News Karnataka Kannada
Sunday, April 21 2024
Cricket
ಕರ್ನಾಟಕ

ಬಿಡದಿ ಬಳಿ ಗಾಂಜಾ ಬೆಳೆದಿದ್ದವರ ಬಂಧನ

Photo Credit :

ಬಿಡದಿ ಬಳಿ ಗಾಂಜಾ ಬೆಳೆದಿದ್ದವರ ಬಂಧನ

ರಾಮನಗರ: ಹೊಲದಲ್ಲಿ ಬೆಳೆಗಳ ನಡುವೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪಿಗಳನ್ನು  ಬಿಡದಿ ಪೊಲೀಸರು ಬಂಧಿಸಿ ಸುಮಾರು 40 ಸಾವಿರ ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿರುವ ಘಟನೆ ಬಿಡದಿ ಹೋಬಳಿ ಬೆತ್ತಂಗೆರೆ ಗ್ರಾಮದಲ್ಲಿ ನಡೆದಿದೆ.

ಬೆತ್ತಂಗೆರೆ ಗ್ರಾಮದ ಸರ್ವೆ ನಂಬರ್ 12ರ ಜಮೀನಿನಲ್ಲಿ ಗಾಂಜಾ ಗಿಡವನ್ನು ಅಕ್ರಮವಾಗಿ ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಿಡದಿ ಪೊಲೀಸರು ದಾಳಿ ನಡೆಸಿದ್ದು, ತೊಗರಿ, ಮೆಣಸಿನಕಾಯಿ ಗಿಡಗಳು ಹಾಗೂ ಸೀಮೆ ಹುಲ್ಲಿನ ಮದ್ಯದಲ್ಲಿ ಅಲ್ಲಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಅಕ್ರಮವಾಗಿ ಬೆಳೆದಿದ್ದ ಸುಮಾರು 10.300 ಕೆ.ಜಿ ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದು ಆರೋಪಿಗಳಾದ ಭೀಮಾನಾಯ್ಕ ಮತ್ತು ದೇವಮ್ಮ ಎಂಬುವರನ್ನು ಬಂಧಿಸಿದ್ದಾರೆ.

ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಬಿಡದಿ ಪಿಎಸ್‍ಐ ಭಾಸ್ಕರ್.ಸಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು