News Karnataka Kannada
Monday, April 22 2024
Cricket
ಕರ್ನಾಟಕ

ಪೈವಳಿಕೆಯಲ್ಲಿ ರಸ್ತೆ ಅಪಘಾತ: ಓರ್ವ ಸಾವು, ಮತ್ತೋರ್ವನಿಗೆ ಗಾಯ

Photo Credit :

ಪೈವಳಿಕೆಯಲ್ಲಿ ರಸ್ತೆ ಅಪಘಾತ: ಓರ್ವ ಸಾವು, ಮತ್ತೋರ್ವನಿಗೆ ಗಾಯ

ಕಾಸರಗೋಡು :  ಬೈಕ್  ಮತ್ತು ಟಿಪ್ಪರ್    ಲಾರಿ ನಡುವೆ ನಡೆದ ಅಪಘಾತದಲ್ಲಿ  ಓರ್ವ ಮೃತಪಟ್ಟ ಘಟನೆ  ಪೈವಳಿಕೆ ಸಮೀಪ ನಡೆದಿದೆ  .  

ಇನ್ನೋರ್ವ  ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು   ಕಯ್ಯಾರ್  ಮೇರ್ಕಳದ  ಅಬೂಬಕ್ಕರ್ ( 32) ಎಂದು ಗುರುತಿಸಲಾಗಿದೆ. ಹೇರೂರು ಬಿ . ಸಿ ರೋಡ್  ನ  ಮುಹಮ್ಮದ್ ಹನೀಫ್  (35) ಗಾಯಗೊಂಡಿದ್ದು ಆಸ್ಪತ್ರೆಗೆ  ದಾಖಲಿಸಲಾಗಿದೆ . ಸೋಮವಾರ ಬೆಳಿಗ್ಗೆ ಪೈವಳಿಕೆ ಸಮೀಪದ ಕಳಾಯಿ ಸೇತುವೆ ಬಳಿ ಅಪಘಾತ ನಡೆದಿದೆ. ಅತೀ ವೇಗದಿಂದ ಬಂದ  ಟಿಪ್ಪರ್  ಲಾರಿ ಇವರು  ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು , ರಸ್ತೆಗೆಸೆಯಲ್ಪಟ್ಟ ಇಬ್ಬರನ್ನು  ನಾಗರಿಕರು  ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು .  ಆದರೆ ಚಿಕಿತ್ಸೆ ಸ್ಪಂದಿಸದೆ ಅಬೂಬಕ್ಕರ್ ರಾತ್ರಿ ಮೃತಪಟ್ಟರು . ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು