News Karnataka Kannada
Thursday, April 18 2024
Cricket
ಕರ್ನಾಟಕ

ಬಂಡೀಪುರದಲ್ಲಿ ಎರಡು ದಿನಗಳಿಂದ ಆನೆಗಣತಿ

Photo Credit :

ಬಂಡೀಪುರದಲ್ಲಿ ಎರಡು ದಿನಗಳಿಂದ ಆನೆಗಣತಿ

ಗುಂಡ್ಲುಪೇಟೆ: ಬಂಡೀಪುರದಲ್ಲಿ ಎರಡು ದಿನಗಳ ಆನೆಗಣತಿ ನಡೆದಿದ್ದು, ಈ ಅಭಯಾರಣ್ಯದಲ್ಲಿರುವ  ಆನೆಗಳ ಗಣತಿಯ ಮಾಹಿತಿ ಇನ್ನಷ್ಟೆ ಗೊತ್ತಾಗಬೇಕಿದೆ. ಕಳೆದ ಮೂರು ವರ್ಷಗಳ ಹಿಂದೆ ಆನೆಗಣತಿ ನಡೆದಾಗ ಸುಮಾರು ಮೂರು ಸಾವಿರ ಆನೆಗಳಿದ್ದವು. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆಯಾ ಎಂಬುದು ಗಣತಿಯ ವರದಿ ಬಂದ ಬಳಿಕ ಗೊತ್ತಾಗಬೇಕಾಗಿದೆ.

ಸೆ. 7ರ ಬೆಳಿಗ್ಗೆ 7 ಗಂಟೆಯಿಂದ ಆರಂಭಿಸಿದ್ದು ಸೆ.8ಕ್ಕೆ ಮುಕ್ತಾಯಗೊಂಡಿದೆ. ಏಕಕಾಲಕ್ಕೆ ಆಯಾ ಬ್ಲಾಕ್ ಗಳಿಂದ ಕಾಡಿಗೆ ಹೊರಟ ಅರಣ್ಯ ಸಿಬ್ಬಂದಿ ಸಹಕಾರದಲ್ಲಿ ಗಣತಿ ಕಾರ್ಯ ನಡೆಸಲಾಗಿದೆ. ಬಂಡೀಪುರ ಹುಲಿಯೋಜನೆಯ 12 ವಲಯಗಳಲ್ಲೂ ಗಣತಿಯನ್ನು ಆರಂಭಿಸಲಾಗಿದ್ದು ಮುಂಜಾನೆ ಸಮಯದಲ್ಲಿ ಆನೆಗಳು ಸಿಗುವ ಗಸ್ತು ರಸ್ತೆಗಳಲ್ಲಿ ಮತ್ತು ಆನೆಪಥಗಳಲ್ಲಿ ಗಣತಿ ಕಾರ್ಯವನ್ನು ಚುರುಕಾಗಿ ನಡೆಸಲಾಯಿತು. ಸುಮಾರು 4 ರಿಂದ 6 ಕಿಲೋಮೀಟರ್‍ ಗೆ ಒಂದು ಬ್ಲಾಕ್ ಎಂದು ಗುರುತಿಸಿ ಕೊಂಡು ಅರಣ್ಯ ಸಿಬ್ಬಂದಿಗಳ ಸಹಕಾರದೊಂದಿಗೆ ಗಣತಿ ಕಾರ್ಯ ನಡೆಸಿದ್ದಾರೆ.

ದಟ್ಟ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಗಣತಿ ನಡೆಸುವುದು ಕಷ್ಟಕರ. ಗಣತಿ ಆರಂಭಿಸುವ ಮುನ್ನ ಅಧಿಕಾರಿಗಳಿಗೆ, ಸಂಬಂಧಿತ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಗಣತಿಯಲ್ಲಿ ಹಲವು ವಿಧಾನ ಅನುಸರಿಸಲಾಗುತ್ತದೆ. ಆನೆಲದ್ದಿ ಮಾದರಿ ಸಂಗ್ರಹ ಮತ್ತು ನೇರವಾಗಿ ಆನೆಗಳ ಎಣಿಕೆ ಮಾಡಲಾಗುತ್ತದೆ ಅರಣ್ಯ ಪ್ರದೇಶದ ಮತ್ತು ವಿಭಾಗೀಯ ಮಟ್ಟದಲ್ಲಿ 3 ಅಥವಾ 4 ಮಂದಿ ಗಣತಿದಾರರು ನಿಗದಿತ ಬ್ಲಾಕ್‍ನಲ್ಲಿ ಸಂಚರಿಸಿ ನೇರವಾಗಿ ಕಾಣುವ ಸಂಖ್ಯೆಯನ್ನು ದಾಖಲಿಸುವುದು, ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಎಣಿಸಿ ದಾಖಲು ಮಾಡಲಾಗುತ್ತದೆ. ಅಲ್ಲದೆ, ಸೀಳುದಾರಿಯಲ್ಲಿ ಲದ್ದಿಗಳ ಎಣಿಕೆ ಮಾಡಲಾಗುತ್ತದೆ. ಲದ್ದಿ ಸಾಂದ್ರತೆ, ದೈನಂದಿನ ಮಲವಿಸರ್ಜನೆ ಪ್ರಮಾಣ ಹಾಗೂ ಮಲ ಕೊಳೆಯುವ ಪ್ರಮಾಣಗಳಿಂದ ಆನೆಗಳ ಸಂಖ್ಯೆ ಲೆಕ್ಕ ಹಾಕಲಾಗುತ್ತದೆ.

ಪ್ರತಿ ಆನೆ ಸಂರಕ್ಷಿತ ಪ್ರದೇಶವನ್ನು ಘಟಕಗಳಾಗಿ ವಿಂಗಡಿಸಲಾಗುತ್ತದೆ. ನಿರ್ದಿಷ್ಟ ಘಟಕದಲ್ಲಿ ಗಣತಿ ನಡೆಯುತ್ತದೆ. ನೀರಿನಾಸರೆ ಗಣತಿ-ಆನೆಗಳ ಪಡೆಯ ರಚನೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ನಡೆಯುತ್ತದೆ. ಲದ್ದಿಯ ಸಾಂಧ್ರತೆ, ಪ್ರಮಾಣ ಮತ್ತು ಕೊಳೆಯುವ ವೇಗವನ್ನು ಆಧರಿಸಿಯೂ ಲೆಕ್ಕ ನಡೆಸಲಾಗಿದೆ. 2017ರಲ್ಲಿ ಬಂಡೀಪುರ ಅಭಯಾರಣ್ಯ 3ಸಾವಿರ ಗಳು ಹೊಂದಿದು ಈ ಬಾರಿ ಇದಕ್ಕಿಂತ ಹೆಚ್ಚು ಆನೆಗಳ ಇರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು