News Karnataka Kannada
Thursday, April 18 2024
Cricket
ಕರ್ನಾಟಕ

ದಕ್ಷಿಣಕಾಶಿ ನಂಜನಗೂಡಲ್ಲಿ ಪ್ರವಾಹದ ಆತಂಕ

Photo Credit :

ದಕ್ಷಿಣಕಾಶಿ ನಂಜನಗೂಡಲ್ಲಿ ಪ್ರವಾಹದ ಆತಂಕ

ನಂಜನಗೂಡು: ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವ ಹಿನ್ನಲೆಯಲ್ಲಿ ದಕ್ಷಿಣಕಾಶಿ ನಂಜನಗೂಡಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾಗಿರುವ ಕಾರಣ ಕಬಿನಿ ಜಲಾಶಯ ತುಂಬಿ ತುಳುಕುತ್ತಿದ್ದು, ಜಲಾಶಯದಿಂದ 40 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರ ಬಿಟ್ಟಿರುವ ಕಾರಣದಿಂದ ನಂಜನಗೂಡಿನ ಕಪಿಲಾ ನದಿ ಶೇ.80ರಷ್ಟು ತುಂಬಿ ತುಳುಕುತ್ತಿದೆ. ಈಗಾಗಲೇ ಕಪಿಲಾ ನದಿಯ ದಡದ ಸ್ಥಾನಘಟ್ಟದ ಕೊನೆಯ ಮೆಟ್ಟಲುಗಳ ವರಗೆ ತಂಬಿದ್ದು,  ಇಲ್ಲಿನ ಹದಿನಾರು ಕಾಲು ಮಂಟಪ ಮುಕ್ಕಾಲು ಭಾಗ ಮುಳುಗಡೆಯಾಗಿದೆ.

ಕಪಿಲಾ ನದಿಯ ಸನಿಹದಲ್ಲಿರುವ ತೋಪಿನ ಬೀದಿ, ಕುರುಬಗೇರಿ, ಚಾಮಲಾಪುರ ಬಿದಿ, ಹಳ್ಳದಕೆರಿ ಬಡಾವಣೆಯ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಕಳೆದ ಮಳೆಗಾಲದಲ್ಲಿಯೂ ಕಬಿನಿ ಜಲಾಶಯದಿಂದ ನೀರು ಬಿಟ್ಟ ಹಿನ್ನಲೆಯಲ್ಲಿ ಕಪಿಲಾ ನದಿಯಲ್ಲಿ ಪ್ರವಾಹವೇರ್ಪಟ್ಟು ನಂಜನಗೂಡು ಸೇರಿದಂತೆ ಹಲವು ತಗ್ಗು ಪ್ರದೇಶಗಳು ಮತ್ತು ಜಮೀನುಗಳು ಜಲಾವೃತಗೊಂಡಿದ್ದವು. ಇದರಿಂದ ಬೆಳೆನಾಶವಾಗಿ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ಬಾರಿಯೂ ಅದೇ ಪುನರಾರ್ತನೆಯಾಗುವ ಭಯ ಜನರನ್ನು ಕಾಡುತ್ತಿದೆ.

ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿಯ ಮೇರೆಗೆ ನಂಜನಗೂಡಿನ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡು ನದಿಯ ಅಂಚಿನಲ್ಲಿರುವ ಸಾರ್ವಜನಿಕರಿಗೆ ಜನ-ಜಾನು ವಾರುಗಳ ಪ್ರಾಣರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು