News Karnataka Kannada
Thursday, April 25 2024
Cricket
ಕರ್ನಾಟಕ

ಮಲೆಮಹದೇಶ್ವರ ಈಗಲೂ ಕೋಟ್ಯಧಿಪತಿಯೇ..

Photo Credit :

ಮಲೆಮಹದೇಶ್ವರ ಈಗಲೂ ಕೋಟ್ಯಧಿಪತಿಯೇ..

ಚಾಮರಾಜನಗರ: ಕೊರೊನಾ ಭೀತಿಯ ನಡುವೆ ಮತ್ತೆ 82 ದಿನಗಳಲ್ಲಿ ಮಲೆ ಮಹದೇಶ್ವರ ಕೋಟ್ಯಧಿಪತಿಯಾಗಿಯೇ ಮುಂದುವರೆದಿರುವುದು ಗಮನಾರ್ಹವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ ನಡೆದಿದ್ದು, ಹುಂಡಿಯಲ್ಲಿ ಒಂದು ಕೋಟಿ ನಲವತ್ತೇಳು ಲಕ್ಷದ ಮುನ್ನೂರ ನಲವತ್ತೆಂಟು ರೂ ಸಂಗ್ರಹವಾಗಿದೆ. ಹದಿನೇಳು ಗ್ರಾಂ ಚಿನ್ನ, ಒಂಬೈನೂರ ಎಂಬತ್ತೈದು ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದೆ.

ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ಸಾಲೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿರವರ ಉಪಸ್ಥಿತಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗಳ ಮೇಲುಸ್ತುವಾರಿಯಲ್ಲಿ ನಡೆಯಿತು.  ಉಪ-ಕಾರ್ಯದರ್ಶಿ ಬಸವರಾಜು ಅವರ ಮಾರ್ಗದರ್ಶನದಲ್ಲಿ ಅಭಿಯಂತರರೊಡಗೂಡಿ ಎಲ್ಲ ಸಿಬ್ಬಂದಿ ಹುಂಡಿ ಎಣಿಕೆ ಮಾಡಿದರು. ಈ ಹಿಂದೆ ಜೂನ್  26 ರಂದು ಹುಂಡಿ ಎಣಿಕೆ ನಡೆದಿತ್ತು. ಆ ನಂತರ  82 ದಿನಗಳ ಬಳಿಕ ಹುಂಡಿ ತೆರೆಯಲಾಯಿತು.

ಈ ಹಿಂದೆ ಒಂದು ತಿಂಗಳಿಗೆ ಸುಮಾರು 1.5 ಕೋಟಿ ರೂ. ಸಂಗ್ರಹವಾಗುತ್ತಿದ್ದು, ಇದೀಗ 82 ದಿನಗಳಿಗೆ ಸುಮಾರು 1.40 ಕೋಟಿ ಸಂಗ್ರಹವಾಗಿರುವುದು ತೀರಾ ಕಡಿಮೆಯೇ ಆದರೂ ಕೊರೋನಾದ ನಡುವೆಯೂ ಇಷ್ಟೊಂದು ಹಣ ಸಂಗ್ರವಾಗಿರುವುದು ಮಲೆಮಹದೇಶ್ವರನ ಮೇಲೆ ಭಕ್ತರಿಗೆ ಇರುವ ಭಕ್ತಿಯೇ ಕಾರಣ ಎಂದರೆ ತಪ್ಪಾಗಲಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು