News Karnataka Kannada
Friday, April 19 2024
Cricket
ಕರ್ನಾಟಕ

ದಲೈ ಲಾಮಾ ನಂತರ  ಚೀನಾದ ವ್ಯಕ್ತಿಯನ್ನು ಟಿಬೆಟಿನ ಆಧ್ಯಾತ್ಮಿಕ ಗುರುವನ್ನಾಗಿಸುವ ಸಂಚು ಬಹಿರಂಗ

Photo Credit :

ದಲೈ ಲಾಮಾ ನಂತರ  ಚೀನಾದ ವ್ಯಕ್ತಿಯನ್ನು ಟಿಬೆಟಿನ ಆಧ್ಯಾತ್ಮಿಕ ಗುರುವನ್ನಾಗಿಸುವ ಸಂಚು ಬಹಿರಂಗ

ಮಡಿಕೇರಿ: ತನ್ನ ಸುತ್ತ ಮುತ್ತಲಿನ ಇತರ ದೇಶಗಳಿಗೆ ಸೇರಿದ ಭೂ ಭಾಗವನ್ನು ಕಬಳಿಸಲು ಸದಾ ಹಾತೊರೆಯುವ  ಚೀನಾವು ತಾನು ಈಗಾಗಲೇ ಕಬಳಿಸಿರುವ ಟಿಬೆಟ್‌  ನ್ನು  ಮರು ಪಡೆಯಲು ಟಿಬೇಟನ್ನರು  ಪ್ರಯತ್ನಿಸದಂತೆ  ಮಾಡಲು ಭಾರೀ  ಷಡ್ಯಂತ್ರ  ರೂಪಿಸಿದ್ದು ಇದನ್ನು ಜಾರಿಗೊಳಿಸಲು  ಕೋಟ್ಯಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿರುವ ಕುರಿತು ಸ್ಫೋಟಕ ಮಾಹಿತಿ  ಬಹಿರಂಗಗೊಂಡಿದೆ.

ಇಲ್ಲಿಗೆ ಸಮೀಪದ  ಬೈಲಾಕುಪ್ಪೆಯಲ್ಲಿರುವ ಸೆರಾ  ಮೊನಾಸ್ಟ್ರಿಯ (ಮಠ) ಕೆಲವು ಸನ್ಯಾಸಿಗಳಿಗೆ (ಲಾಮ) ಲಂಚ ನೀಡಿದ್ದಾರೆ ಎಂದು ಆರೋಪದಡಿಯಲ್ಲಿ  ಕಳೆದ ವಾರ ದೆಹಲಿಯಲ್ಲಿ   ಚೀನಾದ  ಪ್ರಜೆ  ಚಾರ್ಲಿ ಪೆಂಗ್ ಅವರನ್ನು  ’ ಜಾರಿ ನಿರ್ದೇಶನಾಲಯ (ಇಡಿ)  ಬಂಧಿಸಿದೆ. ಆರೋಪಿಯ ವಿರುದ್ದ ಮನಿ ಲಾಂಡರಿಂಗ್‌ ಮೊಕದ್ದಮೆ ದಾಖಲಿಸಲಾಗಿದೆ.

ಸೆರಾ ಮೇ ಮೊನಾಸ್ಟ್ರಿಯ   ಜಮಾಯಂಗ್ ಜಿನ್ಪಾ ಅವರಿಗೆ ‘ಎಸ್‌ಕೆ ಟ್ರೇಡಿಂಗ್’  ಕಂಪೆನಿಯ  ಖಾತೆಯಿಂದ 30 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ  ಎಂದು ಮೊನಾಸ್ಟ್ರಿಯ ಮುಖ್ಯಸ್ಥರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಟಿಬೇಟನ್‌  ಸನ್ಯಾಸಿಗಳಿಗೆ ಹಣವನ್ನು ವರ್ಗಾಯಿಸಲು ಪೆಂಗ್ ಬಳಸುವ ಹಲವಾರು ಶೆಲ್ ಕಂಪೆನಿಗಳಲ್ಲಿ ಈ ಖಾತೆಯು ಒಂದು ಎಂದು ತನಿಖಾಧಿಕಾರಿ ಹೇಳಿದ್ದಾರೆ.

ದೆಹಲಿಯಲ್ಲಿ ವಾಸಿಸುತ್ತಿರುವ ಕೆಲವು ಟಿಬೆಟಿಯನ್ನರಿಗೆ ಪೆಂಗ್ ಲಂಚವನ್ನು ನೀಡುತಿದ್ದಾರೆ ಎಂಬ ಅರೋಪದ ಬಗ್ಗೆ  ತನಿಖಾ ಸಂಸ್ಥೆಗಳು  ತನಿಖೆ ನಡೆಸುತ್ತಿವೆ.

ದಲೈ ಲಾಮಾ ಮತ್ತು ಅವರ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಲು ದೆಹಲಿಯ ಮಜ್ನು ಕಾ ತಿಲಾ ಸೇರಿದಂತೆ 42 ವರ್ಷದ ಚೀನಾದ  ಪ್ರಜೆ ಸೇರಿದಂತೆ   ದೇಶಾದ್ಯಂತ ಕೆಲವು ‘ಲಾಮಾಗಳು’   ಲಂಚ ನೀಡುತ್ತಿದ್ದಾರೆ ಎಂದು  ಪ್ರಮುಖ ಮಾಧ್ಯಮವೊಂದು   ಈ ಹಿಂದೆ ವರದಿ ಮಾಡಿತ್ತು. ದಲೈ ಲಾಮಾ ಅವರ ನಂತರ ಚೀನಾದ ವ್ಯಕ್ತಿಯೊಬ್ಬರನ್ನು  ದಲೈ ಅವರ ಉತ್ತರಾಧಿಕಾರಿಯನ್ನಾಗಿಸಲು  ಈ ರೀತಿ ಲಂಚದ ಹಣವನ್ನು  ನೀಡಿ ಖರೀದಿಸಲಾಗುತ್ತಿದೆ ಎಂದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

 

ಸೆರಾ ಜೆ ಮೊನಾಸ್ಟ್ರಿಯ   ಮತ್ತೊಬ್ಬ  ಲಾಮಾ  ಥುಪ್ಟನ್ ಚೋಡಕ್‌ಗೆ 15 ಲಕ್ಷ ರೂ., ಫುಂಟ್‌ಸೊಕ್ ಧಾರ್ಗ್ಯಾಲ್, ನ್ಗಾವಾಂಗ್ ಲೊಸೆಲ್ ಮತ್ತು ತಾಶಿ ಚೊಯೆಪಲ್‌ಗೆ ತಲಾ 10 ಲಕ್ಷ ರೂ., ಥುಪ್ಟನ್ ವಾಂಗ್‌ಚುಕ್‌ಗೆ 8 ಲಕ್ಷ ರೂ. 7 ಲಕ್ಷ ರೂಪಾಯಿಗಳನ್ನು   ನೀಡಲಾಗಿದೆ ಎಂದೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಕಂಪನಿಯು ಕರ್ನಾಟಕದ ಮುಂಡ್‌ಗೋಡ್‌ನಲ್ಲಿ ಡ್ರೆಪುಂಗ್ ಲೋಸೆಲಿಂಗ್‌ಗೆ 10 ಲಕ್ಷ ರೂ. ಮತ್ತು ಸೋನಮ್ ಡೋರ್ಜಿಗೆ 7 ಲಕ್ಷ ರೂ. ಮುಂಡ್‌ಗೋಡ್‌ನ ಲೋಬ್‌ಸಾಂಗ್ ಡೋರ್ಜಿ ಡ್ರೆಪುಂಗ್ ಲೊಸೆಲಿಂಗ್‌ಗೆ  ಎಂಬ ಲಾಮ ಗೆ ಬಹಿರಂಗಪಡಿಸದ ಮೊತ್ತವನ್ನು ಸಹ ಪಾವತಿಸಲಾಗಿದೆ. ನವೀ ಮುಂಬಯಿಯಲ್ಲಿ ಪ್ಯಾನ್ ಮಿಂಗ್ಮಿಂಗ್ ಎಂಬ ಸನ್ಯಾಸಿಗೆ ಎಸ್‌ ಕೆ ಟ್ರೇಡಿಂಗ್ ಖಾತೆಯಿಂದ 10 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.

ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಬೈಲಕೊಪ್ಪೆಯು   ಧರ್ಮಶಾಲಾ ನಂತರ ಟಿಬೆಟ್‌ನ ಹೊರಗೆ ಅತಿದೊಡ್ಡ ಟಿಬೆಟಿಯನ್ ವಸಾಹತು  ಅಗಿದೆ. ಚಾರ್ಲಿ ಪೆಂಗ್‌ನಿಂದ ಲಂಚ ಪಡೆದ ಆರೋಪ ಹೊತ್ತಿರುವ ಹತ್ತು ಲಾಮಾಗಳಲ್ಲಿ   ಆರು ಮಂದಿ ಸೆರಾ  ಮೊನಾಸ್ಟ್ರಿಯಲ್ಲಿ  ವಾಸಿಸುತ್ತಿದ್ದಾರೆ. ಈಗ  ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ,    ಮೊನಾಸ್ಟ್ರಿಗೆ ಹೊರಗಿನವರಿಗೆ ಪ್ರವೇಶವನ್ನು ನಿರ್ಭಂದಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆಗಾಗಿ  ಸೆರಾ ಮೊನಾಸ್ಟ್ರಿಗೆ ಈ ವರದಿಗಾರ ದೂರವಾಣಿ ಮಾಡಿದಾಗ ಯಾರೂ ಕರೆ ಸ್ವೀಕರಿಸಲಿಲ್ಲ. 

“ಕೆಲವು  ಲಾಮಾಗಳು  ದೆಹಲಿಯಲ್ಲಿ ಬಂಧಿಸಲ್ಪಟ್ಟ ಚೀನಾದ ವ್ಯಕ್ತಿಯಿಂದ ಹಣವನ್ನು ಪಡೆದರು. ಆದರೆ ಈ  ಲಾಮಗಳು ಈ ಹಣವನ್ನು  ಕುಟುಂಬ ಮತ್ತು ಸ್ನೇಹಿತರು ನೀಡಿದ್ದು  ಎಂದು ಹೇಳುತ್ತಾರೆ, ಅವರು ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಾರೆ.   ಆದ್ದರಿಂದ ಹಣವನ್ನು ಕುಟುಂಬದಿಂದ ಕಳುಹಿಸಲಾಗಿದೆ.  ಚೀನಾ  ಸರ್ಕಾರ ಅನುಮತಿಸದ ಕಾರಣ ಟಿಬೆಟ್‌ನಿಂದ ಭಾರತದಲ್ಲಿ ವಾಸಿಸುವ ಜನರಿಗೆ ಹಣವನ್ನು ಕಳುಹಿಸುವುದು ಅಷ್ಟು ಸುಲಭವಾಗಿಲ್ಲ   . ವೆಸ್ಟ್ರನ್‌  ಯೂನಿಯನ್ ಹಣ ವರ್ಗಾವಣೆಯನ್ನು ಏಕೆ ಬಳಸಲಿಲ್ಲ ಎಂದು ನಾನು ಅವರನ್ನು ಕೇಳಿದೆ. ಆದರೆ ಅವರು ಇಲ್ಲ ‘ ಅದನ್ನು ಬಳಸಲು ಅನುಮತಿಸಲಾಗುವುದಿಲ್ಲ.   ಕೆಲವು ಮೊತ್ತವು   ದೊಡ್ಡದಾಗಿದೆ   ಲಾಮಾಗಳು  ಪದವೀಧರರಾದಂತಹ ಸಂದರ್ಭದಲ್ಲಿ  5,000 ಜನರಿಗೆ ಆತಿಥ್ಯ ನೀಡಬೇಕಾಗುತ್ತದೆ.ಇದಕ್ಕಗಿ ದೊಡ್ಡ ಮೊತ್ತದ ಹಣವನ್ನು ಕುಟುಂಬದಿಂದ ಪಡೆಯುತ್ತಾರೆ.  ಇದನ್ನು  ತನಿಖಾ ಸಂಸ್ಥೆಗಳೇ ತನಿಖೆ ಮಾಡಬೇಕಿದೆ ಎಂದು  ಸೆರಾ ಮೊನಾಸ್ಟ್ರಿಯ ಮುಖ್ಯ ಸನ್ಯಾಸಿ ತಾಶಿ  ಟಿವಿ ಚಾನಲ್‌ ಒಂದಕ್ಕೆ ತಿಳಿಸಿದ್ದಾರೆ.

 

“ನಾನು ಇಬ್ಬರು ಸನ್ಯಾಸಿಗಳೊಂದಿಗೆ ಮಾತನಾಡಿದ್ದೇನೆ, ಅವರು ಈ ವ್ಯಕ್ತಿಯನ್ನು (ಚಾರ್ಲಿ ಪೆಂಗ್) ಎಂದಿಗೂ ಭೇಟಿ ಮಾಡಿಲ್ಲ. ಅವರು ಹಣವನ್ನು ವರ್ಗಾವಣೆ ಮಾಡಲು ಯಾರನ್ನಾದರೂ ಬಳಸಿದ್ದಾರೆ. ಅವರಲ್ಲದೆ, ಈ ವ್ಯಕ್ತಿ ಯಾರೆಂದು ಅವರಿಗೆ ತಿಳಿದಿಲ್ಲ” ಎಂದು  ತಾಶಿ ತಿಳಿಸಿದ್ದಾರೆ. ಈ ಆರೋಪಗಳ ಬಗ್ಗೆ  ಮೊನಾಸ್ಟ್ರಿಯು ಯಾವುದೇ ಆಂತರಿಕ ತನಿಖೆಯನ್ನು ಪ್ರಾರಂಭಿಸದಿದ್ದರೂ, ತಶಿ ಅವರು ತಾರ್ಕಿಕ ತೀರ್ಮಾನಕ್ಕೆ ಬರಲು ಭಾರತ ಸರ್ಕಾರದ ತನಿಖೆಗಾಗಿ ಕಾಯುತ್ತಿದ್ದೇವೆ ಮತ್ತು ಸನ್ಯಾಸಿಗಳು ತಪ್ಪು ಮಾಡಿದ್ದಾರೆಂದು ಕಂಡುಬಂದಲ್ಲಿ  ಮೊನಾಸ್ಟ್ರಿಯು ಅವರ ಪರ ಇರುವುದಿಲ್ಲ ಎಂದು ತಾಶಿ ಹೇಳಿದರು.

ದೆಹಲಿ ಮತ್ತು ಕರ್ನಾಟಕದ ಪೋಲೀಸರು  ಈ ತಿಂಗಳಿನಲ್ಲೆ   ಕನಿಷ್ಠ 30  ಲಾಮಾಗಳನ್ನು    ಅಕ್ರಮ ಹಣ ವರ್ಗಾವಣೆಯ ಕುರಿತು  ಪ್ರಶ್ನಿಸಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಚೀನಾವು  ಭಾರತದಲ್ಲಿ ಹಲವಾರು ಹವಾಲಾ ಏಜೆಂಟರನ್ನು ಹೊಂದಿದ್ದು  ಇವರ ಮೂಲಕ ಟಿಬೇಟನ್‌ ಲಾಮಾಗಳನ್ನು ಹಣ ಕೊಟ್ಟು ಖರೀದಿಸುತ್ತಿದೆ. ಈಗ ಬಂದಿತನಾಗಿರುವ ಪೆಂಗ್‌ ಈ ಏಜೆಂಟರುಗಳಲ್ಲಿ ಒಬ್ಬನಾಗಿದ್ದು  ಟಿಬೇಟನ್ನರು  ಮುಂದೆ ತಮ್ಮ ತಾಯ್ನಾಡನ್ನು ಮರಳಿ ಪಡೆಯುವ ಹೋರಾಟಕ್ಕೆ ಯತ್ನಿಸುವುದನ್ನು ಈ ಮೂಲಕ ತಡೆಯೊಡ್ಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು