News Karnataka Kannada
Wednesday, April 17 2024
Cricket
ಕರ್ನಾಟಕ

ಬೈಕ್‌ ಗೆ ಅಡ್ಡ ಬಂದ ಜಿಂಕೆ ಸಾವು: ಸವಾರ ಗಂಭೀರ

Photo Credit :

ಬೈಕ್‌ ಗೆ ಅಡ್ಡ ಬಂದ ಜಿಂಕೆ ಸಾವು: ಸವಾರ ಗಂಭೀರ

ಚಾಮರಾಜನಗರ: ಬೈಕ್‌ ಗೆ ಜಿಂಕೆ ಅಡ್ಡ ಬಂದ ಪರಿಣಾಮ ಜಿಂಕೆ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಉಡಿಗಾಲ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಈ ಅಪಘಾತದಲ್ಲಿ ನಗರದ ನಿವಾಸಿ ಆರ್ಮುಗಂ(60) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿರುವ ಇವರನ್ನು ಮೈಸೂರು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರ್ಮುಗಂ ಕರಿಕಲ್ಲು ಕ್ವಾರಿಯೊಂದಕ್ಕೆ ನಗರದಿಂದ ತೆರಳುತ್ತಿದ್ದರು. ಚಾಮರಾಜನಗರ– ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿರುವ ಗ್ರಾಮದ ಬಳಿ ನಾಲ್ಕೈದು ಜಿಂಕೆಗಳು ಒಟ್ಟಿಗೆ ರಸ್ತೆ ದಾಟುವಾಗ ಈ ಅಪಘಾತ ಸಂಭವಿಸಿದೆ.

ಮೃತ ಜಿಂಕೆಯನ್ನು ಅರಣ್ಯ ಇಲಾಖೆ ಮಹಜರು ಮಾಡಿ ವಶಕ್ಕೆ ಪಡೆದಿದೆ. ನಗರ ಸಂಚಾರಿ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು