News Karnataka Kannada
Thursday, April 25 2024
ಕರ್ನಾಟಕ

ಮಡಿಕೇರಿ ನಗರಸಭೆ ಚುನಾವಣೆ ಮುಂದೂಡಲು ಯುವ ಜೆಡಿಎಸ್ ಒತ್ತಾಯ

Photo Credit :

ಮಡಿಕೇರಿ ನಗರಸಭೆ ಚುನಾವಣೆ ಮುಂದೂಡಲು ಯುವ ಜೆಡಿಎಸ್ ಒತ್ತಾಯ

ಮಡಿಕೇರಿ ಏ.23 : ಕೋವಿಡ್‌ ಸೋಂಕು ಹರಡುವ ಸರಪಳಿಯನ್ನು ತುಂಡರಿಸಲೆಂದೇ ರಾಜ್ಯ ಸರ್ಕಾರ ಇಡೀ ರಾಜ್ಯಾದ್ಯಂತ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಇತರ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿದೆ. ಜತೆಗೇ ಧಾರ್ಮಿಕ ಉತ್ಸವ , ಮದುವೆಗಳಿಗೂ ಇಂತಿಷ್ಟೆ ಜನರು ಇರಬೇಕೆಂದು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಆದರೆ ಮಡಿಕೇರಿಯ ನಗರಸಭೆಗೆ ಈ ಹಿಂದೆಯೇ ನಿಗದಿ ಆಗಿದ್ದಂತೆ ಮುಂದಿನ ಏಪ್ರಿಲ್‌ ೨೭ ರಂದು ಚುನಾವಣೆ ನಡೆಯಲಿದೆ.
ಚುನಾವಣೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾದ್ಯವಾಗದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹೀಗಿರುವಾಗ ಚುನಾವಣೆ ನಡೆಸಿದರೆ ಅದು ಮತ್ತೆ ಕೋವಿಡ್‌ ಸೋಂಕು ಹರಡಲು ಅನುವು ಮಾಡಿಕೊಟ್ಟಂತೆ ಆಗುವುದಿಲವೇ ಎಂಬ ಪ್ರಶ್ನೆಗೆ ಚುನಾವಣಾ ಆಯೋಗವೇ ಉತ್ತರ ನೀಡಬೇಕಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ 287 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.
ತಾಲೂಕಿನಲ್ಲಿ 155 ಹೊಸ ಕೋವಿಡ್-19 ಪ್ರಕರಣಗಳು ಕಂಡುಬ0ದಿದೆ. ಈ ಪೈಕಿ 134 ಆರ್.ಟಿ.ಪಿ.ಸಿ.ಆರ್ ಮತ್ತು 21 ರಾಪಿಡ್ ಆಂಟಿಜೆನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ ಕೊಡಗು ಜಿಲ್ಲೆಯಾದ್ಯಂತ ಕೋವಿಡ್ ವ್ಯಾಪಿಸುತ್ತಿರುವುದರಿಂದ ಏ.27 ರಂದು ನಿಗಧಿಯಾಗಿರುವ ಮಡಿಕೇರಿ ನಗರಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಜಿಲ್ಲಾ ಜಾತ್ಯತೀತ ಜನತಾದಳದ ಯುವ ಘಟಕ ಜಿಲ್ಲಾಡಳಿತ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಆತಂಕದ ವಾತಾವರಣವಿದೆ. ಇದರ ನಡುವೆಯೇ ಚುನಾವಣೆಯನ್ನು ನಡೆಸುವುದು ಸೂಕ್ತವಲ್ಲವೆಂದು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಅಭಿಪ್ರಾಯಪಟ್ಟರು.
ಒಂದು ವೇಳೆ ಚುನಾವಣೆ ನಡೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾರರು ಮತಗಟ್ಟೆಗೆ ಬರವುದಿಲ್ಲ. ಅಲ್ಲದೆ ಕೋವಿಡ್ ಸೋಂಕು ವ್ಯಾಪಿಸುವ ಸಾಧ್ಯತೆಗಳು ಕೂಡ ಇದೆ ಎಂದು ಅವರು ಹೇಳಿದರು.
ಚುನಾವಣೆ ಮುಂದೂಡುವ0ತೆ ಒತ್ತಾಯಿಸಿ ಪಕ್ಷದ ಪ್ರಮುಖರು ಅಪರ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು