News Karnataka Kannada
Tuesday, April 16 2024
Cricket
ಕರ್ನಾಟಕ

ಪ್ರೊ. ವೈ. ಎಸ್. ಸಿದ್ದೇಗೌಡ ಅವರಿಗೆ ಶೈಕ್ಷಣಿಕ ರಂಗದ ಪ್ರತಿಷ್ಠಿತ

Photo Credit :

ಪ್ರೊ. ವೈ. ಎಸ್. ಸಿದ್ದೇಗೌಡ ಅವರಿಗೆ ಶೈಕ್ಷಣಿಕ ರಂಗದ ಪ್ರತಿಷ್ಠಿತ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅವರು ಇಂಟರ್‌ನ್ಯಾಷನಲ್ ಛೇಂಬರ್ ಆಫ್ ಸರ್ವೀಸ್ ಇಂಡಸ್ಟ್ರಿಯು ನೀಡುವ ಪ್ರತಿಷ್ಠಿತ ‘ಜೀವಮಾನದ ಸಾಧನೆ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.

 

ಪ್ರೊ. ಸಿದ್ದೇಗೌಡ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಸಾಮಾನ್ಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮೇ ೨೬ರಂದು ನಡೆಯುವ ಜಾಗತಿಕ ಶಿಕ್ಷಣ ಮತ್ತು ಕೌಶಲ ಕುರಿತ ವರ್ಚುವಲ್ ಸಮ್ಮೇಳನದಲ್ಲಿ ಅವರನ್ನು ಗೌರವಿಸಲಾಗುತ್ತದೆ.

 

ಮೂವತ್ತೆಂಟು ವರ್ಷಗಳ ಶೈಕ್ಷಣಿಕ ಕ್ಷೇತ್ರದ ಸೇವಾನುಭವ ಹೊಂದಿರುವ ಅವರು ಮೂರು ವಿಶ್ವವಿದ್ಯಾನಿಲಯಗಳಲ್ಲಿ ನಾಲ್ಕು ಬಾರಿ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ ರಾಷ್ಟಿçÃಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ೧೪೭ ಸಂಶೋಧನ ಪ್ರಬಂಧಗಳು ಹಾಗೂ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು ರೂ. ೬ ಕೋಟಿ ಮೌಲ್ಯದ ೧೭ ವಿವಿಧ ಸಂಶೋಧನ ಯೋಜನೆಗಳನ್ನು ಪೂರೈಸಿದ್ದಾರೆ.

 

ಇತ್ತೀಚೆಗಷ್ಟೇ ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ (ಎನ್‌ಐಪಿಎಂ)ಯ ಪ್ರತಿಷ್ಠಿತ ಫೆಲೋಷಿಪ್‌ಗೆ ಆಯ್ಕೆಯಾಗಿರುವ ಪ್ರೊ. ವೈ. ಎಸ್. ಎಸ್. ಅವರು ಕಳೆದ ಒಂದೇ ವರ್ಷದಲ್ಲಿ ಆರು ಪುರಸ್ಕಾರಗಳಿಗೆ ಭಾಜನರಾಗಿರುವುದು ವಿಶೇಷವಾಗಿದೆ. ಭಾರತ ಸರ್ಕಾರದಿಂದ ಎನ್.ಸಿ.ಸಿ. ಗೌರವ ಕರ್ನಲ್ ಪದವಿ, ಗೋಲ್ಡನ್ ಏಮ್ ಅವಾರ್ಡ್ ಅವರ ‘ದಿ ಮೋಸ್ಟ್ ಡೆಡಿಕೇಟೆಡ್ ವೈಸ್ ಛಾನ್ಸಲರ್’ ಪ್ರಶಸ್ತಿ, ದಿ ಇಂಟರ್‌ನ್ಯಾಷನಲ್ ಛೇಂಬರ್ ಫಾರ್ ಸರ್ವೀಸ್ ಇಂಡಸ್ಟಿç ನೀಡುವ ‘ಔಟ್ ಸ್ಟ್ಯಾಂಡಿಂಗ್ ಅಕಾಡೆಮಿಕ್ ಲೀಡರ್‌ಶಿಪ್’ ಪ್ರಶಸ್ತಿ ಹಾಗೂ ಗೋಲ್ಡನ್ ಏಮ್ ಅವಾರ್ಡ್ ನೀಡುವ ಶಿಕ್ಷಣ ರಂಗದ ಅತ್ಯಂತ ಪ್ರಭಾವಿ ಕುಲಪತಿ- ಇವು ಪ್ರೊ. ವೈ. ಎಸ್. ಸಿದ್ದೇಗೌಡ ಅವರನ್ನು ಅರಸಿ ಬಂದಿರುವ ಗೌರವಗಳಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು