News Karnataka Kannada
Saturday, April 13 2024
Cricket
ಕರ್ನಾಟಕ

ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ; ಕಾರ್ಮಿಕ ಸ್ಥಳದಲ್ಲೇ ಮರಣ

Photo Credit :

 ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ;  ಕಾರ್ಮಿಕ ಸ್ಥಳದಲ್ಲೇ ಮರಣ

ಮಡಿಕೇರಿ ಮೇ 28 ; ಇಲ್ಲಿಗೆ ಸಮೀಪದ ಪೊನ್ನಂಪೇಟೆ ತಾಲ್ಲೂಕಿನ ದೇವಮಚ್ಚಿ ಎಂಬಲ್ಲಿ ಕಾರ್ಮಿಕನೊಬ್ಬನನ್ನು ಕಾಡಾನೆ ಕೊಂದು ಹಾಕಿದೆ. ಮೃತಪಟ್ಟ ಕಾರ್ಮಿಕನನ್ನು ನಾಣು (60) ಎಂದು ಗುರುತಿಸಲಾಗಿದ್ದು ಶುಕ್ರವಾರ ಬೆಳಿಗ್ಗೆ 6.30 ಘಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ನಾಣು ತನ್ನ ಮನೆಗೆ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ತಿತಿಮತಿಗೆ ಬರುತ್ತಿರುವ ವೇಳೆ ರಸ್ತೆಯಲ್ಲೇ ಎದುರಾದ ಒಂಟಿ ಸಲಗವೊಂದು ತುಳಿದು ಹಾಕಿದೆ. ಈ ದುರ್ದೈವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಾಡಾನೆ ಮುಂಜಾನೆಯ ವೇಳೆ ಮೈಸೂರು ಮುಖ್ಯ ರಸ್ತೆಯಿಂದ ದೇವಮಚ್ಚಿ ರಸ್ತೆ ಕಡೆಗೆ ತೆರಳಿದೆ ಎಂದು ಸ್ಥಳೀಯರು ತಿಳಿಸಿದರು. ಮುಖ್ಯ ರಸ್ತೆಯ ಅನತಿ ದೂರದಲ್ಲಿಯೇ ಈ ಘಟನೆ ನಡೆದಿದ್ದು ಸುತ್ತಮುತ್ತಲಿನ ಗ್ರಾಮದ ಜನರು ಭಯ ಭೀತರಾಗಿದ್ದಾರೆ. ತಿತಿಮತಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಳನೆ ನಡೆಸುತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು