News Karnataka Kannada
Saturday, April 13 2024
Cricket
ಕರ್ನಾಟಕ

ಬಹುನಿರೀಕ್ಷಿತ ಕೇರಳ ತುಳು ಅಕಾಡೆಮಿ ಸೆ.3ರಂದು ಲೋಕಾರ್ಪಣೆ

Photo Credit :

ಬಹುನಿರೀಕ್ಷಿತ ಕೇರಳ ತುಳು ಅಕಾಡೆಮಿ ಸೆ.3ರಂದು ಲೋಕಾರ್ಪಣೆ

ಕಾಸರಗೋಡು : ಮಂಜೇಶ್ವರ ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿ ನಿರ್ಮಿಸಿರುವ ಕೇರಳ ತುಳು ಅಕಾಡಮಿಯ ಬಹುನಿರೀಕ್ಷಿತ ತುಳು ಭವನ ಕಟ್ಟಡ ಸೆ. 3 ರಂದು ಲೋಕಾರ್ಪಣೆಗೊಳ್ಳಲಿದೆ.

ಅಂದು ಬೆಳಿಗ್ಗೆ 11 . 30 ಕೇರಳ ಸಾಂಸ್ಕೃತಿಕ ಸಚಿವ ಎ . ಕೆ ಬಾಲನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸುವರು .

ರಾಜ್ಯ ಕಂದಾಯ ಸಚಿವ ಇ . ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು.ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು .

ಶಾಸಕ ಎಂ . ಸಿ ಖಮರುದ್ದೀನ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ . ಜಿ .ಸಿ ಬಶೀರ್ , ಜಿಲಾಧಿಕಾರಿ ಡಾ. ಡಿ ಸಜಿತ್ ಬಾಬು , ಬ್ಲಾಕ್ ಹಾಗೂ ಪಂಚಾಯತ್ ಅಧ್ಯಕ್ಷರು , ಜನಪ್ರತಿನಿಧಿಗಳು , ಸಾ0ಸ್ಕೃತಿಕ ನಾಯಕರು ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಸಾಹಿತಿ , ಸಂಶೋಧಕರಾಗಿದ್ದ ಡಾ . ವೆಂಕಟರಾಜ ಪುಣಿ0ಚಿತ್ತಾಯ ರವರ ನೆನಪಿನ ಗ್ರಂಥಾಲಯದ ಉದ್ಘಾಟಿಸುವರು . ಆನ್ ಲೈನ್ ಲಿಪಿ ಪಠಣ ಸೌಲಭ್ಯಕ್ಕೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು . ಕೋವಿಡ್ ಮಾನದಂಡ ದಂತೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

2019 ರ ಫೆಬ್ರವರಿ 29 ರಂದು ಕೇರಳ ಸ್ಪೀಕರ್ ಪಿ . ಶ್ರೀರಾಮ ಕೃಷ್ಣನ್ ಶಿಲಾನ್ಯಾಸ ನೆರವೇರಿಸಿದ್ದರು . ಮೊದಲ ಹಂತದಲ್ಲಿ ಸುಮಾರು 25 ಲಕ್ಷ ರೂ . ವೆಚ್ಚದಲ್ಲಿ ಕಚೇರಿಯನ್ನು ಒಳಗೊಂಡ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು