News Karnataka Kannada
Tuesday, April 16 2024
Cricket
ಕರ್ನಾಟಕ

ಪರ್ಯಾಯ ರಸ್ತೆಯನ್ನು ಮೊದಲು ದುರಸ್ತಿಪಡಿಸಿ: ಜೆಡಿಎಸ್ ಒತ್ತಾಯ

Photo Credit :

ಪರ್ಯಾಯ ರಸ್ತೆಯನ್ನು ಮೊದಲು ದುರಸ್ತಿಪಡಿಸಿ: ಜೆಡಿಎಸ್ ಒತ್ತಾಯ

ಮಡಿಕೇರಿ: ರಸ್ತೆ ದುರಸ್ತಿಯ ಕಾರಣ ನೀಡಿ ಮಡಿಕೇರಿ-ಮೇಕೇರಿ ಮೂಲಕ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಜಿಲ್ಲಾಡಳಿತ ಪರ್ಯಾಯವಾಗಿ ಮಡಿಕೇರಿ, ತಾಳತ್ತಮನೆ- ಮೇಕೇರಿ ಮಾರ್ಗವನ್ನು ಸೂಚಿಸಿದ್ದು, ಈ ಮಾರ್ಗದ ದುರಸ್ತಿ ಕಾರ್ಯ ಮೊದಲು ಆಗಬೇಕಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪರ್ಯಾಯ ಮಾರ್ಗ ಅತ್ಯಂತ ಕಿರಿದಾಗಿದ್ದು, ಸಂಪೂರ್ಣ ಹೊಂಡ, ಗುಂಡಿಗಳಿಂದ ಕೂಡಿದೆ. ಇದೀಗ ಹೆಚ್ಚಿನ ಸಂಖ್ಯೆಯ ವಾಹನಗಳ ಸಂಚಾರದಿಂದ ಮತ್ತಷ್ಟು ರಸ್ತೆ ಹದಗೆಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಮಡಿಕೇರಿ, ತಾಳತ್ತಮನೆ- ಮೇಕೇರಿ ರಸ್ತೆ ಅತ್ಯಂತ ಚಿಕ್ಕದಾಗಿದ್ದು, ಹೊರ ರಾಜ್ಯಗಳ ಭಾರೀ ವಾಹನಗಳು ಕೂಡ ಇದೇ ಮಾರ್ಗವಾಗಿ ಸಂಚರಿಸಬೇಕಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮಡಿಕೇರಿ- ಮೇಕೇರಿ ರಸ್ತೆ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಬೆಂಬಲವಿದೆ, ಆದರೆ ಈ ಕಾಮಗಾರಿಗೂ ಮೊದಲು ಪರ್ಯಾಯ ರಸ್ತೆಯ ದುರಸ್ತಿ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು