News Karnataka Kannada
Friday, April 12 2024
Cricket
ಕರ್ನಾಟಕ

ಮಸೀದಿ ಹೊರಗೆ ಬೋರ್ಡ್‌ ಹಾಕಿ ಒಳಗೆ ಪಾಠ ; ಮೊಕದ್ದಮೆ ದಾಖಲು

Photo Credit :

 ಮಸೀದಿ ಹೊರಗೆ ಬೋರ್ಡ್‌ ಹಾಕಿ ಒಳಗೆ ಪಾಠ ; ಮೊಕದ್ದಮೆ ದಾಖಲು

ಮಡಿಕೇರಿ : ಕೊರೊನಾ ಎರಡನೇ ಅಲೆ ತಡೆ ಗಟ್ಟಲು ಸರ್ಕಾರ ವಿವಿಧ ರೀತಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಂಡಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.
ಆದರೆ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿಯ ಅನ್ವರುಲ್ ಹುದಾ ವಿದ್ಯಾ ಸಂಸ್ಥೆ ಹಾಗೂ ಮಸೀದಿಯ ಆಡಳಿತ ಮಂಡಳಿ ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲದಂತೆ ಕಾನೂನಿನ ಕಣ್ಣುತಪ್ಪಿಸಿ ಮಸೀದಿಯ ಒಳಾಂಗಣ ದಲ್ಲಿ ಸುಮಾರು 80 ಮಂದಿಗೆ ಪಾಠ, ಪ್ರವಚನ ಬೋಧಿಸುವ ಕೆಲಸ ಮಾಡಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಮಂಗಳವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ ಮಸೀದಿಯ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಮಸೀದಿಯ ಹೊರಭಾಗದಲ್ಲಿ ಕೋವಿಡ್-19 ನಿಯಮ ಪಾಲಿಸಲು ಮಸೀದಿಯನ್ನು ಮುಚ್ಚಲಾಗಿದೆ ಎಂಬ ನಾಮಫಲಕ ಅಳವಡಿಸಿ ಒಳಭಾಗದಲ್ಲಿ ಪ್ರವಚನ ನಡೆಸುತ್ತಿದ್ದರು. ಇಲ್ಲಿನ ವಿದ್ಯಾರ್ಥಿಗಳೂ ಮಾಸ್ಕ್, ಧರಿಸದೇ, ಸಾಮಾಜಿಕ ಅಂತರವನ್ನು ಕಾಪಾಡದೆ ಪ್ರವಚನದಲ್ಲಿ ಭಾಗವಹಿಸಿರುವುದು ತಹಶೀಲ್ದಾರ್ ಭೇಟಿಯ ವೇಳೆ ಬೆಳಕಿಗೆ ಬಂದಿದೆ.ಅನಾಥ ಮಕ್ಕಳು ಇರುವುದರಿಂದ ಇವರನ್ನು ಎಲ್ಲಿಯೂ ಕಳುಹಿಸಲು ಸಾಧ್ಯವಾಗಲಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.
ಅನ್ವರಲ್ ಹುದಾ ವಿದ್ಯಾಸಂಸ್ಥೆ ಹಾಗೂ ಮಸೀದಿಯಲ್ಲಿ 50 ರಿಂದ 60 ಮಂದಿ ವಯಸ್ಕರು, 15 ರಿಂದ 20 ವಿದ್ಯಾರ್ಥಿಗಳು ಪ್ರವಚನದಲ್ಲಿ ಭಾಗವಹಿಸಿ ಕೋವಿಡ್ – 19 ನಿಯಮ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 269 ಕಲಂ 51 ಬಿ. ಇದರಡಿಯಲ್ಲಿ (ವಿಪತ್ತು ನಿರ್ವಹಣಾ ಕಾಯ್ದೆ) ಆಡಳಿತದ ಮಂಡಳಿಯ ಅಬ್ದುಲ್ ರಶೀದ್, ಅಶ್ರಫ್ ಹಾಗೂ ಸೆಫ್ಫಿಯಾನ್ ಎಂಬವರ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು