News Karnataka Kannada
Thursday, April 25 2024
Cricket
ಕರ್ನಾಟಕ

ಮೈದುಂಬಿ ಹರಿಯುತ್ತಿದ್ದಾಳೆ ತುಂಗೆ: ಮಂಟಪ ಮುಳುಗಡೆ

Photo Credit :

ಮೈದುಂಬಿ ಹರಿಯುತ್ತಿದ್ದಾಳೆ ತುಂಗೆ: ಮಂಟಪ ಮುಳುಗಡೆ

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ತುಂಗ ನದಿ ಭರ್ತಿಯಾಗಿದ್ದು ನದಿಯಲ್ಲಿನ ಮಂಟಪ ಮುಳುಗಡೆಯಾಗಿದೆ.

ಶೃಂಗೇರಿ ಮತ್ತು ತೀರ್ಥಹಳ್ಳಿಯ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಡ್ಯಾಂ ಸಹ ತುಂಬಿ ತುಳುಕುತ್ತಿದೆ. ಕಳೆದ ವರ್ಷ ಈ ಸಮಯದಲ್ಲಿ ಭರ್ಜರಿ ಮಳೆಯಿಂದಾಗಿ ಶಿವಮೊಗ್ಗದಲ್ಲಿ ನೆರೆಯ ಭೀತಿ ಎದುರಾಗಿತ್ತು. 1 ಲಕ್ಷ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಡ್ಯಾಂ ನಿಂದ ಹೊರಬಿಡಲಾಗಿತ್ತು. 

 

ಈ ಬಾರಿಯೂ ಮಳೆಯಿಂದಾಗಿ ಸಧ್ಯದ ಮಟ್ಟಿಗೆ ಡ್ಯಾಂ ನಿಂದ 43385 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇನ್ನೂ ಮಲೆನಾಡಿನಲ್ಲಿ ನಾಲ್ಕುದಿನ ಭರ್ಜರಿ ಮಳೆಯಾಗುವ ಸಂಭವವಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಗಾಜನೂರಿನ ಡ್ಯಾಂ ನಲ್ಲಿ ನೀರು ನಿರ್ವಾಹಣೆಯಲ್ಲಿ ಎಡವುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. 

 

ಒಂದು ವೇಳೆ ಡ್ಯಾಂ ನಲ್ಲಿ ಮಳೆಯ ನೀರು 55 ರಿಂದ 60 ಸಾವಿರ ಕ್ಯೂಸೆಕ್ ನೀರು ಸಂಗ್ರಹವಾದರೆ ಶಿವಮೊಗ್ಗದಲ್ಲಿ ನೆರೆ ಹಾವಳಿ ಸಂಭವನೀಯತೆ ಹೆಚ್ಚಿದೆ ಎಂಬ ಮಾತು ಕೇಳಿಬರುತ್ತಿದೆ.  ಅಣೆಕಟ್ಟು ನಿರ್ವಾಹಣೆ ಅಧಿಕಾರಿಗಳು ಈ ಮಳೆಗಾಲದಲ್ಲಿ ಡ್ಯಾಂ ತುಂಬಿಕೊಂಡಂತೆ ನೀರನ್ನ ಹಂತ ಹಂತವಾಗಿ ಬಿಡುಗಡೆ ಮಾಡಿದ್ದರೆ ಕಳೆದ ಬಾರಿ ಉಂಟಾದ ನೆರೆಯನ್ನ  ತಪ್ಪಿಸಬಹುದು ಎಂಬುದು ಸಾರ್ವಜನಿಕರ ಮಾತಾಗಿದೆ.

 

ಕಳೆದ ವರ್ಷ ಒಮ್ಮೆಲೆ ಡ್ಯಾಂ ನಿಂದ 60 -70 ಕ್ಯೂಸೆಕ್ ಬಿಟ್ಟ ಪರಿಣಾಮ ಶಿವಮೊಗ್ಗದಲ್ಲಿ ನೆರೆ ಹಾವಳಿ ಉಂಟಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವಂತಹ ಮಾತಾಗಿದೆ. ತುಂಗಾ ಡ್ಯಾಂ ರಾಜ್ಯದಲ್ಲಿಯೇ ಅತಿ ಸಣ್ಣ ಡ್ಯಾಂ ಆಗಿರುವುದರಿಂದ ಒಂದು ಮಳೆಗೆ ಭರ್ತಿ ಆಗಲಿದೆ. ತೀರ್ಥಹಳ್ಳಿ, ಶೃಂಗೇರಿಯಲ್ಲಿ ಸತತ 10 ತಾಸಿನ ಮಳೆಯಾದರೆ ಸಾಕು ಗಾಜನೂರಿನ ಡ್ಯಾಂ ಭರ್ತಿಯಾಗಲಿದೆ. 

 

ಈ ಹಿನ್ನಲೆಯಲ್ಲಿ  ಆಗಸ್ಟ್ ಆರಂಭಕ್ಕೂ ಮೊದಲು ಡ್ಯಾಂ ನೀರು ಖಾಲಿ ಮಾಡಿಕೊಂಡಿದ್ದರೆ ಶಿವಮೊಗ್ಗದಲ್ಲಿ ನೆರೆಹಾವಳಿ ತಪ್ಪಿಸಬಹದು ಎಂಬುದು ಜನರ ಅಭಿಪ್ರಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು