News Karnataka Kannada
Sunday, April 14 2024
Cricket
ಕರ್ನಾಟಕ

ನೂತನ ಶಾಸಕ  ಹಿತ್ಲಳ್ಳಿಯ ಶಾಂತಾರಾಮ ಸಿದ್ದಿ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Photo Credit :

ನೂತನ ಶಾಸಕ  ಹಿತ್ಲಳ್ಳಿಯ ಶಾಂತಾರಾಮ ಸಿದ್ದಿ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ನೂತನ ನಾಮನಿರ್ದೇಶಿತ ಸದಸ್ಯ ಬುಡಕಟ್ಟು ಸಿದ್ದಿ ಜನಾಂಗದ ಶಾಂತಾರಾಮ  ಸಿದ್ದಿ ಅವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ಮನೆಗೆ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು ಮತ್ತು  ಒಳನಾಡು ಜಲಸಾರಿಗೆ ಸಚಿವ  ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ಭೇಟಿ  ನೀಡಿ ನೀಡಿ ಸನ್ಮಾನಿಸಿದರು.

ಬಳಿಕ ಮಾತನಾಡಿ ಕೋಟ, ಕಾಡು-ಮೇಡು, ಗುಡ್ಡ-ಬೆಟ್ಟಗಳಲ್ಲಿ ಬದುಕಿ‌ ಬಾಳುತ್ತಿರುವ, ಕಾಡಿನ ಮಕ್ಕಳೆಂದೆ ಪರಿಗಣಿಸಲ್ಪಡುತ್ತಿರುವ ವನವಾಸಿಗಳನ್ನು ಒಟ್ಟುಗೂಡಿಸಿ ಆ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರ ಭಕ್ತಿ ಮೂಡಿಸುತ್ತಿರುವ  ಶಾಂತರಾಮ ಸಿದ್ಧಿಯವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದು ನಮ್ಮ ಸರ್ಕಾರಕ್ಕೊಂದು ಹೆಮ್ಮೆ ಎಂದು‌‌ ಪ್ರತಿಕ್ರಿಯಿ ನೀಡಿದರು.

ಕಡು ಬಡತನದಲ್ಲಿ ಬದುಕಿ ಬಾಳುತ್ತಿದ್ದ ಶಾಂತರಾಮ ಸಿದ್ದಿಯವರನ್ನು ಶಾಸಕರನ್ನಾಗಿ‌ ಮಾಡಿದ ಪ್ರಧಾನಿ  ‌ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ‌. ಎಸ್. ಯಡಿಯೂರಪ್ಪನವರು ಸೂಕ್ತ ವ್ಯಕ್ತಿಯನ್ನೇ ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ  ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಸದಸ್ಯರು  ಹಾಗೂ  ಪಕ್ಷದ ಕಾರ್ಯಕರ್ತರು ಇದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು