News Karnataka Kannada
Thursday, April 18 2024
Cricket
ಕರ್ನಾಟಕ

ಧರ್ಮ ಓಲೈಕೆ ರಾಜಕಾರಣ ಅಪಾಯಕಾರಿ: ಸಚಿವ ವಿ ಸೋಮಣ್ಣ 

Photo Credit :

ಧರ್ಮ ಓಲೈಕೆ ರಾಜಕಾರಣ ಅಪಾಯಕಾರಿ: ಸಚಿವ ವಿ ಸೋಮಣ್ಣ 

ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯರಾಗಿದ್ದು   ಯಾವುದೇ ಒಂದು ಧರ್ಮವನ್ನು ಓಲೈಸುತ್ತಾ  ರಾಜಕಾರಣ ಮಾಡಬಾರದು ಇದು ಅಪಾಯಕಾರಿ  ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ  ಹಿಂಸೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಈ ಹಿಂದೆ ಸಿಏಏ ಮತ್ತು ಎನ್‌ಅರ್‌ಸಿ  ವಿರುದ್ದ ದ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ನೀಡಿದ ಕುಮ್ಮಕ್ಕಿನಿಂದಲೇ   ಗಲಾಟೆಗೆ ಕಾರಣ  ಎನ್ನುವ ಸ್ವಪಕ್ಷಿಯ ಕೆಲವರ ಆರೋಪಕ್ಕೆ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ‌

ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿದ್ದವರು. ಹೇಗೆ ಸ್ಪಂದಿಸಿದ್ದಾರೋ ಗೊತ್ತಿಲ್ಲ. ಅವರಿಗೂ ಪರಿಜ್ಞಾನ ಇದೆ ಎಂದು ಭಾವಿಸಿದ್ದೇನೆ. ಅವರು ಒಂದೇ ಧರ್ಮವನ್ನು ಓಲೈಕೆ ಮಾಡಿ ವರ್ತಿಸಬಾರದು ಎಂದರು.ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗಲಭೆ ವೇಳೆ ಶೂಟೌಟ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೋಗಿ ಸಾಂತ್ವನ ಹೇಳಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ಅವರು, ನೋಡಿ ಯಾರು ಯಾರ ಮನೆಗಾದರೂ ಹೋಗಲಿ. ನಾವೆಲ್ಲರೂ ಭಾರತೀಯರು. ದೇಶದ ಭದ್ರತೆ, ಅಖಂಡತೆ ಕಾಪಾಡುವುದು ನಮ್ಮ ಕರ್ತವ್ಯ. ಯಾರೇ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಆರೋಪಿಗಳ ರಕ್ಷಣೆಗೆ ನಿಲ್ಲಬಾರದು.

ಗಲಭೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಗಲಭೆಕೋರರಿಗೆ ಶಿಕ್ಷೆ ಆಗದಿದ್ದರೆ ಮುಂದೆಯೂ ಗಲಭೆಗಳು ಆಗುತ್ತವೆ ಎಂದು ಅವರು ಎಚ್ಚರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು