News Karnataka Kannada
Sunday, April 14 2024
Cricket
ಕರ್ನಾಟಕ

ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಜಯಭೇರಿ

Photo Credit :

ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಜಯಭೇರಿ

ಮಡಿಕೇರಿ ಏ.30 : ಮಡಿಕೇರಿ ನಗರಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 23 ವಾರ್ಡ್ಗಳಲ್ಲಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಪಡೆದಿದೆ. ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಜೆಡಿಎಸ್ ಕೂಡ ಒಂದು ಸ್ಥಾನ ಗಳಿಸಿದೆ. ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್‌ ೮ ಸ್ಥಾನ, ಎಸ್‌ ಡಿಪಿಐ ೩ ಸ್ಥಾನ ಮತ್ತು ಜೆಡಿಎಸ್‌ ಒಂದು ಸ್ಥಾನ ಗಳಿಸಿದ್ದು ಮೂರೂ ಪಕ್ಷಗಳ ಮೈತ್ರಿ ಆಡಳಿತ ಇತ್ತು. ಬಿಜೆಪಿ ೧೧ ಸ್ಥಾನ ಗಳಿಸಿದ್ದರೂ ಆಡಳಿತ ಹಿಡಿಯುವಲ್ಲಿ ಕೇವಲ ಒಂದು ಸ್ಥಾನ ಕಡಿಮೆಯಾಗಿ ಅಧಿಕಾರ ವಂಚಿತ ಆಗಿತ್ತು. ನಗರ ಸಭೆಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಸ್ಥಾನ ಗೆದ್ದುಕೊಂಡಿದೆ.
ವಾರ್ಡ್ ಸಂಖ್ಯೆ 1 ಚಿತ್ರಾವತಿ(ಬಿಜೆಪಿ), ವಾರ್ಡ್ ಸಂಖ್ಯೆ 2 ಮಹೇಶ್ ಜೈನಿ (ಬಿಜೆಪಿ), ವಾರ್ಡ್ ಸಂಖ್ಯೆ 3 ಮೇರಿ ವೇಗಸ್ (ಎಸ್ ಡಿ ಪಿ ಐ ), ವಾರ್ಡ್ ಸಂಖ್ಯೆ 4 ಮನ್ಸೂರ್ ಆಲಿ (ಎಸ್ ಡಿ ಪಿ ಐ ), ವಾರ್ಡ್ ಸಂಖ್ಯೆ 5 ಎಸ್.ಸಿ.ಸತೀಶ್ (ಬಿಜೆಪಿ ), ವಾರ್ಡ್ ಸಂಖ್ಯೆ 6 ಕೆ ಎಸ್ ರಮೇಶ್ (ಬಿಜೆಪಿ ), ವಾರ್ಡ್ ಸಂಖ್ಯೆ 7 ಅಮಿನ್ ಮೊಯಿಸಿನ್ (ಎಸ್ ಡಿ ಪಿ ಐ )
ವಾರ್ಡ್ ಸಂಖ್ಯೆ 8 ಸವಿತಾ ರಾಕೇಶ್ (ಬಿಜೆಪಿ), ವಾರ್ಡ್ ಸಂಖ್ಯೆ 9 ಕಲಾವತಿ (ಬಿಜೆಪಿ), ವಾರ್ಡ್ ಸಂಖ್ಯೆ 10 ಮುಸ್ತಾಫಾ (ಜೆಡಿಎಸ್ ), ವಾರ್ಡ್ ಸಂಖ್ಯೆ 11 ನೀಮಾ ಅರ್ಷದ್ (ಎಸ್ ಡಿ ಪಿ ಐ ), ವಾರ್ಡ್ ಸಂಖ್ಯೆ 12 ಬಷೀರ್ (ಎಸ್ ಡಿ ಪಿ ಐ )
ವಾರ್ಡ್ ಸಂಖ್ಯೆ 13 ಮಂಜುಳಾ (ಬಿಜೆಪಿ), ವಾರ್ಡ್ ಸಂಖ್ಯೆ 14 ಉಷಾಕುಮಾರಿ ( ಬಿಜೆಪಿ ), ವಾರ್ಡ್ ಸಂಖ್ಯೆ 15 ಚಂದ್ರಶೇಖರ್ (ಬಿಜೆಪಿ ), ವಾರ್ಡ್ ಸಂಖ್ಯೆ 16 ರಾಜೇಶ್ ಯೆಲ್ಲಪ್ಪ (ಕಾಂಗ್ರೆಸ್ ), ವಾರ್ಡ್ ಸಂಖ್ಯೆ 17 ಅರುಣ್ ಶೆಟ್ಟಿ (ಬಿಜೆಪಿ ), ವಾರ್ಡ್ ಸಂಖ್ಯೆ 18 ಉಮೇಶ್ ಸುಬ್ರಮಣಿ (ಬಿಜೆಪಿ), ವಾರ್ಡ್ ಸಂಖ್ಯೆ 19 ಕೆ.ಎಂ.ಅಪ್ಪಣ್ಣ (ಬಿಜೆಪಿ), ವಾರ್ಡ್ ಸಂಖ್ಯೆ 20 ಅನಿತಾ ಪೂವಯ್ಯ (ಬಿಜೆಪಿ), ವಾರ್ಡ್ ಸಂಖ್ಯೆ 21 ಶ್ವೇತಾ ಪ್ರಶಾಂತ್ (ಬಿಜೆಪಿ), ವಾರ್ಡ್ ಸಂಖ್ಯೆ 22 ಸಬಿತಾ (ಬಿಜೆಪಿ), ವಾರ್ಡ್ ಸಂಖ್ಯೆ 23 ಶಾರದಾ ನಾಗರಾಜ್ (ಬಿಜೆಪಿ) ಗೆಲವು ಸಾಧಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು