News Karnataka Kannada
Sunday, April 21 2024
Cricket
ಕರ್ನಾಟಕ

ಬನ್ನೂರಿನಲ್ಲಿ ಮಹಿಳೆಯ ಹತ್ಯೆಗೈದಿದ್ದ ಇಬ್ಬರು ಹಂತಕರ ಬಂಧನ

Photo Credit :

ಬನ್ನೂರಿನಲ್ಲಿ ಮಹಿಳೆಯ ಹತ್ಯೆಗೈದಿದ್ದ ಇಬ್ಬರು ಹಂತಕರ ಬಂಧನ

ಬನ್ನೂರು: ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಲ್ಲದೆ, ಕತ್ತು ಬಿಗಿದು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಹಂತಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ ಅಲಿಯಾಸ್ ಮದನ್(20) ಮತ್ತು ನಾಗೇಂದ್ರ ಅಲಿಯಾಸ್ ಅಪ್ಪು(20) ಬಂಧಿತರಾಗಿದ್ದಾರೆ. ಇವರು ನುಗ್ಗೆಕೊಪ್ಪಲು ಗ್ರಾಮದ ನಿವಾಸಿ ಪುಟ್ಟಸ್ವಾಮಿ ಎಂಬುವರ ಪತ್ನಿ ಮಹದೇವಿ(50) ಎಂಬುವರನ್ನು ಕೊಲೆಗೈದ ಹಂತಕರಾಗಿದ್ದಾರೆ.

ಹಂತಕರು ಮಹದೇವಿ ಅವರ ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಲು ಮೂರ್ನಾಲ್ಕು ದಿನಗಳಿಂದ ಹೊಂಚು ಹಾಕಿದ್ದರು. ಇದರ ಬಗ್ಗೆ ಅರಿವಿಲ್ಲದ ಮಹದೇವಿ ಅವರು ಆಗಸ್ಟ್ 18ರಂದು ಎಮ್ಮೆಗಳನ್ನು ಮೇಯಿಸಲು ನುಗ್ಗಹಳ್ಳಿ ಹೊರವಲಯದ ತೋಪಿಗೆ ಒಬ್ಬಂಟಿಯಾಗಿ ಬರುತ್ತಿರುವುದನ್ನು ಗಮನಿಸಿ ಅವರ ಮೇಲೆ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದಿದ್ದಲ್ಲದೆ, ಕತ್ತು ಬಿಗಿದು ಕೊಲೆಗೈದು ಆಕೆಯ ಕಿವಿಯಲ್ಲಿದ್ದ ಓಲೆ, ಮಾಂಗಲ್ಯ ಸರವನ್ನು ಕದ್ದೊಯ್ದಿದ್ದರು.

ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ರಿಷ್ಯಂತ್ ಅವರು ಅಡಿಷನಲ್ ಎಸ್.ಪಿ. ಶಿವಕುಮಾರ್, ನಂಜನಗೂಡು ಉಪ ವಿಭಾಗದ ಡಿವೈಎಸ್‍ಪಿ ಪ್ರಭಾಕರ್ ಶಿಂಧೆ ಮಾರ್ಗದರ್ಶನದಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ  ಸಿಪಿಐ ಎಂ.ಆರ್.ಲವ, ಪಿಎಸ್‍ಐ ಪುನೀತ್ ಸಿಬ್ಬಂದಿಗಳಾದ ನಾರಾಯಣ್, ಪ್ರಭಾಕರ್, ಸತೀಶ್, ಭಾಸ್ಕರ್, ಪಚ್ಚೇಗೌಡ, ನಾರಾಯಣ್, ಮಂಜುನಾಥ್, ಸೋಮಶೇಖರ್, ಇಸ್ಮಾಯಿಲ್, ಮಂಜು, ಶಂಕರ್, ಗಿರೀಶ್, ನೂರುಲ್ಲಾ, ಗೋಪಾಲಸ್ವಾಮಿ, ಬೈರವ,  ಚೌಡಯ್ಯ, ಪುಟ್ಟಸ್ವಾಮಿ, ಮಹದೇವು, ವಸಂತ್, ರೇಖಾ, ಸುನೀತಾ ಮೊದಲಾದವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ತಂಡ ಹಂತಕರನ್ನು ಬಂಧಿಸಿದ್ದು ಅವರಿಂದ ಹತ್ಯೆಗೆ ಬಳಸಿದ ಮಾರಕಾಸ್ತ್ರ ಹಾಗೂ ಕಳ್ಳತನ ಮಾಡಲಾಗಿದ್ದ ಕಿವಿ ಓಲೆ, ಮಾಂಗಲ್ಯ, ಕರಿಮಣಿ ಸರವನ್ನು ಹಾಗು ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದ ಕಾರ್ಯ ಕ್ಷಮತೆಯನ್ನು ಮೆಚ್ಚಿ ಮೈಸೂರು ಎಸ್.ಪಿ. ಸಿ.ಬಿ. ರಿಷ್ಯಂತ್ ಅವರು ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು