News Karnataka Kannada
Wednesday, April 24 2024
Cricket
ಕರ್ನಾಟಕ

ಮೀನುಗಾರಿಕೆ ಇಲಾಖೆಗಳನ್ನು ಒಂದೇ ಸೂರಿನಡಿ ತರಲು ಚಿಂತನೆ -ಸಚಿವ ಸಿ.ಟಿ.ರವಿ

Photo Credit :

ಮೀನುಗಾರಿಕೆ ಇಲಾಖೆಗಳನ್ನು ಒಂದೇ ಸೂರಿನಡಿ ತರಲು ಚಿಂತನೆ -ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು: ಮೀನುಗಾರಿಕೆ ಇಲಾಖೆಗಳನ್ನು ಒಂದೇ ಖಾತೆಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರವಾಸೋದ್ಯಮ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿತಿಳಿಸಿದರು.
 
ಅವರು ಇಂದು ನರಸಿಂಹರಾಜಪುರ ತಾಲ್ಲೂಕಿನ ದೀಪ್ತಿ ಸರ್ಕಲ್ ಬಳಿ ನಿರ್ಮಿಸಲಾದ ರೂ. ೬೦ ಲಕ್ಷ ವೆಚ್ಚದ ನೂತನ ಕೃಷಿ ಇಲಾಖೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
 
ಸರ್ಕಾರವು ರೈತರಿಗೆ ಸಮಗ್ರ ಕೃಷಿಗೆ ಅನುಕೂಲವಾಗುವಂತೆ  ಮಾಡಲು ಕೃಷಿ, ತೋಟಗಾರಿಕೆ, ಮೀನುಗಾರಿಕೆ , ಪಶುಸಂಗೋಪನೆಯ ಈ ನಾಲ್ಕು ಇಲಾಖೆಗಳನ್ನು ಒಂದೇ ಇಲಾಖೆಗೆ ಒಳಪಡಿಸಲು ವರದಿ ನೀಡುವಂತೆ ಉಪ ಸಮಿತಿ ರಚಿಸಲಾಗಿದೆ. ರೈತರು ಒಂದೇ ಬೆಳೆ ಬೆಳೆಯಬಾರದು, ಬೆಲೆ ಏರಿಕೆ ಕಂಡಾಗ ಎಲ್ಲರೂ ಅದೇ ಬೆಳೆ ಬೆಳೆಯುತ್ತಾರೆ. ಪ್ರತಿ ವಿಧದ ಬೆಳೆಗಳನ್ನು ಬೆಳೆದಾಗ ಬೆಲೆ ಕುಸಿತ ಕಂಡಾಗ ಆರ್ಥಿಕವಾಗಿ ನಷ್ಟವಾಗುವುದಿಲ್ಲ. ನಾಲ್ಕು ಇಲಾಖೆಗಳು ಒಟ್ಟಾಗಿ ರೈತರಿಗೆ ಸಮಗ್ರ ಬೆಳೆ ಬೆಳೆಯುವ ಬಗ್ಗೆ ಅರಿವು ಮೂಡಿಸುವ ಮೂಲಕ ಕಳೆದುಕೊಂಡಿರುವ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದರು.
 
ಫಸಲು ಭೀಮಾ ಯೋಜನೆಯು ರೈತರಿಗೆ ಮಾರಕವಲ್ಲ ಜಿಲ್ಲೆಯಲ್ಲಿ ಒಟ್ಟು ೪೬,೩೨೧  ರೈತರು ರೂ. ೧೪ ಕೋಟಿ ೬೬ ಲಕ್ಷ ಪ್ರೀಮಿಯಂ ಹಣ ಕಟ್ಟಿದ್ದರು ಅವರಿಗೆ ೧೦೬ ಕೋಟಿ, ೬ ಲಕ್ಷ ರೂ ಪರಿಹಾರ ಬಂದಿದೆ. ಕೃಷಿ ಇಲಾಖೆಯ ಮೂಲಕ ೩ ವರ್ಷದಲ್ಲಿ ೧೬,೭೦೭ ರೈತರು ರೂ.  ೨೭೧ ಕೋಟಿ ಪ್ರೀಮಿಯಂ ಕಟ್ಟಿದ್ದರು. ರೂ. ೫೫೨ ಕೋಟಿ ಪರಿಹಾರ ಬಂದಿದೆ ಎಂದ ಅವರು  ರೈತರ ಪಹಣಿಯಲ್ಲಿ ಬೆಳೆ ಕಾಲಂ ಸರಿಯಾಗಿದ್ದರೆ ಫಸಲು ಭೀಮಾ ಯೋಜನೆ ಒಳ್ಳೆಯ ಯೋಜನೆಯಾಗಲಿದೆ. ಅತಿ ವೃಷ್ಟಿಯಿಂದ ಹಾನಿಯಾದರೆ ರೈತರಿಗೆ ಪರಿಹಾರ ಬರುವುದು ಕಡಿಮೆ ಆದರೆ, ಫಸಲು ಭೀಮಾ ಯೋಜನೆಯಡಿ ಪ್ರೀಮಿಯಂ ಹಣ ಕಟ್ಟಿದರೆ ಹೆಚ್ಚು ಪರಿಹಾರದೊರೆಯಲಿದೆಎಂದರು.
 
ಅತಿವೃಷ್ಠಿ, ಬರಗಾಲ, ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ .ಮಾರುಕಟ್ಟೆ ಆಧಾರಿತ ಬೆಲೆ ನಿಗದಿ ಮಾಡುವುದೇ ಇದಕ್ಕೆ ಪರಿಹಾರವಾಗಲಿದೆ. ಈಗಾಗಲೇ ಸರ್ಕಾರವು ೨೮ ಬೆಳೆಗೆ ಬೆಂಬಲ ಬೆಲೆ ನೀಡುತ್ತಿದ್ದು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತ ವಿರೋದಿ ಅಲ್ಲ ಬದಲಾಗಿ ರೈತ ಸ್ನೇಹಿಯಾಗಲಿದೆ ಇಲ್ಲಿ ಯಾರೂ ಬೇಕಾದರೂ ರೈತರ ಮನೆ ಬಾಗಿಲಿಗೆ ಬಂದು ರೈತರ ಬೆಳೆಯನ್ನು ಖರೀದಿ 
 
ಮಾಡಬಹುದಾಗಿದೆ ಇದಕ್ಕೆ ಯಾವ ನಿರ್ಬಂದವಿಲ್ಲ. ದಲ್ಲಾಳಿಗಳಿಂದ ರೈತರನ್ನು ಪಾರು ಮಾಡಲು ಸರ್ಕಾರ ಸಣ್ಣಪ್ರಯತ್ನಮಾಡಿದೆಎಂದರು.
 
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ  ರೂ. ೬೦ ಲಕ್ಷ ವೆಚ್ಚದ ನೂತನ ಕೃಷಿ ಇಲಾಖೆ ಕಟ್ಟಡಕ್ಕೆ ಗೋದಾಮು, ಕಾಂಪೌಂಡು ಸೇರಿ ಇನ್ನೂ ೫೨ ಲಕ್ಷ ಅನುದಾನ ಬೇಕಾಗಬಹುದು. ಸರ್ಕಾರವು ಹಣ ಮಂಜೂರು ಮಾಡಿಸಿ ಕೊಡಬೇಕು. ಸರ್ಕಾರಕ್ಕೆ ರೈತರು ಹೆಚ್ಚು ತೆರಿಗೆ ಕಟ್ಟುತ್ತಿದ್ದು ಸರ್ಕಾರವು ರೈತರ ನೆರವಿಗೆ ಧಾವಿಸಬೇಕು. ಹಲವು ಸಹಾಯ ಧನವನ್ನು ಸರ್ಕಾರ ನಿಲ್ಲಿಸಿದೆ .ರೈತರು ಈ ದೇಶದ ಆಸ್ತಿ ಎಂದರು.
 
ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರು ಮಾತನಾಡಿ, ಹಲವು ವರ್ಷಗಳ ಸಂಘರ್ಷದ ನಡುವೆ ಕೃಷಿ ಇಲಾಖೆ ಕಟ್ಟಡ ಉದ್ಘಾಟನೆಗೊಂಡಿದ್ದು ಸಂತಸ ತಂದಿದೆ. ಹಿಂದೆ ಮಾಜಿ ಸಚಿವ ಗೋವಿಂದೇಗೌಡರ ಕಾಲದಲ್ಲಿ  ಕೃಷಿ ಇಲಾಖೆಗಾಗಿ ಜಾಗ ಕಾಯ್ದಿರಿಸಲಾಗಿತ್ತು ಎಂದರು.
 
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ.  ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಸದಾಶಿವ, ಚಂದ್ರಮ್ಮ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಿರುಮಲೇಶ್. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು