News Karnataka Kannada
Wednesday, April 24 2024
Cricket
ಕರ್ನಾಟಕ

ದೇವಸ್ಥಾನಕ್ಕೆ ನುಗ್ಗಿ ಉತ್ಸವ ಮೂರ್ತಿ ಸಹಿತ ಆಭರಣ ಕಳವು

Photo Credit :

ದೇವಸ್ಥಾನಕ್ಕೆ ನುಗ್ಗಿ ಉತ್ಸವ ಮೂರ್ತಿ ಸಹಿತ ಆಭರಣ ಕಳವು

ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯ  ಮೀಂಜ  ಚಿಗುರುಪಾದೇಯ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನಕ್ಕೆ  ನುಗ್ಗಿರುವ ಕಳ್ಳರು ಉತ್ಸವ ಮೂರ್ತಿ  ಸಹಿತ  ಬೆಳ್ಳಿಯ ಆಭರಣಗಳನ್ನು  ಕಳವು ಮಾಡಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ದೇವಸ್ಥಾನ ಗೋಪುರದ  ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದಾರೆ.  ಅರ್ಚಕರ ಕೊಠಡಿಯಲ್ಲಿದ್ದ  ಗರ್ಭಗುಡಿಯ  ಕೀಲಿ ಕೈ ಬಳಸಿ ಬಾಗಿಲು ತೆರೆದು ಕಳವು ನಡೆಸಲಾಗಿದೆ.

ಗರ್ಭಗುಡಿಯ  ಶಿವಲಿಂಗ ಮೂರ್ತಿಯ ಎರಡು ಜೊತೆ  ಬೆಳ್ಳಿಯ ಕಣ್ಣು, ಬೆಳ್ಳಿಯ ಹರಿವಾಣ, ಧಾರೆಯ  ಬಟ್ಟಲು, ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.

ಕಾಣಿಕೆ ಹುಂಡಿಗಳನ್ನು ತೆರೆದು ಹಣ ದೋಚಿದ್ದು, ಕ್ಷೇತ್ರದ  ಎರಡು ಕಚೇರಿಗಳಲ್ಲಿ  ಕಳವಿಗೆ ಯತ್ನ ನಡೆದಿದೆ.

ಬೆಳಿಗ್ಗೆ ಅರ್ಚಕ ಗೋಪಾಲ ಕೃಷ್ಣ ಭಟ್  ಆಗಮಿಸಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ದೇವಸ್ಥಾನ ಸಮಿತಿಯ ಗೋಪಾಲಕೃಷ್ಣ ಅವರು ನೀಡಿದ ದೂರಿನಂತೆ ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು