News Karnataka Kannada
Sunday, April 14 2024
Cricket
ಕರ್ನಾಟಕ

ಮೊಬೈಲ್ ಆ್ಯಪ್ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

Photo Credit :

ಮೊಬೈಲ್ ಆ್ಯಪ್ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಗುಂಡ್ಲುಪೇಟೆ: ಈ ಬಾರಿ ರಾಜ್ಯದಲ್ಲಿ ರೈತರೇ ಪರಿವರ್ತಿತ ಮೊಬೈಲ್ ಆ್ಯಪ್ ಉಪಯೋಗಿಸಿ ಸ್ವತಂತ್ರವಾಗಿ ಮುಂಗಾರು, ಹಿಂಗಾರು, ಬೇಸಿಗೆ ಹಂಗಾಮು ಬೆಳೆ ಸಮೀಕ್ಷೆ ನಡೆಸಲು ಸರಕಾರ ಅವಕಾಶ ಕಲ್ಪಿಸಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಈ ಕ್ರಮ ಜಾರಿ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ರೈತರು ತಮ್ಮ ಬೆಳೆ ಸಮೀಕ್ಷೆ ಮಾಡಿ, ಸ್ವತಂತ್ರವಾಗಿ ಅಪ್ ಲೋಡ್ ಮಾಡಲು ಆ. 11ರಿಂದ 24ರವರೆಗೆ ಸಮಯಾವಕಾಶ ನೀಡಲಾಗಿದೆ.

ಸ್ವತಂತ್ರವಾಗಿ ಅಪ್ ಲೋಡ್ ಸಾಧ್ಯವಾಗದಿದ್ದಲ್ಲಿ ಖಾಸಗಿಯವರ ಸಹ ಭಾಗಿತ್ವ ಪಡೆಯಬಹುದು. ಅದು ಅಸಾಧ್ಯವಾದರೆ ಸರಕಾರಿ ಸಿಬ್ಬಂದಿಯ ಸಹಾಯ ಕೇಳಬಹುದಾಗಿದೆ. ರೈತರು ಅಪ್‍ಲೋಡ್ ಮಾಡದೆ ಇದ್ದಲ್ಲಿ ಮಾತ್ರ ಕೃಷಿ ಇಲಾಖೆಯೇ ಖಾಸಗಿ ಅಥವಾ ಸರಕಾರಿ ಸಿಬ್ಬಂದಿಯ ಮೂಲಕ ಸಮೀಕ್ಷೆಗೆ ಸೂಚಿಸಲಿದೆ ಎಂದು ಹೇಳಲಾಗಿದೆ.

ಇನ್ನು ಮೊಬೈಲ್ ಆ್ಯಪ್ ಬಳಕೆ ಮಾಡುವುದು ಹೇಗೆ ಎಂಬುದನ್ನು ನೋಡುವುದಾದರೆ ಪಹಣಿಪತ್ರ ಹೊಂದಿರುವ ಜಮೀನಿನ ರೈತರು ಅಥವಾ ಮಾಲೀಕರು ಮೊಬೈಲ್‍ನಲ್ಲಿ ಪ್ಲೇ ಸ್ಟೋರ್ ಮೂಲಕ ಬೆಳೆ ಸಮೀಕ್ಷೆ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಸಮೀಕ್ಷೆಗೆ ಪೂರಕವಾಗಿ ಪಿ.ಆರ್. ಮೊಬೈಲ್ ಆ್ಯಪ್ ನ್ನು ಆಡಳಿತ ಸುಧಾರಣಾ ಇಲಾಖೆ ಸಿದ್ಧಪಡಿಸಿದೆ. ರೈತರೇ ನೇರವಾಗಿ ಅಪ್ ಲೋಡ್ ಮಾಡಲು ಅಥವಾ ಖಾಸಗಿಯವರು, ಸರಕಾರಿ ಸಿಬ್ಬಂದಿಯ ಸಹಾಯದಿಂದ ಆಯಾ ಜಮೀನಿನ ಬೆಳೆ ಮಾಹಿತಿ ಕ್ರೊಢೀಕರಿಸಿ ಅಪ್ ಲೋಡ್ ಮಾಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದರಿಂದ ರೈತರಿಗೆ ಯಾವ ರೀತಿಯ ಪ್ರಯೋಜನ ಸಿಗಲಿದೆ ಎಂಬುದನ್ನು ನೋಡುವುದಾದರೆ ಇದರಿಂದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ, ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ, ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಆರ್‍ಟಿಸಿಯಲ್ಲಿ ಬೆಳೆ ವಿವರ ದಾಖಲಾತಿ ಇತ್ಯಾದಿಗಳನ್ನು ಈ ಸಮೀಕ್ಷಾ ವರದಿ ಆಧರಿಸಿ ನಡೆಸಲಾಗುತ್ತದೆ.

ಸರ್ವೇ ನಂಬರ್, ಹಿಸ್ಸಾ ನಂಬರ್ ವಾರು ಬೆಳೆ ಮಾಹಿತಿ ಸಂಗ್ರಹ ಮತ್ತು ನಿಖರ ದತ್ತಾಂಶದ ಕೊರತೆ ನಿವಾರಿಸಲು 2018ರಲ್ಲಿ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ಆಯಾ ಗ್ರಾಮದಲ್ಲಿ ಪಿ.ಆರ್. ಮತ್ತು ಸರಕಾರಿ ಸಿಬ್ಬಂದಿ ಬಳಸಿ ನಡೆಸಲಾಗಿತ್ತು. 2019-20ರಲ್ಲಿ ಕೃಷಿ ಇಲಾಖೆಯ ಮೂಲಕ ಖಾಸಗಿ ಮತ್ತು ಇಲಾಖೆ ಸಿಬ್ಬಂದಿ ಬಳಸಿ ನಡೆಸಲಾಗಿತ್ತು. ಆದರೆ ಈ ಬಾರಿ ರೈತರೇ ಬೆಳೆ ಮಾಹಿತಿಯನ್ನು ಛಾಯಾ ಚಿತ್ರ ಸಹಿತ ದಾಖಲಿಸಿ, ಅಪ್ ಲೋಡ್ ಮಾಡಲು ಸರಕಾರ ಅನುಮತಿ ನೀಡಿದೆ. ಈಗಾಗಲೇ ಪುತ್ತೂರಿನಲ್ಲಿ ಆ. 10ರಿಂದಲೇ ಸಮೀಕ್ಷೆ ಆರಂಭಗೊಂಡಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಹಂಗಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸತೀಶ್ ಅವರು ಈ ಬಾರಿ ರೈತರೇ ಬೆಳೆ ಸಮೀಕ್ಷೆ ನಡೆಸಿ ಅಪ್ ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಆ. 9ರಂದು ಆ್ಯಪ್ ನ್ನು ಪ್ಲೇ ಸ್ಟೋರ್‍ ನಲ್ಲಿ ಬಿಡುಗಡೆಗೊಳಿಸಲಾಗಿರುವುದಾಗಿ ಹೇಳಿದ್ದಾರೆ. ಮೊಬೈಲ್ ಮೂಲಕ ಎಲ್ಲ ರೀತಿಯ ಕೆಲಸಗಳನ್ನು ಸರಳೀಕರಣಗೊಳಿಸಲಾಗುತ್ತಿದ್ದು, ರೈತರು ಕೂಡ ಈ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳುವುದು ಒಳ್ಳೆಯದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು