News Karnataka Kannada
Monday, April 22 2024
Cricket
ಕರ್ನಾಟಕ

ಮಾಲೀಕನ ದೌರ್ಜನ್ಯಕ್ಕೆ ಬೀದಿ ಪಾಲಾದ ಜಾರ್ಖಂಡ್ ಕಾರ್ಮಿಕರು

Photo Credit :

ಮಾಲೀಕನ ದೌರ್ಜನ್ಯಕ್ಕೆ ಬೀದಿ ಪಾಲಾದ ಜಾರ್ಖಂಡ್ ಕಾರ್ಮಿಕರು

ಗುಂಡ್ಲುಪೇಟೆ: ತೋಟದಲ್ಲಿ ಕೂಲಿ ಕೆಲಸ ಮಾಡಿದ ಕೂಲಿ ಹಣ ಕೇಳಿದಕ್ಕೆ ತೋಟದ ಮಾಲಿಕ ಗನ್ ತೋರಿಸಿ ಬೆದರಿಸಿದ್ದರಿಂದ ಉತ್ತರ ಭಾರತದ ಜಾರ್ಖಂಡ್ ರಾಜ್ಯದ ನಿವಾಸಿಗಳು ಬೀದಿ ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೇರಳ ರಾಜ್ಯದ ಕ್ಯಾಲಿಕಟ್‍ನ ತೋಜೋ ಅಬ್ರಹಾಂ ಎಂಬುವವರು ತಮ್ಮ  ತೋಟದಲ್ಲಿ ಕಳೆದ ಏಳೆಂಟು ತಿಂಗಳಿನಿಂದ  ಜಾರ್ಖಂಡ್ ಮೂಲದ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಕಾರ್ಮಿಕರು ತಮ್ಮ ಊರಿಗೆ ಹೋಗಲು ಮಾಲೀಕರನ್ನು ಹಣ ಕೇಳಿದಾಗ, ಮಾಲೀಕ ತೋಜೋ ಇಬ್ರಾಹಿಂ ಕಾರ್ಮಿಕರಿಗೆ ಗನ್ ತೋರಿಸಿ ಬೆದರಿಸಿದ್ದಲ್ಲದೆ ತೋಟದಿಂದ ಹೊರಹಾಕಿದ್ದಾರೆ.

ತೋಟದಿಂದ ಹೊರದಬ್ಬಿದ್ದರಿಂದ ಜಾರ್ಖಂಡ್ ರಾಜ್ಯದ ರಾಂಚಿಯ ನವೀನ್ ಆತನ ಪತ್ನಿ ಆಲಿಸಾಬಿ ಹಾಗೂ ಒಂದು ವರ್ಷದ ಮಗು, ವಾಟರ್ ಮೆಲಾನ್ ಎಂಬ ಕಾರ್ಮಿಕರು ಈಗ ಎತ್ತಲೂ ಹೋಗಲಾಗದೆ ಬೀದಿ ಪಾಲಾಗಿದ್ದಾರೆ. ತೋಟದಿಂದ ಹೊರಬಂದಂತಹ ಕಾರ್ಮಿಕರನ್ನು ನೋಡಿ ಮದ್ದೂರು ಗ್ರಾಮಸ್ಥರು ಅವರಿಂದ ವಿಷಯ ತಿಳಿದು ಊರಿಗೆ ಕರೆತಂದು ಹಾಲಿನ ಡೇರಿಯ ಮುಂದೆ ಉಳಿಯಲು ಅವಕಾಶ ನೀಡಿದ್ದಾರೆ. ತಮ್ಮ ಮನೆಗಳಿಂದ ಊಟ, ಮಗುವಿಗೆ  ಹಾಲು ಬಿಸ್ಕೆಟ್ ಮಲಗಲು ಟಾರ್ಪಲ್ ನೀಡಿದ್ದಾರೆ.

ಕರ್ನಾಟಕ ಕೇರಳ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮದ್ದೂರು ಸಮೀಪದ ತನ್ನ ತೋಟದಲ್ಲಿ ಕೆಲಸ ಮಾಡಲು ಕೇರಳದ ಏಜೆಂಟರ ಮೂಲಕ ಜಾರ್ಖಂಡ್ ಮೂಲದ ಮೂವರು ಕಾರ್ಮಿಕರನ್ನು ನೇಮಿಸಿಕೊಂಡಿದ್ದು ಪುರುಷರಿಗೆ 12ಸಾವಿರ ಹಾಗೂ ಮಹಿಳೆಗೆ 5ಸಾವಿರ ಸಂಬಳ ನೀಡುವುದಾಗಿ ನೇಮಕ ಮಾಡಿಕೊಂಡಿದ್ದು, ಅಷ್ಟೋ ಇಷ್ಟೋ ಹಣದಿಂದ ತನ್ನ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ತಾವು ಊರಿಗೆ ಹೋಗಿ ಬರಲು ಕೂಲಿ ಹಣ ಕೇಳಿದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ಮಾಲೀಕ ಮೂವರು ಕಾರ್ಮಿಕರ ಆಧಾರ್ ಕಾರ್ಡ್, ಬ್ಯಾಂಕ್ ಎಟಿಎಂ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಕಸಿದುಕೊಂಡು ಗನ್ ತೋರಿಸಿ ತೋಟದಿಂದ ಹೊರಹಾಕಿದ್ದಾನೆ ಎಂದು ಕಾರ್ಮಿಕರು ದೂರುತ್ತಿದ್ದಾರೆ.

ಇನ್ನು ಈ ಬಗ್ಗೆ ದೂರು ನೀಡಲು ಕಾರ್ಮಿಕರು ಗುಂಡ್ಲುಪೇಟೆ ಪಟ್ಟಣದ ಠಾಣೆಗೆ ಹೋಗಲು ಮುಂದಾಗುತ್ತಿದ್ದಂತೆ ತಾನೇ ಪೊಲೀಸರಿಗೆ ಕರೆಮಾಡಿ ತನ್ನ ತೋಟದಲ್ಲಿದ್ದ ಕಾರ್ಮಿಕರು ನಕ್ಸಲ್ ಹಿನ್ನೆಲೆಯವರಾಗಿದ್ದು ಗಾಂಜಾ ಸೇವಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರಿಂದ ಪಟ್ಟಣದ ಪೊಲೀಸರು ಕಾರ್ಮಿಕರ ದೂರನ್ನು ಸ್ವೀಕರಿಸದೆ ಮೌನವಹಿಸಿದ್ದಾರೆ.

ಮದ್ದೂರು ಸಮೀಪ ತೋಜೋ ಇಪ್ಪತ್ತು ವರ್ಷದ ಹಿಂದೆ ಕೇವಲ 35 ಎಕರೆ ಭೂಮಿ ಖರೀದಿ ಮಾಡಿಕೊಂಡು, ಸುತ್ತಲಿನ ಗ್ರಾಮ ಠಾಣೆಗೆ ಸೇರಿದ ಹತ್ತು ಎಕರೆ ಭೂಮಿ, ಸಮೀಪದ ಅರಣ್ಯ ಭೂಮಿ ಹಾಗೂ ಗಿರಿಜನ ಕಾಲೋನಿಯ ಭೂಮಿಯನ್ನು ಅತಿಕ್ರಮಿಸಿ ಕಾರ್ಮಿಕರು ಹಾಗೂ ಸುತ್ತಮುತ್ತಲ ಗ್ರಾಮದ ಸಾರ್ವಜನಿಕರ ಮೇಲೆ ಸುಳ್ಳು ದೂರು ನೀಡಿ ತನ್ನ ಪ್ರಭಾವ ಬಳಸಿ ದೌರ್ಜನ್ಯವೆಸಗುತ್ತಿದ್ದು, ಈತನ ಗನ್ ಲೈಸೆನ್ಸ್ ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಸದ್ಯ ಸಂತ್ರಸ್ಥ ಕಾರ್ಮಿಕರಿಗೆ ಅವರ ದಾಖಲಾತಿಗಳು ಹಾಗೂ ಕೂಲಿ ನೀಡಿ ಅವರ ಊರಿಗೆ ಕಳುಹಿಸಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ ಅಲ್ಲದೆ, ಕಾರ್ಮಿಕರು ನಕ್ಸಲ್ ಹಿನ್ನೆಲೆ ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದರೆ ಅವರನ್ನು ಏಳು ತಿಂಗಳಿನಿಂದ ತೋಟದಲ್ಲಿ ಇಟ್ಟುಕೊಂಡಿದ್ದು ಏಕೆ? ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು