News Karnataka Kannada
Monday, April 22 2024
Cricket
ಕರ್ನಾಟಕ

ಬಕ್ರೀದ್ ಹಬ್ಬದಲ್ಲಿ ಸರಳ-ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಮಂಡ್ಯ ಡಿಸಿ

Photo Credit :

ಬಕ್ರೀದ್ ಹಬ್ಬದಲ್ಲಿ ಸರಳ-ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಮಂಡ್ಯ ಡಿಸಿ

ಮಂಡ್ಯ: ಬಕ್ರೀದ್ ಹಬ್ಬವನ್ನು ತುಂಬ ಸರಳವಾಗಿ ಮತ್ತು ಜಾಗೃತಿಯಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಲು ಎಲ್ಲರೂ  ಸಹಕರಿಸಬೇಕೆಂದು  ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಈ ಸಂಬಂಧ ನಡೆದ ಸಭೆಯಲ್ಲಿ ಎಲ್ಲ ಮಸೀದಿಗಳಲ್ಲಿ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳು ಆಗದ ಹಾಗೆ ಹಬ್ಬವನ್ನು ಆಚರಿಸುವುದರ ಜೊತೆಗೆ   ಕೋವಿಡ್ ಬಗ್ಗೆ  ಅರಿವನ್ನು ಮೂಡಿಸುವ ಕಾರ್ಯವು ನೆರವೇರಲಿ ಎಂದು ಹೇಳಿದರು.

ಪ್ರತಿ ಪ್ರಾರ್ಥನಾ ಮಂದಿರದಲ್ಲಿ ಸುಮಾರು 50 ಜನರು ಮಾತ್ರ ಮಸೀದಿಗಳಲ್ಲಿ  ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥಿಸಬೇಕೆಂದರು. ಎಲ್ಲರೂ ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಚರಣೆಯನ್ನು ಮಾಡಬೇಕು ಮತ್ತು ಆರೋಗ್ಯ ಸಮಸ್ಯೆ ಇರುವವರನ್ನು ಹಾಗೂ ವಯಸ್ಸಾದವರನ್ನು  ಹೊರತುಪಡಿಸಿ ಜಾಗೃತಿಯಿಂದ ಆಚರಣೆ ಮಾಡುವ ಮೂಲಕ ನಮ್ಮ ಜಿಲ್ಲೆಯಲ್ಲಿ ಬಕ್ರೀದ್ ಆಚರಣೆಯು ಮಾದರಿ ಯಾಗಬೇಕು ಎಂದು ತಿಳಿಸಿದರು.

ಮಸೀದಿಯಲ್ಲಿ ನಮಾಜ್ ನಿರ್ವಹಿಸುವವರು ಕನಿಷ್ಠ 6 ಅಡಿ ಅಂತರವನ್ನು ಕಾಯ್ದು ಕೊಳ್ಳುವುದು, ಮಸೀದಿ ಪ್ರವೇಶಿಸುವ ಮೊದಲು ತಾಪಮಾನ ತಪಾಸಣೆ ಮಾಡಿಸಬೇಕು, ಕೈಗಳನ್ನು ಸೋಪಿನಿಂದ ಶುಚಿಗೊಳಿಸಲು ಕ್ರಮಕೈಗೊಳ್ಳಬೇಕು ಹಸ್ತಲಾಗವ, ಆಲಿಂಗನ ಮಾಡಬಾರದು ಎಂದು ತಿಳಿಸಿದರು.

ಜಿಲ್ಲಾ ವರಿಷ್ಠಾಧಿಕಾರಿಗಳಾದ ಪರುಶುರಾಮ್ ಜಿಲ್ಲೆಯ ಮುಸ್ಲಿಂ ಸಮುದಾಯದವರು  ತಮ್ಮ ಮನೆಗಳಲ್ಲಿ ಆಚರಣೆ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ  ಹಾಕಿ ಅದರಿಂದ ಎಲ್ಲರಿಗೂ ಅರಿವು ಮೂಡಿಸಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ  ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಗೋವು, ಕರು, ಒಂಟೆ ವಧೆ ನಿಷೇಧ

2020-21ನೇ ಸಾಲಿನ ಆಗಸ್ಟ್  ಮಾಹೆಯಲ್ಲಿ ರಾಜ್ಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ವೇಳೆಯಲ್ಲಿ ಗೋವು, ಕರು, ಒಂಟೆಗಳನ್ನು ವಧೆ ಮತ್ತು ಅನಧಿಕೃತ ಸಾಗಾಣಿಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

 

ಗೋವಧೆ ಪ್ರತಿಬಂಧಕ ಮತ್ತು ಜಾಣುವಾರು ಪರಿರಕ್ಷಣೆಯ ಅಧಿನಿಯಮ 1964 ಜಾರಿಯಲ್ಲಿದ್ದು, ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಫೀಲ್ ಸಂಖ್ಯೆ: 3964-67 ಮತ್ತು 3969/1994 ರ ಅಧಿನಿಯಮಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಗೋರಕ್ಷಣೆ ಮಾಡುವುದು ಹಾಗೂ ಈ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸಬೇಕಾಗಿರುವುದು ಜಿಲ್ಲಾಡಳಿತದ ಕರ್ತವ್ಯವಾಗಿರುತ್ತದೆ.

ಈ ಸಂಬಂಧ ಮಂಡ್ಯ ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ವೇಳೆಯಲ್ಲಿ ಗೋವು, ಕರು, ಒಂಟೆಗಳನ್ನು ವಧೆ ಮತ್ತು ಅನಧಿಕೃತ ಸಾಗಾಣಿಕೆ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು