News Karnataka Kannada
Saturday, April 13 2024
Cricket
ಕರ್ನಾಟಕ

ಮಂಡ್ಯದಲ್ಲಿ ಕಾವೇರಿ ಮಾತೆಗೆ ಪೂಜೆ

Photo Credit :

ಮಂಡ್ಯದಲ್ಲಿ ಕಾವೇರಿ ಮಾತೆಗೆ ಪೂಜೆ

ಮಂಡ್ಯ: ರೈತರ ಜೀವನಾಡಿಯಾದ  ಕೆ ಆರ್ ಎಸ್ ಅಣೆಕಟ್ಟೆಯಲ್ಲಿ 124 ಅಡಿ ನೀರು ತುಂಬಿರುವುದರ ಪ್ರಯುಕ್ತ ನಗರದ ಜಿಲ್ಲಾಧಿಕಾರಿಗಳ ಕಚೇರಿ ಉದ್ಯಾನವನದಲ್ಲಿರುವ ಶ್ರೀ ಕಾವೇರಿ ಮಾತೆಯ ಪ್ರತಿಮೆಗೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಪೂಜೆ ಮತ್ತು ಮಾಲಾರ್ಪಣೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಜಯಕರ್ನಾಟಕ ಜಿಲ್ಲಾಧ್ಯಕ್ಷ ಯೋಗಣ್ಣ ಅವರು,  ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಅಣೆಕಟ್ಟೆಯಲ್ಲಿ ನೀರು 124 ಅಡಿಗಳಷ್ಟು ತುಂಬಿರುವುದು ಸಂತಸವಾಗಿದೆ, ರೈತರ ಬೆಳೆಗಳಿಗೆ ಅನುಕೂಲಕರವಾಗಿದೆ, ಜಿಲ್ಲೆಯ ಆರ್ಥಿಕ ಜೀವನಾಡಿಯಾದ ಮೈಸುಗರ್ ಕಾರ್ಖಾನೆಯು ಶೀಘ್ರದಲ್ಲೇ ಸರ್ಕಾರಿ ಸ್ವಾಮ್ಯದ ಓಅಂಡ್‍ಎಂ ಅಡಿಯಲ್ಲಿ ಶೀಘ್ರವಾಗಿ ಆರಂಭಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಮೈಶುಗರ್ ಕಾರ್ಖಾನೆಯು ಆರಂಭಗೊಂಡರೆ ರೈತರ ಆರ್ಥಿಕ ಸಮಸ್ಯೆ ಬಗೆಹರಿದು ಸಾಲ- ಶೂಲದಿಂದ ಪಾರಾಗುತ್ತಾರೆ ಇಲ್ಲದಿದ್ದರೆ ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರ ಬದುಕು ಮತ್ತಷ್ಟು ಅಧೋಗತಿಗೆ ಬೀಳುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜನಸ್ಪಂದನಾ ಟ್ರಸ್ಟ್, ಕಬ್ಬು ಬೆಳೆಗಾರರ ಸಂಘ,  ತಾಲೂಕು ರೈತ ಸಂಘ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸಂಘಟನೆಗಳ ಮುಖಂಡರಾದ ನಾಗರತ್ನ, ರಮೇಶ್, ನಾರಾಯಣಸ್ವಾಮಿ ವೆಂಕಟೇಶ್, ಶಂಕರ್,  ರಾಜು ದೊರೆಸ್ವಾಮಿ, ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು