News Karnataka Kannada
Monday, April 22 2024
Cricket
ಕರ್ನಾಟಕ

ಮಹಾರಾಷ್ಟದಲ್ಲಿ ಒಳಹರಿವು ಹೆಚ್ಚಳ: ಕೃಷ್ಣ ನದಿಯ ಗ್ರಾಮದ ಜನರು ಎಚ್ಚರಿಕೆ ವಹಿಸಲು ಮನವಿ

Photo Credit :

ಮಹಾರಾಷ್ಟದಲ್ಲಿ ಒಳಹರಿವು ಹೆಚ್ಚಳ: ಕೃಷ್ಣ ನದಿಯ ಗ್ರಾಮದ ಜನರು ಎಚ್ಚರಿಕೆ ವಹಿಸಲು ಮನವಿ

ರಾಯಚೂರು: ಪ್ರವಾಹ ಬೀತಿ ಎದುರಿಸುತ್ತಿರುವ ನಾರಾಯಣಪೂರ ಅಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. 

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನದಿ ಪಾತ್ರದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿರುತ್ತದೆ. ಆಲಮಟ್ಟಿ ಜಲಾಶಯದಿಂದ ನಾರಾಯಣಪೂರು ಜಲಾಶಯಕ್ಕೆ ಸುಮಾರು ೧೫,೦೦೦ ಕ್ಯೂಸೆಕ್ ಒಳಹರಿವು ಇದ್ದು, ಒಳಹರಿವು ಇನ್ನೂ ಹೆಚ್ಚಾಗುವ ಸಂಭವ ಇರುತ್ತದೆ. ಹಾಗೂ ಹವಾಮಾನ ಇಲಾಖೆಯ ವರದಿಯಂತೆ ಮುಂದಿನ ಮೂರು ದಿನಗಳಲ್ಲಿ ಕೃಷ್ಣ ನದಿ ಪಾತ್ರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿರುತ್ತಾರೆ.

ಆದರಿಂದ, ನಾರಾಯಣಪೂರು ಅಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ, ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಜಾಗ್ರತೆಯಿಂದ ಇರಲು ಹಾಗೂ ಸುರಕ್ಷತೆಗಾಗಿ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖರ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು