News Karnataka Kannada
Friday, April 19 2024
Cricket
ಕರ್ನಾಟಕ

ಮಂಜೇಶ್ವರ ಶಾಸಕನ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ

Photo Credit :

ಮಂಜೇಶ್ವರ ಶಾಸಕನ ವಿರುದ್ಧ ಬಿಜೆಪಿ ತೀವ್ರ ಪ್ರತಿಭಟನೆ

ಕಾಸರಗೋಡು: ವಂಚನೆ ಆರೋಪಕ್ಕೆ ಸಿಲುಕಿರುವ ಮಂಜೇಶ್ವರ ಶಾಸಕ ಎಂ. ಸಿ. ಕಮರುದ್ದೀನ್  ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಮಂಜೇಶ್ವರ ತಾಲೂಕು ಕಚೇರಿಗೆ  ಇಂದು ನಡೆಸಿದ  ಪ್ರತಿಭಟನಾ ಜಾಥಾ ಪೊಲೀಸ್ ಬ್ಯಾರಿಕೇಡ್  ಬೇಧಿಸಿ ಮುನ್ನುಗ್ಗಲೆತ್ನಿಸಿದಾಗ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದು, ಐದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉಪ್ಪಳ ಅಂಚೆ ಕಚೇರಿ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ತಾಲೂಕು ಕಚೇರಿ ಗೆ ನುಗ್ಗಲು ಬ್ಯಾರಿಕೇಡ್ ಗಳನ್ನು ದೂಡಿ ಮುನ್ನುಗ್ಗಲು ಯತ್ನಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಜಲಫಿರಂಗಿ ಬಳಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಹಾಗೂ ಕೆಲ ಕಾರ್ಯಕರ್ತರು ಆಯತಪ್ಪಿ ಬಿದ್ದಿದ್ದು, ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ  ಎ. ಪಿ  ಅಬ್ದುಲ್ಲ ಕುಟ್ಟಿ ಉದ್ಘಾಟಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ  ಮಣಿಕಂಠ ರೈ ಅಧ್ಯಕ್ಷತೆ  ವಹಿಸಿದ್ದರು. ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್,  ಬಿಜೆಪಿ ಉತ್ತರವಲಯ ಉಪಾಧ್ಯಕ್ಷ  ಕೋಳಾರು ಸತೀಶ್ಚಂದ್ರ ಭಂಡಾರಿ , ನ್ಯಾಯವಾದಿ ಸದಾನಂದ ರೈ,  ರೂಪವಾಣಿ ಭಟ್,  ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು , ಎ. ಕೆ ಕಯ್ಯಾರ್ , ಮುರಳೀಧರ ಯಾದವ್ , ಬಿ . ಎಂ ಆದರ್ಶ್, ಪುಷ್ಪಾ  ಅಮ್ಮೆಕ್ಕಳ , ಅಶೋಕ್ ಕುಮಾರ್ ಹೊಳ್ಳ  ಮೊದಲಾದವರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು