News Karnataka Kannada
Monday, April 22 2024
Cricket
ಕರ್ನಾಟಕ

ಮಂಡ್ಯದಲ್ಲಿ ಕೊರೋನಾ ವಾರಿಯರ್ಸ್ ವೈದ್ಯರಿಗೆ ಪುಷ್ಪವೃಷ್ಟಿ

Photo Credit :

ಮಂಡ್ಯದಲ್ಲಿ ಕೊರೋನಾ ವಾರಿಯರ್ಸ್ ವೈದ್ಯರಿಗೆ ಪುಷ್ಪವೃಷ್ಟಿ

ಮಂಡ್ಯ: ಭಾರತೀಯ ವಿದ್ಯಾರ್ಥಿ ಸಂಘ, ನಾವು ದ್ರಾವಿಡ ಕನ್ನಡಿಗರು ಸಂಘಟನೆ ವತಿಯಿಂದ  ಅಕ್ಕ ಐಎಎಸ್ ಅಕಾಡೆಮಿ ತರಬೇತುದಾರ ಡಾ. ಶಿವಕುಮಾರ್ ಹುಟ್ಟುಹಬ್ಬ ಅಂಗವಾಗಿ ನಗರದ ಜಿಲ್ಲಾಸ್ಪತ್ರೆಯ ಬಳಿ ಕೊರೋನಾ ವಾರಿಯರ್ಸ್‍ಗಳಾದ ವೈದ್ಯರಿಗೆ ಪುಷ್ಪವೃಷ್ಟಿಗೈದು ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ  ಐಎಎಸ್ ತರಬೇತಿದಾರ ಡಾ.ಶಿವಕುಮಾರ್ ಅವರು, ಕೋವಿಡ್-19ರ ಹಿನ್ನಲೆಯಲ್ಲಿ ಸೇವೆಸಲ್ಲಿಸುತ್ತಿರುವ ಮಂಡ್ಯ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ನರ್ಸ್‍ಗಳ ಕಾರ್ಯ ಜನಮನ್ನಣೆಗಳಿಸಿದೆ, ಕೋವಿಡ್-19ರ ಸೋಂಕಿತ ಗರ್ಭಿಣಿಗೆ ಸರ್ಜರಿ ಮೂಲಕ ಹೆರಿಗೆ ಮಾಡಿಸಿ, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಿಸಿರುವುದು ದಾಖಲಾರ್ಹ ದೊಡ್ಡ ಸಾಧನೆಯಾಗಿದೆ. ಇದು ಇತರ ವೈದ್ಯಕೀಯ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿದರು.

ಸ್ತ್ರೀರೋಗ ಮತ್ತು ಹೆರಿಗೆ ವೈದ್ಯರಾದ ಡಾ. ಯೋಗೇಂದ್ರಕುಮಾರ್, ಡಾ.ಸವಿತಾ ಅವರ ತಂಡವು ಮಾನವೀಯತೆಯಿಂದ ಕಾರ್ಯ ಸಾಧಿಸಿ ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ವೈದ್ಯರ ಸೇವೆ ಅಪರೂಪವಾಗಿದೆ, ಅವರನ್ನು ಅಭಿನಂದಿಸುತ್ತಿರುವುದು ಸಂತೋಷವಾಗುತ್ತದೆ ಎಂದು ಹೇಳಿದರು.

ಇ.ಎನ್ ಟಿ ತಜ್ಞ ಡಾ. ಹನುಮಂತ ಪ್ರಸಾದ್ ಮಾತನಾಡಿ ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತಿದೆ, ಕೊರೋನಾ ವೈರಸ್ ಹರಡುವಿಕೆ ಹೆಚ್ಚಾಗಬಹುದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಕೆಯೊಂದಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹೆಚ್ಚಾಗಬೇಕಿದೆ, ಅಗತ್ಯವಿದ್ದರೆ ಮಾತ್ರ ಹೊರಗಡೆ ಬನ್ನಿ, ಮನೆಯಲ್ಲೇ ಇರುವುದು ಸೂಕ್ತ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ವೈದ್ಯರಾದ ಮಿಮ್ಸ್ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಇಎನ್ ಟಿ ತಜ್ಞ ಡಾ. ಹನುಮಂತ ಪ್ರಸಾದ್, ಡಾ.ಮಂಜುನಾಥ್. ಡಾ.ಶಿಲ್ಪ, ಡಾ. ಜ್ಯೋತಿ, ನರ್ಸ್‍ಗಳಾದ ವಸಂತ, ರಾಜೇಶ್ವರಿ, ಮೂರ್ತಿ ಸೇರಿದಂತೆ ಹಲವರನ್ನು ಪುಷ್ಪವೃಷ್ಠಿಗೈದು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಶಾಖೆಯ ನರಸಿಂಹಮೂರ್ತಿ, ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಹನಕೆರೆಅಭಿಗೌಡ, ಚಿನ್ನಸ್ವಾಮಿ, ಅನಿಲ್‍ಕುಮಾರ್, ರಾಜಣ್ಣ, ವಕೀಲ ಸುರೇಶ್ , ಮಾಚಹಳ್ಳಿಮಹೇಶ್ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು