News Karnataka Kannada
Wednesday, April 24 2024
Cricket
ಕರ್ನಾಟಕ

ದೇಶಕ್ಕೆ ಮಾದರಿಯಾದ ನೂತನ ಬೆಳೆ ಸಮೀಕ್ಷೆ ಪದ್ಧತಿ ಜಾರಿ: ಕೃಷಿ ಸಚಿವ ಬಿ.ಸಿ.ಪಾಟೀಲ

Photo Credit :

ದೇಶಕ್ಕೆ ಮಾದರಿಯಾದ ನೂತನ ಬೆಳೆ ಸಮೀಕ್ಷೆ ಪದ್ಧತಿ ಜಾರಿ: ಕೃಷಿ ಸಚಿವ ಬಿ.ಸಿ.ಪಾಟೀಲ

ಹಾವೇರಿ: ಕಿಸಾನ್ ಸಮ್ಮಾನ್ ಯೋಜನೆಯಡಿ ಸರ್ಕಾರ ಒಂದು ಸಾವಿರ ಕೋಟಿ ರೂ.ಅನುದಾನ ಬಿಡುಗಡೆಮಾಡಿದ್ದು, ರಾಜ್ಯದ 50 ಲಕ್ಷ ರೈತರ ಖಾತೆಗೆ ಇಂದಿನಿಂದ ಹಣ ಜಮೆಯಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ತಿಳಿಸಿದರು.

ಹಾವೇರಿ ತಾಲೂಕು ಅಗಡಿ ಗ್ರಾಮದ ರೈತ ನಾಗಪ್ಪ ಬಸೇಗಣ್ಣಿ ಎಂಬುವ ಹೊಲದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ರಮ ವೀಕ್ಷಣೆಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳೆ ಸಮೀಕ್ಷೆ ಉತ್ಸವ ರೈತರಿಗೆ ಸುವರ್ಣಾವಕಾಶವಾಗಿದೆ. ಭಾರತದಲ್ಲೇ ಪ್ರಪ್ರಥಮ ಬಾರಿಗೆ ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿ ಫೋಟೋ ತೆಗೆದು ಮೊಬೈಲ್ ಆಪ್ ಮೂಲಕ ಮಾಹಿತಿಯನ್ನು ಅಪ್‍ಲೋಡ್ ಮಾಡುವ ವಿನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದ ಜಾರಿಗೆ ತಂದಿದೆ. ರೈತರಿಗೆ ತಮ್ಮ ಬೆಳೆಯನ್ನು ತಾವೇ ದೃಢೀಕರಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದು ಹೇಳಿದರು.

ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಪ್ರತಿ ವರ್ಷ ಪಿಆರ್‍ಗಳ ಮೂಲಕ (ಖಾಸಗಿ ಪ್ರತಿನಿಧಿ) ಸರ್ವೇ ನಂಬರ್ ಆಧಾರದಲ್ಲಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತಿತ್ತು. ಇದರಿಂದ ಹಿಸ್ಸೆ ಪ್ಲಾಟ್‍ಗಳ ರೈತರ ಬೆಳೆ ಸಮೀಕ್ಷೆಯಿಂದ ಕೈತಪ್ಪಿಹೋಗಿ ಪರಿಹಾರ ಪಡೆಯಲು ತೊಂದರೆಯಾಗುತ್ತಿತ್ತು. ಈ ಗೊಂದಲ, ತೊಂದರೆಯನ್ನು ನೂತನ ಬೆಳೆ ಸಮೀಕ್ಷೆ ಪದ್ಧತಿಯಿಂದ ನಿವಾರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 2.10 ಕೋಟಿ ಖಾತೆಗಳ ಪೈಕಿ 1.50 ಕೋಟಿ ಖಾತೆಗಳು ಮಾತ್ರ ಹಿಸ್ಸಾಪೋಡಿಗಳಾಗಿವೆ. ಉಳಿದ ಖಾತೆಗಳ ಪೋಡಿಯಾಗದ ಕಾರಣ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ಗೊಂದಲವನ್ನು ನಿವಾರಿಸಿ ಹೊಸ ಬೆಳೆ ಸಮೀಕ್ಷೆ ಜಾರಿಗೆ ತರಲಾಗಿದೆ. ಹಿಸ್ಸಾವಾರು ಅಣ್ಣ-ತಮ್ಮಂದಿರು ತಮ್ಮ ಭಾಗಕ್ಕೆ ಬಂದ ಜಮೀನಿನಲ್ಲಿ ಬೆಳೆದ ಬೆಳೆಯ ಫೋಟೋ ತೆಗೆದು ಫೋಟೋ ತೆಗೆದು ಮೊಬೈಲ್ ಆಪ್‍ನಲ್ಲಿ ಅಪ್‍ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆಂಡ್ರೈಡ್ ಮೊಬೈಲ್ ಇಲ್ಲದ ರೈತರಿಗೆ ಖಾಸಗಿ ಪ್ರತಿನಿಧಿಗಳು ನೆರವು ನೀಡಲಿದ್ದಾರೆ. ಈ ಉದ್ದೇಶಕ್ಕಾಗಿ ಪಿಆರ್‍ಒಗಳನ್ನು ನೇಮಕ ಮಾಡಲಾಗಿದೆ. ಕಂದಾಯ, ತೋಟಗಾರಿಕೆ, ರೇಷ್ಮೆ, ಕೃಷಿ ಇಲಾಖೆಗಳ ಸಹಭಾಗಿತ್ವದಲ್ಲಿ ಬೆಳೆ ವಿಮೆ ಸಮೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಬಾಕಿ ಬೆಳೆವಿಮೆ ಪರಿಹಾರ: 2019-20ನೇ ಸಾಲಿನ ಬೆಳೆವಿಮೆಯ ವ್ಯತ್ಯಯದ ಸಮಸ್ಯೆಯನ್ನು ಸಂಪೂರ್ಣ ನಿವಾರಿಸಲಾಗಿದೆ. ಇದೇ ಮಂಗಳವಾರ ರೈತರ ಖಾತೆಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ. ಹಾಗೂ 2015-16ನೇ ಸಾಲಿನ ಬೆಳೆಯ ವ್ಯತ್ಯದಿಂದ ಬ್ಯಾಡಗಿ ತಾಲೂಕು ಮೋಟೇಬೆನ್ನೂರ ಹೋಬಳಿಯ ರೈತರ ರೂ.1.94 ಕೋಟಿ ಹಾಗೂ ರೂ.5.24 ಕೋಟಿ ಬೆಳೆವಿಮೆ ಬಾಕಿ ಪಾವತಿಯ ಸಮಸ್ಯೆ ಪರಿಹರಿಸಲಾಗಿದೆ. ರೂ.1.94 ಕೋಟಿ ಬೆಳೆವಿಮೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಹಾಗೂ ರೂ.5.24 ಕೋಟಿಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು ಕೋರ್ಟ್‍ಮೊರೆಹೋಗಿದ್ದವು. ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ವಿಮಾ ಕಂಪನಿಗಳು ನ್ಯಾಯಲದಿಂದ ಪ್ರಕರಣ ಹಿಂಪಡೆಯಲು ಒಪ್ಪಿಗೆ ಸೂಚಿಸಿವೆ. ಇದರಿಂದ ಬೆಳೆವಿಮೆಯ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಿವೆ ಎಂದು ಹೇಳಿದರು.

ಯೂರಿಯಾ ಗೊಬ್ಬರದ ಸಮಸ್ಯೆ ಕುರಿತಂತೆ ವಿವರಿಸಿದ ಸಚಿವರು, ಎಪ್ರಿಲ್‍ನಿಂದ ಜುಲೈ ಮಾಹೆಯವರೆಗೆ 72,200 ಸಾವಿರ ಮೆಟ್ರಿಕ್ ಟನ್ ಈವರೆಗೆ 82,856 ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆ ಮಾಡಲಾಗಿದೆ. 10656 ಮೆಟ್ರಿಕ್ ಟನ್ ನಿಗಧಿತ ಗುರಿಗಿಂತ ಹೆಚ್ಚುವರಿಯಾಗಿ ವಿತರಣೆ ಮಾಡಲಾಗಿದೆ. ಈಗಲೂ ಸಹ ಬೇಡಿಕೆತಕ್ಕಂತೆ ಗೊಬ್ಬರವನ್ನು ಒದಗಿಸುವ ಕೆಲಸಮಾಡಲಾಗುತ್ತಿದೆ. ಕೃತಕ ಅಭಾವ ಸೃಷ್ಟಿಸುವವರ ಮೇಲೆ ಹಾಗೂ ಹೆಚ್ಚು ದರ ವಸೂಲಿ ಮಾಡುವವರ ಕೃಷಿ ಜಾಗೃತ ನಿಗಾ ವಹಿಸಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಬೆಳೆ ಸಮೀಕ್ಷೆ ಪ್ರಚಾರ ಪೋಸ್ಟ್‍ಗಳನ್ನು ಬಿಡುಗಡೆಗೊಳಿಸಿದರು ಹಾಗೂ ಬೆಳೆ ಸಮೀಕ್ಷೆ ವಾಹನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ನೆಹರು ಓಲೇಕಾರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಉಪನಿರ್ದೇಶಕರಾದ ಶ್ರೀಮತಿ ಸ್ಪೂರ್ತಿ ಹಾಗೂ ಕರಿಯಲ್ಲಪ್ಪ, ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು