News Karnataka Kannada
Wednesday, April 17 2024
Cricket
ಕರ್ನಾಟಕ

ಬುಡಕಟ್ಟು ಬೇಡಿಕೆಗೆ ಬೆಂಬಲ ಸರಿಯಲ್ಲ: ವಕೀಲ ಬಿ.ಎ.ಮಾಚಯ್ಯ

Photo Credit :

ಬುಡಕಟ್ಟು ಬೇಡಿಕೆಗೆ ಬೆಂಬಲ ಸರಿಯಲ್ಲ: ವಕೀಲ ಬಿ.ಎ.ಮಾಚಯ್ಯ

ಮಡಿಕೇರಿ: ಸಂಘಟನೆಯೊಂದು ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸುವಂತೆ ಒತ್ತಾಯಿಸಿರುವ ಬೇಡಿಕೆಗೆ ಅಖಿಲ ಕೊಡವ ಸಮಾಜ ಬೆಂಬಲ ಸೂಚಿಸುವುದು ಸರಿಯಲ್ಲವೆಂದು ಹಿರಿಯ ವಕೀಲ ಬಿ.ಎ.ಮಾಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 33 ಕೊಡವ ಸಮಾಜಗಳನ್ನು ಪ್ರತಿನಿಧಿಸುವ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಅರ್ಥಹೀನ ಬೇಡಿಕೆಗೆ ಬೆಂಬಲ ಸೂಚಿಸುತ್ತಿರುವುದು ಸರಿಯಲ್ಲವೆಂದರು.
ಕೊಡವರು ಬುಡಕಟ್ಟು ಜನಾಂಗವಲ್ಲ ಎಂಬುದಕ್ಕೆ ಅಗತ್ಯ ಸಾಕ್ಷ್ಯಗಳು ಇತಿಹಾಸದ ಪುಟಗಳಲ್ಲಿ ಅಡಗಿದೆ. ಆದರೆ, ಬೇಡಿಕೆಯನ್ನು ಮುಂದಿಟ್ಟವರು ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.

ಕೊಡವ ಜನಾಂಗದ ಬಗ್ಗೆ ಕರ್ನಾಟಕ ಗೆಜೆಟಿಯರ್‍ನಲ್ಲಿ ಸ್ಪಷ್ಟ ಉಲ್ಲೇಖಗಳಿದ್ದು, ಅದರಲ್ಲಿ ಕೊಡವರು ಹುಟ್ಟಿನಿಂದಲೆ ಸಾಹಸಿಗಳು, ಧೀರರು ಹಾಗೂ ಶೌರ್ಯಕ್ಕೆ ಪ್ರಸಿದ್ಧರಾದವರು ಎಂದು ಹೇಳಲಾಗಿದೆ. ಅರಸರ ಕಾಲದಿಂದಲೆ ಹೋರಾಟಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಭಾರತದ ಎಲ್ಲಾ ಸೇನಾ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಫೀ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಅನೇಕರು ಕೊಡವ ಬೈ ರೇಸ್ ಅಡಿಯಲ್ಲೆ ತಮ್ಮ ಜಾತಿಯನ್ನು ದಾಖಲೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ದುರುದ್ದೇಶದಿಂದ ಕೊಡವರ ಹೆಸರಿಗೆ ಮಸಿ ಬಳಿಯುವ ಕಾರ್ಯದಲ್ಲಿ ಕೆಲವರು ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಟ್ಟ, ಗುಡ್ಡ ಮತ್ತು ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವವರೆಲ್ಲ ಬುಡಕಟ್ಟು ಜನಾಂಗವಾಗಲು ಸಾಧ್ಯವಿಲ್ಲ, ಜಾತಿ ಬೇರೆ, ಜನಾಂಗ ಬೇರೆ. ಇದನ್ನು ನಿರ್ಧರಿಸುವುದು ಆಯಾ ಜನಾಂಗದ ಸಂಸ್ಕೃತಿ, ಹಾವ ಭಾವ, ಜೀವನ ಪದ್ಧತಿ. ಯೋಧ ಜನಾಂಗದವರಾಗಿರುವ ಕೊಡವರನ್ನು ಕೊಡವ ಜಾತಿ ಎಂದು ನಿರ್ಧರಿಸಲಾಗುತ್ತದೆಯೇ ಹೊರತು ಬೆಟ್ಟ ಗುಡ್ಡಗಳ ಆಧಾರದಲ್ಲಿ ಬುಡಕಟ್ಟು ಜನಾಂಗವೆಂದು ಗುರುತಿಸಲು ಸಾಧ್ಯವಿಲ್ಲ. ಇನ್ನಾದರು ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಜನ ಪ್ರತಿನಿಧಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ನಡೆದುಕೊಳ್ಳಬೇಕೆಂದು ಮಾಚಯ್ಯ ಹೇಳಿದರು.

ಬುಡಕಟ್ಟು ಜನಾಂಗದ ಬೇಡಿಕೆಯನ್ನು ಮುಂದಿಟ್ಟಿರುವ ಸಂಘಟನೆಯೊಂದು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಹೊಂದಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು