News Karnataka Kannada
Thursday, April 18 2024
Cricket
ಕರ್ನಾಟಕ

ಮಡಿಕೇರಿ: 7 ಕ್ಕೂ ಅಧಿಕ ಜಾನುವಾರುಗಳಿಗೆ ವಿಷವಿಕ್ಕಿ ಹತ್ಯೆ

Photo Credit :

ಮಡಿಕೇರಿ: 7 ಕ್ಕೂ ಅಧಿಕ ಜಾನುವಾರುಗಳಿಗೆ ವಿಷವಿಕ್ಕಿ ಹತ್ಯೆ

ಮಡಿಕೇರಿ ; ೭ ಕ್ಕೂ ಅಧಿಕ ಜಾನುವಾರುಗಳಿಗೆ ವಿಷವಿಕ್ಕಿ ಕೊಂದಿರುವ ಘಟನೆ ಸೋಮವಾರಪೇಟೆ ಸಮೀಪದ ಕೋವರ್‌ ಕೊಲ್ಲಿಯ ಟಾಟಾ ಕಾಫಿ ತೋಟದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಗ್ರಾಮಸ್ಥರಿಗೆ ತೋಟದಲ್ಲಿ ಕೊಳೆಯುತಿದ್ದ ಜಾನುವಾರುಗಳ ಕಳೇಬರಗಳು ಸಿಕ್ಕಿವೆ.

ಈ ಕುರಿತು ಪೋಲೀಸರಿಗೆ ದೂರು ನೀಡಿದ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಸಬ್‌ ಇನ್ಸ್‌ಪೆಕ್ಟರ್‌ ಶಿವಶಂಕರ್‌ ಮತ್ತು ಸರ್ಕಲ್‌ ಇನ್ನಪೆಕ್ಟರ್‌ ನಂಜುಂಡೇ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವು ಬೀಡಾಡಿ ದನಗಳಾಗಿದ್ದು ಅನೇಕ ವರ್ಷಗಳಿಂದ ತೋಟದಲ್ಲೆ ವಾಸವಿದ್ದು ತೋಟವನ್ನು ಹಾಳು ಮಾಡುತಿದ್ದವೆಂದು ಇದರಿಂದ ಬೇಸತ್ತಿದ್ದ ತೋಟದ ಸಿಬ್ಬಂದಿಗಳು ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದರೆಂದು ಹೇಳಲಾಗಿದೆ. ತೋಟದ ವ್ಯವಸ್ಥಾಪಕರು ತಾವು ಜಾನುವಾರುಗಳಿಗೆ ವಿಷವಿಕ್ಕಿಲ್ಲವೆಂದೂ ತೋಟದಲ್ಲಿ ಸತ್ತಿರುವ ಹಸುಗಳನ್ನು ಟ್ರಾಕ್ಟರ್‌ ಬಳಸಿ ಚರಂಡಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಸೋಮವಾರಪೇಟೆ ಪೋಲೀಸರು ಮೊಕದ್ದಮೆ ದಾಖಲು ಮಾಡಿಕೊಂಡು ತನಿಖೆ ನಡೆಸುತಿದ್ದಾರೆ,

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು