News Karnataka Kannada
Sunday, April 14 2024
Cricket
ಕರ್ನಾಟಕ

ಮಂಜೇಶ್ವರ ತಾಲೂಕು ಮಟ್ಟದ ಆನ್ ಲೈನ್ ದೂರು ಪರಿಹಾರ ಅದಾಲತ್

Photo Credit :

ಮಂಜೇಶ್ವರ ತಾಲೂಕು ಮಟ್ಟದ ಆನ್ ಲೈನ್ ದೂರು ಪರಿಹಾರ ಅದಾಲತ್

ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ಮಂಜೇಶ್ವರ ತಾಲೂಕು ಮಟ್ಟದ ದೂರು ಪರಿಹಾರ ಆನ್ ಲೈನ್ ಅದಾಲತ್ ಶನಿವಾರ  ನಡೆಯಿತು.

ಕೋವಿಡ್ ಹಿನ್ನೆಲೆಯಲ್ಲೂ ಜನತೆಯ ಅಹವಾಲುಗಳಿಗೆ ಆನ್ ಲೈನ್ ಮೂಲಕ ಜಿಲ್ಲಾಧಿಕಾರಿ ನೇರವಾಗಿ ಇತ್ಯರ್ಥಕ್ಕೆ ಮುಂದಾದರು.

ಅಂಗಡಿಮೊಗರು ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ತರಗತಿಗಳ ದುರಸ್ತಿ ಕಾಮಗಾರಿ ನಡೆಸಿ ನವೀಕರಿಸುವ  ಕುರಿತು ಹಸನುಲ್ ಬಾನು ಎಂಬವರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಆ.6ರಂದು ಬೆಳಗ್ಗೆ 10.30ಕ್ಕೆ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ನಡೆಸುವುದಾಗಿ ತಿಳಿಸಿದರು.

ಪುತ್ತಿಗೆ ಗ್ರಾಮಪಂಚಾಯತ್ ನ ಪ್ರದೀಪ್ ಎಂಬವರ ದೂರು ಪರಿಶೀಲಿಸಿದ  ಜಿಲ್ಲಾಧಿಕಾರಿ ಮುಗು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಜಾಗ ಒದಗಿಸಲು ಮತ್ತು ನಿರ್ಮಾಣ ವೆಚ್ಚವಾಗಿ 60 ಲಕ್ಷ ರೂ. ನೀಡಲು ಗ್ರಾಪಂಚಾಯತ್ ಸಿದ್ಧಗೊಂಡು, ರೆಸೊಲ್ಯೂಷನ್ ಪಾಸ್ ಮಾಡಿದರೆ ಮಂಜೂರಾರಿ ನೀಡುವುದಾಗಿ ಭರವಸೆ ನೀಡಿದರು.

ವೋಲ್ಟೇಜ್ ಕ್ಷಾಮ, ವಿದ್ಯುತ್ ಸಬ್ ಸ್ಟೇಷನ್ ಮಂಜೂರಾತಿ ಕುರಿತು  ಬಂದ್ಯೋಡಿನ ಮಹಮ್ಮದ್ ಅಬ್ದುಲ್ಲ ಎಂಬವರು ಸಲ್ಲಿಸಿದ್ದ ದೂರಿನಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಈ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.

ಮಂಜೇಶ್ವರ ತಾಲೂಕಿನ 65 ಶಾಲೆಗಳಲ್ಲಿ ಮಲಯಾಳಂ ಮಾ ಧ್ಯಮ ಶಿಕ್ಷಕರ ಅಗತ್ಯವಿದೆ ಎಂದು ಆಲಿ ಮಾಸ್ಟರ್ ಎಂಬವರು ಮನವಿ ಸಲ್ಲಿಸಿದ್ದು, ದಿನವೇತನ ದಡಿ  5 ಶಾಲೆಗಳಿಗೆ ಒಬ್ಬ ಶಿಕ್ಷಕನನ್ನು ನೇಮಿಸುವಂತೆ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು .

ಅದಾಲತ್ ನಲ್ಲಿ ಒಟ್ಟು 25 ದೂರುಗಳು ಪರಿಶೀಲನೆಗೊಂಡುವು. 13 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ. ಇವುಗಳಲ್ಲಿ 12 ದೂರುಗ ಳನ್ನು  ಆನ್ ಲೈನ್ ಮೂಲಕ ಇತ್ಯರ್ಥ ಗೊಳಿಸಲಾಗಿದೆ.

ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿ ಎನ್.ಎ.ಸಜಿ ಎಫ್.ಮೆಂಡಿಸ್, ತಹಸೀಲ್ದಾರ್ ಆಂಟೋ ಪಿ.ಜೆ., ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು