News Karnataka Kannada
Wednesday, April 17 2024
Cricket
ಕರ್ನಾಟಕ

ಭಾಗವತಿ ದೇವಿಯ ಹರಕೆ ತೀರಿಸಿದ ಪೊಲೀಸರು

Photo Credit :

ಭಾಗವತಿ ದೇವಿಯ ಹರಕೆ ತೀರಿಸಿದ ಪೊಲೀಸರು

ಚಿಂಚೋಳಿ: ಪ್ರವಾಹದಲ್ಲಿ ಸಿಲುಕಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರ್ಯಾಚರಣೆ ಯಶಸ್ವಿಯಾಗಿರುವ  ಹಿನ್ನೆಲೆಯಲ್ಲಿ  ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ತಹಶೀಲ್ದಾರ ಪಂಡಿತ ಬಿರಾದಾರ ಹಾಗೂ ಮಿರಿಯಾಣ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ ರಾಠೋಡ ಅವರು  ತಾಲ್ಲೂಕಿನ ಪೋಲಕಪಳ್ಳಿಯ ಭಾಗ್ಯವಂತಿ ದೇವಿಗೆ ಹರಿಕೆ ಹೊತ್ತು  101 ತೆಂಗಿನಕಾಯಿ ಒಡೆಯುವ ಮೂಲಕ ಹರಿಕೆ ತೀರಿಸಿದ್ದಾರೆ.

ಇದರೊಂದಿಗೆ ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಮಹಾಂತೇಶ ಪಾಟೀಲ ಹಾಗೂ ಚಿಂಚೋಳಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜಶೇಖರ ರಾಠೋಡ ಅವರು ಭಾಗ್ಯವಂತಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಸಾಮೂಹಿಕವಾಗಿ 101 ತೆಂಗಿನಕಾಯಿ ಒಡೆದಿದ್ದಾರೆ.

ಅದರೊಂದಿಗೆ ಅಮವಾಸ್ಯೆ ವಿಶೇಷ ಪೂಜೆಯಲ್ಲಿಯೂ ಪೊಲೀಸರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅಪ್ಪು , ಜಡೆಪ್ಪ ,   ಶಿವರಾಯ ಪಾಟೀಲ , ಗಫಾರಸಾಬ , ಈಶ್ವರ, ಮಂಜುನಾಥ ಶೆಟ್ಟಿ , ಲಕ್ಷಣ , ಮೊಹಮದ್ ಮುಸ್ತಫಾ ಇತರರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು