News Karnataka Kannada
Wednesday, April 17 2024
Cricket
ಕರ್ನಾಟಕ

ಮತೀಯ ಸಂಘಟನೆಗಳ ನಿಷೇಧಕ್ಕೆ ಬಿಜೆಪಿ ಆಗ್ರಹ

Photo Credit :

ಮತೀಯ ಸಂಘಟನೆಗಳ ನಿಷೇಧಕ್ಕೆ ಬಿಜೆಪಿ ಆಗ್ರಹ

ಪಿರಿಯಾಪಟ್ಟಣ: ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವ ಎಸ್‍ಡಿಪಿಐ ಮತ್ತು ಪಿಎಫ್‍ಐ ಮಾದರಿಯ ಮತೀಯ ಸಂಘಟನೆಗಳನ್ನು ನಿಷೇಧಿಸಿ ಸರ್ಕಾರವು ಶಾಂತಿಯ ವಾತಾವರಣ ನಿರ್ಮಾಣ ಮಾಡಬೇಕು ಎಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಾ.ಬಾಬು ಪ್ರಕಾಶ್ ಬಾಬು ರಾವ್ ಒತ್ತಾಯಿಸಿದರು.

ತಾಲೂಕು ಬಿಜೆಪಿ ಘಟಕದ ವತಿಯಿಂದ ತಾಲೂಕು ಆಡಳಿತ ಕಚೇರಿಯ ಮುಂಭಾಗ ರಾಜ್ಯದಲ್ಲಿ ಮತೀಯ ಸಂಘಟನೆಗಳ ನಿಷೇಧ ಮಾಡಬೇಕು ಮತ್ತು ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್  ನಿವಾಸದ ಮೇಲಿನ ದಾಳಿಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಎಸ್‍ಡಿಪಿಐ ಮತ್ತು ಪಿಎಫ್‍ಐ ಮಾದರಿಯ ಮತೀಯ ಸಂಘಟನೆಗಳು  ಕೋಮು ಪ್ರಚೋದನಾ ದಾಳಿಗಳನ್ನು ಮಾಡುತ್ತಿದ್ದು, ಅತ್ಯಾಚಾರ ಮಾಡುವುದು, ಲವ್ ಜಿಹಾದ್ ಮತ್ತಿತ್ತರ ದುಷ್ಕೃತ್ಯಗಳನ್ನು ಮಾಡುತ್ತಾ ದೇಶದಲ್ಲಿ ಅಶಾಂತಿ ನೆಲೆಸಿ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ ಇದಕ್ಕೆ ಅನೇಕ ಘಟನೆಗಳು ಸಾಕ್ಷಿಯಿದೆ.

ಮಂಗಳವಾರ ರಾತ್ರಿ ಇದೇ ಸಂಘಟನೆಯ ಕಾರ್ಯಕರ್ತರು ವಿನಾ ಕಾರಣ ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್  ನಿವಾಸದ ಮೇಲಿನ ದಾಳಿ ಮನೆ ಸೇರಿದಂತೆ ಇನ್ನಿತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿದೆ. ಇದನ್ನು ತಡೆಯಲು ಹೋದ ಪೊಲೀಸರ ಮೇಲೆ ದಾಳಿ ಮಾಡಿ ಠಾಣೆಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದಾರೆ.

ಇದಲ್ಲದೆ ರಾಜ್ಯದಲ್ಲಿ ನಡೆದಿರುವ ಹಲವಾರು ಹಿಂದೂ ಕಾರ್ಯಕರ್ತರ ಮೇಲಿನ ದಾಳಿ, ಹತ್ಯೆ ಮತ್ತಿತರ ಸಮಾಜಘಾತುಕ ಕೃತ್ಯಗಳ ಹಿಂದೆ ಎಸ್‍ಡಿಪಿಐ ಸೇರಿದಂತೆ ಇತರೆ ಸಂಘಟನೆಗಳು ನೇರವಾಗಿ ಭಾಗಿಯಾಗಿರುವುದು ದೃಢಪಟ್ಟಿದೆ. ಸಿಮಿ ಸಂಘಟನೆ ದೇಶದಲ್ಲಿ ನಿಷೇಧವಾದ ನಂತರ ಅಲ್ಲಿನ ಕಾರ್ಯಕರ್ತರು ಬೇರೆ ಬೇರೆ ಸಂಘಟನೆಯ ಹೆಸರಿನಲ್ಲಿ ಸಕ್ರಿಯರಾಗಿ ದೇಶದಲ್ಲಿ  ಭಯೋತ್ಪಾದನಾ ಹಾಗೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಡಿನಲ್ಲಿ ಅಶಾಂತಿಯ ನಿರ್ಮಾಣ ಮಾಡಲು ಹೊರಟಿದ್ದಾರೆ. 

ಇದರಿಂದಾಗಿ ಸಮಾಜದಲ್ಲಿನ ಅಶಾಂತಿಯನ್ನು ಕದಡುವ ಕೆಲಸವನ್ನು ಮಾಡುತ್ತಾ ತನ್ನ ಅಟ್ಟಹಾಸವನ್ನು ಉಗ್ರ ಸಂಘಟನೆಗಳು ಮೆರೆಯುತ್ತಿದೆ. ಇದೇ ರೀತಿಯ ವಾತಾವರಣ ಮುಂದುವರೆದರೆ ರಾಜ್ಯದಲ್ಲಿ ಅಭಿವೃದ್ದಿಗೆ ತಡೆಯಾಗುತ್ತದೆ ಜೊತೆಗೆ ಸಾಮಾಜಿಕವಾದ ಶಾಂತಿಯ ವ್ಯವಸ್ಥೆಯೂ ಕೂಡ ಹಾಳಾಗುತ್ತಿದೆ.

ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್‍ಡಿಪಿಐ ಮತ್ತು ಪಿಎಫ್‍ಐ ಮಾದರಿಯ ಮತೀಯ ಸಂಘಟನೆಗಳನ್ನು ನಿಷೇಧಿಸಿ ಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಮನವಿ ಪತ್ರವನ್ನು ಶಿರಸ್ತೇದಾರ್ ಶಕೀಲಾ ಬಾನು ಮೂಲಕ ರಾಜ್ಯಪಾಲರಿಗೆ ತಲುಪಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಚ್.ಸಿ.ಬಸವರಾಜು, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಾಮ ನಿರ್ದೇಶಕ ಆರ್.ಟಿ.ಸತೀಶ್, ಮುಖಂಡರಾದ ಕೌಲನಳ್ಳಿ ಸೋಮಶೇಖರ್, ವಿಕ್ರಂರಾಜ್, ಶಿವರಾಂ, ವಕೀಲ ಕೃಷ್ಣ ಪ್ರಸಾದ್, ಟಿ.ರಮೇಶ್, ಕುಮಾರ ಸ್ವಾಮಿ, ಸ್ವಾಮಿ ಮಾಗಳಿ ಸೇರಿದಂತೆ ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು