News Karnataka Kannada
Saturday, April 20 2024
Cricket
ಕರ್ನಾಟಕ

ನೆರೆ ಪರಿಹಾರ ನೀಡಲು ಸರಕಾರ ಸೂಚಿನ ನೀಡಿದೆ: ಶಿವರಾಮ್ ಹೆಬ್ಬಾರ್

Photo Credit :

ನೆರೆ ಪರಿಹಾರ ನೀಡಲು ಸರಕಾರ ಸೂಚಿನ ನೀಡಿದೆ: ಶಿವರಾಮ್ ಹೆಬ್ಬಾರ್

ಕಾರವಾರ: ಜಿಲ್ಲೆಯಲ್ಲಿ ನೆರೆ ಹಾವಳಿ ಸೃಷ್ಟಿಯಾದ ಮೇಲೆ, ಎಲ್ಲಡೆ ಪ್ರವಾಸ ಮಾಡಿ ಹಾನಿ ಸಮೀಕ್ಷೆ ಕೈಗೊಂಡಿದ್ದೇನೆ. ಮನೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸರಕಾರ ಈಗಾಗಲೇ ಸೂಚನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಅವರು ಕಾರವಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಹಾನಿಗೆ ಪರಿಹಾರ ನೀಡಲು ಜಿಲ್ಲಾಡಳಿತಕ್ಕೂ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 690 ಹೆಕ್ಟೇರ್ ಹಾನಿ ಆಗಿದೆ ಎನ್ನುವ ಪ್ರಾಥಮಿಕ ವರದಿ ಇದೆ. ಆದರೆ ಎರಡು ದಿನ ತಡವಾದರೂ ಸಹ ಸೂಕ್ತ ವರದಿ ನೀಡುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿ ಆಸ್ತಿಗಳಗೆ ಸಾಕಷ್ಟು ಹಾನಿಯಾಗಿದೆ. ಇನ್ನಷ್ಟು ಹಾನಿಯ ಸಮೀಕ್ಷೆ ನಡೆದಿದೆ. ನೆರೆಯಲ್ಲಿ ಮೃತಪಟ್ಟವರಿಗೆ 5 ಲಕ್ಷ, ಜಾನುವಾರುಗಳಿಗೆ 25 ಸಾವಿರ ನೀಡಲಾಗುತ್ತಿದೆ.

ಜಲಾಶಯ ನೆರೆ ಸೃಷ್ಟಿಯಾಗುವ ಭೀತಿ ಇಲ್ಲ. ಜಲಾಶಯ ತುಂಬಿದ ಮೇಲೆ ನೀರು ಬಿಡುತ್ತಿಲ್ಲ. ಮಳೆ, ಒಳ ಹರಿವು ಆಧರಿಸಿ ನೀರು ಹಂತ ಹಂತವಾಗಿ ಬಿಡಲಾಗುತ್ತಿದೆ. ಕಳೆದ ವರ್ಷದ ಅನುಭವ ಇದೆ ನಮಗಿದೆ. ಕಳೆದ ವರ್ಷದ ಹಾನಿಗೆ ಪರಿಹಾರ ನೀಡಲಿಲ್ಲ ಎನ್ನುವ ಆರೋಪ ಇದ್ದು ಈ ವರ್ಷದ ಹಾನಿಯಲ್ಲಿ ಸೇರಿಸಿ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಕೊರೊನಾ ಬಗ್ಗೆ ಯಾವುದೇ ರೀತಿಯ ಭಯ ಬೇಡ. ಈ ಮೊದಲಿದ್ದ ಆತಂಕ ಜನರಲ್ಲಿ ಇಲ್ಲ. ಕೊರೊನಾ ಜೀವನದ ಅಂಗವಾಗಿದೆ. ಈ ಬಗ್ಗೆ ಜನರು ಜಾಗೃತವಾಗಿರಬೇಕು. ಸುಮ್ಮನೆ ಆತಂಕ ಪಡುವ ಅಗತ್ಯ ಇಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು