News Karnataka Kannada
Tuesday, April 23 2024
Cricket
ಕರ್ನಾಟಕ

ಬೇಲೂರಿನಲ್ಲಿ ಗಾಂಜಾ ಮಾರಾಟಕ್ಕೆತ್ನಿಸಿದ ಐವರ ಬಂಧನ

Photo Credit :

ಬೇಲೂರಿನಲ್ಲಿ ಗಾಂಜಾ ಮಾರಾಟಕ್ಕೆತ್ನಿಸಿದ ಐವರ ಬಂಧನ

ಬೇಲೂರು: ಈಗ ರಾಜ್ಯದಾದ್ಯಂತ ಗಾಂಜಾದ ಕಮಟು ವಾಸನೆ ಮೂಗಿಗೆ ಬಡಿಯಲು ಆರಂಭಿಸಿದೆ. ಪೊಲೀಸರು ಗಾಂಜಾದ ವಾಸನೆ ಹಿಡಿದು ದಾಳಿ ಮಾಡಲಾರಂಭಿಸಿದ್ದು, ಇದರಿಂದ ಹಲವು ಪ್ರಕರಣಗಳು ಬೆಳಕಿಗೆ ಬರಲು ಆರಂಭಿಸಿದೆ.

ಗ್ರಾಮೀಣ ಪ್ರದೇಶದಿಂದ ಆರಂಭವಾಗಿ ಪಟ್ಟಣಗಳ ತನಕ ಈಗಾಗಲೇ ಹತ್ತಾರು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಕೋಟ್ಯಂತರ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಗಳು ಮಾತ್ರ ಮೇಲಿಂದ ಮೇಲೆ ಪತ್ತೆಯಾಗುತ್ತಿರುವುದನ್ನು ಗಮನಿಸಿದರೆ ಇದರ ಉದ್ದ ಆಳ ತಿಳಿಯದಾಗಿದೆ. ಇದೀಗ ಬೇಲೂರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಐವರನ್ನು ಪೆÇೀಲೀಸರು ಬಂಧಿಸಿದ್ದಾರೆ.

ಪಟ್ಟಣದ ಬದ್ರಿಯಾ ಸಾಮೀಲ್ ಹಿಂಭಾಗ ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೇಲೂರು ಪೊಲೀಸರು ಐವರು ಆರೋಪಿಗಳಾದ ಚಿಕ್ಕಮಗಳೂರು ಮೊಹಿನುದ್ದೀನ್, ಬೇಲೂರಿನ ತಸ್ಲೀಮ್ ಪಾಷಾ,ಇಸ್ಮಾಯಿಲ್, ಹಳೇಬೀಡು ರಸ್ತೆಯ ಸಂತು, ಹೆಬ್ಬಾಳು ಗ್ರಾಮದ ಚಂದ್ರಪ್ಪ, ಎಂಬುವವರನ್ನು  ಬಂಧಿಸಿ ಅವರಿಂದ 350 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ನಟೇಶ್, ಪಿಎಸ್‍ಐ ಅಜೇಯ್ ಕುಮಾರ್, ಎಎಸ್‍ಐ ನಾಗರಾಜ್, ಸಿಬ್ಬಂದಿ ಮನು, ಚಿತ್ರೇಶ್ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು