News Karnataka Kannada
Monday, April 22 2024
Cricket
ಕರ್ನಾಟಕ

ಪ್ರತಿಭಟನೆ ಬಳಿಕ ಕಾಸರಗೋಡು-ಸುಳ್ಯ ಜಾಲ್ಸೂರು ರಸ್ತೆ ತೆರವು

Photo Credit :

ಪ್ರತಿಭಟನೆ ಬಳಿಕ ಕಾಸರಗೋಡು-ಸುಳ್ಯ ಜಾಲ್ಸೂರು ರಸ್ತೆ ತೆರವು

ಕಾಸರಗೋಡು: ಹೈಕೋರ್ಟ್ ನ ಮಧ್ಯಂತರ ಆದೇಶವಿದ್ದರೂ ತೆರೆಯದ ಕಾಸರಗೋಡು-ಸುಳ್ಯ ನಡುವಿನ ಜಾಲ್ಸೂರು ರಸ್ತೆಯನ್ನು ಪ್ರತಿಭಟನೆ ನಡೆಸಿ ಪೊಲೀಸರಿಂದ ತೆರವುಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

ಜಾಲ್ಸೂರು ರಸ್ತೆಯ ಕೊಟ್ಯಾಡಿಯಲ್ಲಿ ಮರದ ತುಂಡು ಹಾಗೂ ಹಗ್ಗಗಳನ್ನು ಕಟ್ಟಿ ರಸ್ತೆ ಬಂದ್ ಮಾಡಲಾಗಿತ್ತು. ಹೈಕೋರ್ಟ್ ಆದೇಶದಂತೆ ಗುರುವಾರ ಬೆಳಗ್ಗೆ 10 ಗಂಟೆಗೆ ಮೊದಲು ಈ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸಬೇಕಿತ್ತು.

ಆದರೆ ಇಂದು 11.30 ಕಳೆದರೂ ತೆರೆಯದಿರುವುದರಿಂದ  ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ  ಅಧಿಕಾರಿಗಳು ನಡೆಸಿದ ಮಾತುಕತೆಯಿಂದ ರಸ್ತೆ ತೆರವುಗೊಳಿಸಲು, ಗಡಿಯ ಕಾರಡ್ಕ, ದೇಲಂಪಾಡಿ, ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯವರಿಗೆ ಗುರುತು ಚೀಟಿ ತೋರಿಸಿ ಸಂಚರಿಸಲು ಅನುಮತಿ ನೀಡುವುದಾಗಿ ಭರವಸೆ ನೀಡಿದರು. ಉಳಿದವರು  ಕೋವಿಡ್  ಜಾಗ್ರತಾ ಪೋರ್ಟಲ್ ನಲ್ಲಿ  ನೋಂದಾವಣೆ ಮಾಡಿ ಸಂಚಾರ ನಡೆಸಬಹುದು ಎಂಬ ಭರವಸೆ ಹಿನ್ನಲೆಯಲ್ಲಿ  ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನೆಯನ್ನು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಬಿಜೆಪಿ ರಾಷ್ಟೀಯ ಸಮಿತಿ ಸದಸ್ಯೆ ಪ್ರಮೀಳಾ  ಸಿ. ನಾಯ್ಕ್, ಸುಕುಮಾರ್ ಕುದ್ರೆಪ್ಪಾಡಿ, ಜಿಲ್ಲಾ ಉಪಾಧ್ಯಕ್ಷೆ ಎಂ., ಜನನಿ , ಯುವ ಮೋರ್ಚಾ ಜಿಲ್ಲಾಧ್ಯಕ್ಷ  ಧನಂಜಯ ಮಧೂರು,  ಹರೀಶ್ ಗೋಸಾಡ, ವಸಂತ ಕೆ .,  ಪಿ .ಆರ್ ಸುನಿಲ್ , ರಕ್ಷಿತ್ ಕೆದಿಲಾಯ  ಮೊದಲಾದವರು ನೇತೃತ್ವ ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು