News Karnataka Kannada
Monday, April 15 2024
Cricket
ಕರ್ನಾಟಕ

ಬಡ ವಿದ್ಯಾರ್ಥಿಯ ಸಾಧನೆಗೆ ಸುಧಾಮೂರ್ತಿಯಿಂದ ಸಹಾಯ ಹಸ್ತ

Photo Credit :

ಬಡ ವಿದ್ಯಾರ್ಥಿಯ ಸಾಧನೆಗೆ ಸುಧಾಮೂರ್ತಿಯಿಂದ ಸಹಾಯ ಹಸ್ತ

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆಯ ಬಡ ವಿದ್ಯಾರ್ಥಿಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಸಹಾಯ ಹಸ್ತ ಚಾಚಿದ್ದಾರೆ. ರಾಜ್ಯಕ್ಕೆ 7ನೇ ರ್ಯಾಂಕ್ ಗಳಿಸಿದ ಜಮಖಂಡಿ ತಾಲ್ಲೂಕಿ ನ ಖಾಜಿ ಬೀಳಗಿ ಗ್ರಾಮದ ಬಡ ವಿದ್ಯಾರ್ಥಿ ಸಂಜಯನ ಶಿಕ್ಷಣಕ್ಕೆ ಪ್ರತಿ ವರ್ಷ 50 ಸಾವಿರ ರೂ. ನಂತೆ ಮೂರು ವರ್ಷದ 1 ಲಕ್ಷ 50 ಸಾವಿರ ರೂ. ಸಹಾಯ ನೀಡುವುದಾಗಿ ಹೇಳಿದ್ದಾರೆ.

ವಿದ್ಯಾರ್ಥಿಯ ಸಾಧನೆ ನೋಡಿದ ಸುಧಾ ಮೂರ್ತಿಯವರು ಸಂಜಯನ ಶಿಕ್ಷಣಕ್ಕೆ ಈ ಬಗ್ಗೆ ಸಚಿವ ಸುರೇಶಕುಮಾರ್ ಫೇಸ್‍ಬುಕ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದರ ಜತೆಗೆ ಸುಧಾ ಮೂರ್ತಿ ಇನ್ನೂ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಜಮಖಂಡಿ ತಾಲೂಕಿನ 250 ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಒದಗಿಸಲು ಆರ್ಥಿಕ ನೆರವು ನೀಡಲಿದ್ದಾರೆ. ಸುಧಾ ಮೂರ್ತಿಯವರ ತಂದೆಯ ಊರು ಸಾವಳಗಿಯಾಗಿರುವುದರಿಂದ ಅವರು ತಮ್ಮ ತಾಲೂಕಿನ ವಿದ್ಯಾರ್ಥಿಗಳಿಗಾಗಿ ಸಹಾಯ ಹಸ್ತ ಚಾಚಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು