News Karnataka Kannada
Sunday, April 21 2024
Cricket
ಕರ್ನಾಟಕ

ನಿದ್ದೆಗೆ ಜಾರಿದ್ದರಿಂದ ಅಪಘಾತ ನಡೆದಿರುವುದು ಗಮನಕ್ಕೆ ಬಂದಿಲ್ಲ: ಡಿ ಎಸ್ ಸುರೇಶ್

Photo Credit :

ನಿದ್ದೆಗೆ ಜಾರಿದ್ದರಿಂದ ಅಪಘಾತ ನಡೆದಿರುವುದು ಗಮನಕ್ಕೆ ಬಂದಿಲ್ಲ: ಡಿ ಎಸ್ ಸುರೇಶ್

ಚಿಕ್ಕಮಗಳೂರು: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ನಾನು ಇತ್ತೀಚೆಗೆ ಚೇತರಿಸಿಕೊಂಡಿದ್ದೇನೆ. ಅಲ್ಲದೆ ಕಣ್ಣು ನೋವಿದ್ದ ಕಾರಣ ಕಣ್ಣಿಗೆ ಮದ್ದು ಹಾಕಿಕೊಂಡು ಕಾರಿನಲ್ಲಿ ನಿದ್ರಿಸಿದ್ದರಿಂದ ಅಪಘಾತ ನಡೆದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಹೇಳಿದ್ದಾರೆ.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಬುಧವಾರ ಆರೋಗ್ಯ ಇಲಾಖೆಯ ವೈದ್ಯರೊಬ್ಬರು ರಸ್ತೆ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದ ವೇಳೆ ಆ ರಸ್ತೆಯಾಗಿ ಬಂದ ಶಾಸಕ ಡಿ.ಎಸ್.ಸುರೇಶ್ ಗಾಯಾಳುವಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ, ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೋ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ನಾವು ಆ ರಸ್ತೆಯಾಗಿ ಬರುತ್ತಿರಬೇಕಾದರೆ ಅಪಘಾತ ನಡೆದಿರುವುದನ್ನು ಗಮನಿಸಿದ ತನ್ನ ಕಾರು ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ.

ಬಳಿಕ ಅವರು ಹಾಗೂ ತನ್ನ ಗನ್ ಮ್ಯಾನ್ ಗಾಯಾಳು ವೈದ್ಯನ ನೆರವಿಗೆ ಧಾವಿಸಿದ್ದಾರೆ. ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಇಷ್ಟೆಲ್ಲ ಆಗುವಾಗ ನಿದ್ದೆಯಲ್ಲಿದ್ದುದರಿಂದ ನನ್ನ ಅರಿವಿಗೆ ಬಂದಿಲ್ಲ. ಬಳಿಕ ಅವರು ವಿಚಾರ ತಿಳಿಸಿದಾಗ ನನ್ನ ಕಾರಿನಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಚಾಲಕನ ಹೇಳಿದ್ದೆ. ಆದರೆ ಕರೆ ಮಾಡಿದ ಒಂದೆರಡು ನಿಮಿಷಗಳಲ್ಲೇ ಸ್ಥಳಕ್ಕೆ ಆಯಂಬುಲೆನ್ಸ್ ಆಗಮಿಸಿದ್ದು, ಅದರಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಈ ವೇಳೆ ಯಾರೋ ಕಿಡಿಗೇಡಿಗಳು ವೀಡಿಯೊ ಮಾಡಿ ತನ್ನ ವಿರುದ್ಧ ಬೇಕಂತಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಲು ಪೊಲೀಸರು ಸೂಚಿಸಿದ್ದೇನೆ.

ಇದಲ್ಲದೆ ಅಪಘಾತದಿಂದ ಮೃತಪಟ್ಟ ವೈದ್ಯ ಕೋವಿಡ್ ಕರ್ತವ್ಯಕ್ಕೆ ತೆರಳಿರಲಿಲ್ಲ. ಅವರು ತನ್ನ ತೋಟಕ್ಕೆ ತೆರಳಿ ಮದ್ಯಪಾನಿಯಾಗಿ ಬೈಕ್ ಚಲಾಯಿಸಿದ್ದರೆಂದು ತನಗೆ ಮಾಹಿತಿ ಸಿಕ್ಕಿದೆ ಎಂದು ಶಾಸಕ ಡಿ.ಎಸ್.ಸುರೇಶ್ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು