News Karnataka Kannada
Friday, April 19 2024
Cricket
ಕರ್ನಾಟಕ

ಪ್ಯಾರಾ ಮೋಟಾರ್ ತುಂಡಾಗಿ ಸಮುದ್ರದಲ್ಲಿ ಬಿದ್ದು ಕ್ಯಾಪ್ಟನ್ ಸಾವು

Photo Credit :

ಪ್ಯಾರಾ ಮೋಟಾರ್ ತುಂಡಾಗಿ ಸಮುದ್ರದಲ್ಲಿ ಬಿದ್ದು ಕ್ಯಾಪ್ಟನ್ ಸಾವು

ಕಾರವಾರ: ಕಡಲ ತೀರದಲ್ಲಿ ಆರಂಭಿಸಲಾಗಿದ್ದ ಪ್ಯಾರಾ ಮೋಟಾರ್ ಹಾರಾಟದ ಸಂದರ್ಭದಲ್ಲಿ ತಾಂತ್ರಿಕ ದೋಷ ಉಂಟಾಗಿ ಮೋಟರ್ ತುಂಡಾಗಿ ಸಮುದ್ರದಲ್ಲಿ ಬಿದ್ದ ಪರಿಣಾಮ ಕಾರವಾರ ನೌಕಾನೆಲೆಯ ಕ್ಯಾಪ್ಟನ್ ಓರ್ವರು ಮೃತಪಟ್ಟ ಘಟನೆ ನಡೆದಿದೆ.

ಆಂಧ್ರ ಮೂಲದ ಮಧುಸೂದನ್ ರೆಡ್ಡಿ(55) ಮೃತಪಟ್ಟ ಕಾರವಾರ ನೌಕಾನೆಲೆಯ ಕ್ಯಾಪ್ಟನ್. ಅವರು ಕುಟುಂಬ ಸದಸ್ಯರು ಬೆಂಗಳೂರಿನಿಂದ ಕಾರವಾರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕುಟುಂಬ ಸಮೇತವಾಗಿ ಕಾರವಾರದ ಕಡಲ ತೀರಕ್ಕೆ ಆಗಮಿಸಿದ್ದರು. ಲಾಕ್ ಡೌನ್ ತೆರವಗೊಂಡ ಬಳಿಕ ಕಳೆದ ಎರಡು ದಿನಗಳ ಹಿಂದೆಯಷ್ಟೇ ಆರಂಭಗೊಂಡಿದ್ದ ಪ್ಯಾರಾ ಮೋಟರ್ ಕಂಡು ತಾನು ಆಕಾಶದೆತ್ತರಕ್ಕೆ ಹಾರಾಡಬೇಕು ಎಂದು ಮಧುಸೂದನ್ ಅವರು ಮುಂದಾಗಿದ್ದರು. ಆದರೆ ಪ್ಯಾರಾ ಮೋಟಾರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮೋಟರ್ ತುಂಡಾಗಿ ಸಮುದ್ರದಲ್ಲಿ ಬಿದ್ದಿದೆ.

ಪ್ಯಾರಾಚೂಟ್ ಸಮೇತ ಮಧುಸೂದನ್ ಹಾಗೂ ಪ್ಯಾರಾ ಮೋಟಾರ್ ನಿರ್ವಹಣೆ ಮಾಡುವ ವಿದ್ಯಾಧರ ವೈದ್ಯ ಎನ್ನುವವರು ಸಮುದ್ರದಲ್ಲಿ ಬಿದ್ದಿದ್ದಾರೆ. ತಕ್ಷಣ ಅವರಿಬ್ಬರನ್ನು ಸಮುದ್ರದಿಂದ ಮೇಲೆತ್ತಲಾಯಿತಾದರೂ ಮಧುಸೂದನ್ ಅವರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.  ಪ್ಯಾರಾ ಮೋಟರ್ ಏರುವ ಸಂದರ್ಭದಲ್ಲಿ ಸುರಕ್ಷತೆಗಾಗಿ ಬೇಲ್ಟ್ ಹಾಗೂ ಇನ್ನಿತರ ವಸ್ತುಗಳನ್ನು ಹಾಕಲಾಗಿದ್ದರಿಂದ ಸಮುದ್ರದಲ್ಲಿ ಬಿದ್ದ ಮಧುಸೂದನ್ ಅವರಿಗೆ ಈಜಲು ಸಾಧ್ಯವಾಗದೆ. ನೀರಿನಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ನಿರ್ವಹಕ ವಿದ್ಯಾಧರ ವೈದ್ಯ ಸಹ ಅಸ್ವಸ್ಥರಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಯಾಪ್ಟನ್ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ ನಡೆದ ಸಂದರ್ಭದಲ್ಲಿ ಆಂಬ್ಯುಲೆನ್ ಗಾಗಿ ಕರೆ ಮಾಡಲಾಗಿತ್ತು. ಆದರೂ ಸೂಕ್ತ ಸಮಯಕ್ಕೆ ಬಂದಿಲ್ಲ. ಬಳಿಕ ನಗರ ಪೊಲೀಸ್ ಠಾಣೆಯ ಪಿಎಸ್ಐ ಜೀಪಿನಲ್ಲೇ ಪ್ರವಾಸಿಗರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು