News Karnataka Kannada
Saturday, April 13 2024
Cricket
ಕರ್ನಾಟಕ

ನಾಗಮಂಗಲ: ರಸ್ತೆ ಕಬಳಿಸಿದ ಭೂ ಮಾಲೀಕರ ವಿರುದ್ಧ ಪ್ರತಿಭಟನೆ

Photo Credit :

ನಾಗಮಂಗಲ: ರಸ್ತೆ ಕಬಳಿಸಿದ ಭೂ ಮಾಲೀಕರ ವಿರುದ್ಧ ಪ್ರತಿಭಟನೆ

ನಾಗಮಂಗಲ: ಮೂಲಭೂತ ಸೌಕರ್ಯದಿಂದ ವಂಚಿತವಾದ ಲಕ್ಷ್ಮಿಪುರ ಗ್ರಾಮದ ಗ್ರಾಮಸ್ಥರು  ಮುಖ್ಯ ರಸ್ತೆ ಕಬಳಿಸಿದ ಭೂ ಮಾಲಿಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗುಡ್ಡಗಾಡು ಪ್ರದೇಶದಲ್ಲಿ ಇರುವಂತ ಲಕ್ಷ್ಮಿಪುರ ಗ್ರಾಮದ ಬೋವಿ ಜನಾಂಗದವರು ಕಳೆದ ಐವತ್ತು ವರ್ಷಗಳಿಂದ  ಸುಮಾರು 35  ಗುಡಿಸಲು ಮನೆಗಳಲ್ಲಿ ವಾಸವಾಗಿದ್ದು, ಯಾವುದೇ ಮೂಲಸೌಕರ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ

ಲಕ್ಷ್ಮಿಪುರ ಗ್ರಾಮಕ್ಕೆ ಇದ್ದಂತಹ ಮುಖ್ಯರಸ್ತೆಯನ್ನು ಭೂ ಜಮೀನ್ದಾರರು ಕಬಳಿಸಿ ಬೃಹತ್ ಕಂದಕಗಳನ್ನು ತೆಗೆದಿರುವ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ನಾಗಮಂಗಲದಿಂದ 7 ಕಿಲೋ ಮೀಟರ್ ದೂರದಲ್ಲಿರುವ ಈ ಕುಗ್ರಾಮದಲ್ಲಿ ಬೋವಿ ಜನಾಂಗದವರು ಕಲ್ಲು ಒಡೆಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ 150 ಜನಸಂಖ್ಯೆಯಿರುವ ಗ್ರಾಮದಲ್ಲಿ ಪುಟ್ಟದಾದ ಗುಡಿಸಲು ನಿರ್ಮಿಸಿಕೊಂಡು ವಾಸಿಸುವ ಈ ಬಡ ಜನತೆಯನ್ನು ಇಲ್ಲಿನ ಜನಪ್ರತಿನಿಧಿಗಳು ಮತ ಬ್ಯಾಂಕ್‍ಗಳಾಗಿ ಉಪಯೋಗಿಸಿಕೊಳ್ಳುತ್ತಾರೆ ಹೊರತು ಇವರ ಮೂಲಸೌಕರ್ಯಕ್ಕೆ ಒದಗಿಸುವುದಿಲ್ಲ ಇಲ್ಲಿನ ಜನತೆಗೆ ರಸ್ತೆ, ನೀರು, ಸ್ವಚ್ಛತೆ, ಮಕ್ಕಳ ಪೆÇೀಷಣೆ ಮತ್ತು ವಿದ್ಯಾಭ್ಯಾಸಕ್ಕಾಗಿ  ಅಂಗನವಾಡಿ, ಬೀದಿ ದೀಪ ಕನಸಿನ ಮಾತಾಗಿ ಉಳಿದಿದೆ. ಇದೆಲ್ಲವೂ ಇಲ್ಲಿನ ಜನರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವುದನ್ನು ಎತ್ತಿ ತೋರಿಸುತ್ತಿದೆ.

ಮಾಜಿ ಸಚಿವ ಚೆಲುವರಾಯಸ್ವಾಮಿ ಸ್ವಗ್ರಾಮವಾದ ಇಜ್ಜಲಘಟ್ಟ ದಾಖಲೆ ಗ್ರಾಮವಾದ ಲಕ್ಷ್ಮಿಪುರ ದರಿದ್ರಲಕ್ಷ್ಮಿಯೇ ವಕ್ಕರಿಸಿ ಇಲ್ಲಿನ ಬಡಜನತೆ ಪ್ರತಿಯೊಂದು ಸೌಲಭ್ಯಕ್ಕೆ ಪಕ್ಕದ ಗ್ರಾಮವಾದ ಚೋಟಕ್ಯಾತನಹಳ್ಳಿ ಗ್ರಾಮವನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಲಕ್ಷ್ಮಿಪುರ ವ್ಯಾಪ್ತಿಯ ಸುತ್ತಮುತ್ತ ಇಲ್ಲಿನ ಜಮೀನಿಗೆ ವಜ್ರದ ಬೆಲೆ ಇದೆ ಏಕೆಂದರೆ ಹಲವಾರು ನೂರಾರು ಕಲ್ಲುಬಂಡೆಗಳು ಮತ್ತು ಹತ್ತಾರು ಕ್ರಷರ್ ಗಳು ಅಕ್ರಮವಾಗಿ ನಡೆಯುತ್ತಿದ್ದರೂ  ತಾಲೂಕು ಆಡಳಿತ  ಕೇಳುವುದಿಲ್ಲ. ಸುತ್ತಮುತ್ತ ಇರುವಂತ ಜಮೀನುಗಳಿಗೆ ಉತ್ತಮವಾದ ಬೆಲೆ ಇದೆ ಆದ್ದರಿಂದ ಜಮೀನು  ಅಗಲೀಕರಣ ಮಾಡುವ ಉದ್ದೇಶದಿಂದ ಭೂಮಾಲೀಕರು ಮುಖ್ಯರಸ್ತೆಯನ್ನು ಮುಚ್ಚಿ ಹಾಕಿ ನಿಮ್ಮ ಗ್ರಾಮಕ್ಕೆ ನಾಲೇ ರಸ್ತೆಯಲ್ಲಿ ಬಳಸಿಕೊಂಡು ಹೋಗಿ ಎಂದು ಜಮೀನ್ದಾರರು ಬೆದರಿಸುತ್ತಿದ್ದಾರೆ

ಗ್ರಾಮಸ್ಥರು ಹೇಳುವಂತೆ ಈ ಮುಖ್ಯರಸ್ತೆಗೆ ಹಿಂದೆ ಕೂಡ ಸರ್ಕಾರದ ಅನುದಾನದಲ್ಲಿ ಹಲವು ಬಾರಿ ರಸ್ತೆ ನಿರ್ಮಿಸಲು ಹಣ ವಿನಿಯೋಗಿಸಲಾಗಿದ್ದು, ಇರುವ ಒಂದು ರಸ್ತೆಯನ್ನು ಉಳಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಗ್ರಾಮಕ್ಕೆ ಇದ್ದಂತಹ ಒಂದು ಮುಖ್ಯ ರಸ್ತೆಯನ್ನು ಮುಚ್ಚಿರುವ ಕುರಿತು ಸ್ಥಳೀಯ ಪೆÇಲೀಸ್ ಠಾಣೆ ಹಾಗೂ ತಾಲೂಕು ದಂಡಾಧಿಕಾರಿ ಕಚೇರಿಗೆ ದೂರು ಸಲ್ಲಿಸಿ ಹಲವು ಬಾರಿ ಮನವಿ ಮಾಡಿಕೊಂಡರೂ ಕೂಡ ರಾಜಕೀಯ ಪ್ರಭಾವದ ಬಲಾಢ್ಯ ಜಮೀನ್ದಾರರ ಮುಂದೆ ಕಡುಬಡವರಾದ ಭೋವಿ ಜನಾಂಗದ ಜನತೆಯ ಮಾತು ಮಾತ್ರ ನಡೆಯುತ್ತಿಲ್ಲ. ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು  ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶಾಸಕ ಸುರೇಶ್ ಗೌಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಲಕ್ಷ್ಮಿಪುರ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು