದ ವಿಷಯದಲ್ಲಿ ಜನರ ಸಹಭಾಗಿತ್ವ ಅಗತ್ಯ. ವಾಸ್ತವಿಕತೆ ಮುಚ್ಚಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ. ಜನರ ವಿಶ್ವಾಸ ಉಳಿಸಿಕೊಳ್ಳತ್ತೇವೆ. ಜಿಲ್ಲೆಯ ನಿರಾಶ್ರಿತರಿಗೆ ಭಯ ಮೂಡಿದೆ. ಯಾರು ನಿರಾಶ್ರಿತರಾಗುತ್ತಾರೋ ಅವರಿಗೆ  ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಯಾವುದೇ ಕಾರಣಕ್ಕೂ ಯಾರೊಬ್ಬರ ಕೈ ಬಿಡುವುದಿಲ್ಲ. ಏರ್ ಪೋರ್ಟ್ ಆದ ಮೇಲೆ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವುದಲ್ಲ. ಮೊದಲು ಈ ಬಗ್ಗೆ ಕ್ರಮವಾಗುವಂತೆ ಹೆಚ್ಚಿನ ಆಧ್ಯತೆ ನೀಡುತ್ತೇವೆ. ಪ್ರತಿ ಕುಟುಂಬಕ್ಕೂ ರಕ್ಷಣೆ ನೀಡುತ್ತೇವೆ ಎಂದರು.

ಅಲಗೇರಿಯಲ್ಲಿ ವಿಮಾನ ನಿಲ್ದಾಣ ಅಲ್ಲಿ ಆಗಿಯೇ ಆಗುತ್ತದೆ, ತಡೆಯುವ ಯಾವುದೇ ಪ್ರಶ್ನೆ ಇಲ್ಲ. ರಕ್ಷಣಾ ಇಲಾಖೆ ನೌಕಾನೆಲೆ 7 ಸಾವಿರ ಕೋಟಿ ರೂ. ನಲ್ಲಿ 1290 ಎಕರೆ ಜಮೀನು ನೀಡುತ್ತಿರುವಾಗ, ರಾಜ್ಯ ಸರಕಾರ 95 ಎಕರೆ ಹಾಗೂ 250 ಕೋಟಿ ನೀಡಿದರೆ ಮುಂದಿನ ದಿನದಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಇಲ್ಲಿನ ಜನರಿಗೂ ವಿಮಾನದ ವ್ಯವಸ್ಥೆ ಸಿಗಲಿದೆ. ಸಿಗಲಿದೆ. ಪ್ರವಾಸ ಹಾಗೂ ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂದರು.

ವಿರೋಧ ಪಕ್ಷದದವರು ಈ ಯೋಜನೆಗೆ ಬೆಂಬಲಿಸಬೇಕು ಎಂದು ವಿನಂತಿಸಿದ ಅವರು, ಮಾಜಿ ಸಚಿವ ದೇಶಪಾಂಡೆ ಅವರು ಯೋಜನೆಗೆ ಸ್ವಾಗತಿಸಿದ್ದಾರೆ. ಅವರ ಅನುಭವ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಸಾಗರ ಮಾಲಾ ಜಾರಿಗೆ ಬರುವಂತೆ ಎಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡೋಣ. ಮೀನುಗಾರರ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡಲು ಪ್ರಯತ್ನ ಮಾಡುತ್ತೇವೆ. ಯೋಜನೆಗೆ ಸಂಬಂಧಿಸಿದಂತೆ ಪರಿಹಾರ  ಮೊದಲೇ ನೀಡಬೇಕಿತ್ತು. ಪರ್ಯಾನ ವ್ಯವಸ್ಥೆ ಮೊದಲೇ ಕಲ್ಪಿಸಲು ಮೊದಲ ಆಧ್ಯತೆ ನೀಡುತ್ತೇವೆ. ಸ್ಥಳೀಯ ಜನಪ್ರತಿನಿಧಿಗಳಾದ ಸತೀಶ ಸೈಲ್, ಆನಂದ ಅಸ್ನೋಟಿಕರ್ ಯೋಜನೆಗೆ ಬೆಂಬಲಿಸಬೇಕು ಎಂದು ಕೋರಿದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು