News Karnataka Kannada
Wednesday, April 24 2024
Cricket
ಕರ್ನಾಟಕ

ಪ್ರೇಮ ವಿವಾಹಕ್ಕೆ ಪೋಷಕರ ಅಡ್ಡ ;ಮಗಳಿಂದಲೇ ಹೆತ್ತಮ್ಮನ ಕೊಲೆ

Photo Credit :

ಪ್ರೇಮ ವಿವಾಹಕ್ಕೆ ಪೋಷಕರ ಅಡ್ಡ  ;ಮಗಳಿಂದಲೇ  ಹೆತ್ತಮ್ಮನ ಕೊಲೆ

ವಿಜಯನಗರಂ(ಆಂಧ್ರಪ್ರದೇಶ): ಪ್ರೇಮಿಗೋಸ್ಕರ ಯುವತಿಯೊಬ್ಬಳು ಹೆತ್ತಮ್ಮನ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆ ಭೋಗಪುರಂದಲ್ಲಿ ನಡೆದಿದೆ.ಲಕ್ಷ್ಮೀ ಮತ್ತು ಶ್ರೀನಿವಾಸ್​ ರಾವ್​ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಈಗಾಗಲೇ ಕಿರಿಯ ಮಗಳು ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಇದರ ಮಧ್ಯೆ ಹಿರಿಯ ಮಗಳು ರೂಪಶ್ರೀ ಬಿ – ಫಾರ್ಮಸಿ ಓದುತ್ತಿದ್ದು, ಈ ವೇಳೆ ವರುಣ್ ಸಾಯಿ ಎಂಬ ಯುವಕನ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ,ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಕಿರಿಯ ಮಗಳ ಘಟನೆಯಿಂದ ಮನನೊಂದ ಪೋಷಕರು ಪ್ರೇಮ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಾರೆ. ಜತೆಗೆ ರೂಪಶ್ರೀಯನ್ನ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಈ ವೇಳೆ, ತಾಯಿ ಕೊಲೆ ಮಾಡಲು ನಿರ್ಧರಿಸಿದ್ದಾಳೆ. ತನ್ನ ಪ್ರೀಯಕರನಿಗೆ ಫೋನ್ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಆಕೆ ಮಲಗಿದ್ದ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.ಈ ವೇಳೆ ತಾಯಿ ಪ್ರಜ್ಞಾಹೀನಳಾಗಿದ್ದಾಳೆಂದು ತಂದೆಗೆ ತಿಳಿಸಿದ್ದಾಳೆ. ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರಂಭದಲ್ಲಿ ಶಂಕಿತ ಸಾವು ಎಂದು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಸಾವಿನ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರಿಂದ ಮಗಳ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಇದೀಗ ವರುಣ್ ಹಾಗೂ ರೂಪಶ್ರೀಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು