News Karnataka Kannada
Thursday, April 18 2024
Cricket
ಕರ್ನಾಟಕ

ತಾಂಡಾ ಅಭಿವೃದ್ಧಿಗೆ ನೂರು ಕೋಟಿ ಅನುದಾನ- ಸಚಿವ ಬಸವರಾಜ ಬೊಮ್ಮಾಯಿ

Photo Credit :

ತಾಂಡಾ ಅಭಿವೃದ್ಧಿಗೆ ನೂರು ಕೋಟಿ ಅನುದಾನ- ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ತಾಂಡಾ ಅಭಿವೃದ್ಧಿ ನಿಗಮಕ್ಕೆ ರೂ.100 ಕೋಟಿ ಅನುದಾನ ನೀಡಲಾಗಿದೆ. ಪ್ರತಿ ತಾಂಡಾಗಳಲ್ಲಿ ಸಿಮೆಂಟ್ ರಸ್ತೆ, ಸಮುದಾಯ ಭವನ ನಿರ್ಮಿಸುವ ಮೂಲಕ ಪರಿಣಾಮಕಾರಿ ಬದಲಾವಣೆ ಹಾಗೂ ಬೆಳವಣಿಗೆ ತರುವಲ್ಲಿ ತಾಂಡಾ ಅಭಿವೃದ್ಧಿ ನಿಗಮ ಪ್ರಮುಖಪತ್ರ ವಹಿಸಿದೆ ಎಂದು ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಅವರು ಹೇಳಿದರು.

ದೇವಗಿರಿ-ಯಲ್ಲಾಪೂರ ಬಳಿ ಇಂದು ಜಿಲ್ಲಾ ಬಂಜಾರ ಭವನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಾನ್ಯ ಮುಖ್ಯವಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಯಿತು. ತಾಂಡಾ ಜನರ ಜೀವನ ಗುಣಮಟ್ಟದ ಸುಧಾರಿಸಲು ಹಾಗೂ ಸರ್ಕಾರದ ಯೋಜನೆಗಳು ಈ ಸಮಾಜಕ್ಕೆ ಸಮರ್ಪಕವಾಗಿ ತಲುಪಿಸಲುವ ನಿಟ್ಟಿನಲ್ಲಿ ತಾಂಡಾ ಅಭಿವೃದ್ಧಿ ನಿಯಮ ಕಾರ್ಯಪ್ರವೃತ್ತವಾಗಿದೆ. ತಾಂಡಾ ಅಭಿವೃದ್ಧಿ ನಿಗಮದಿಂದ ಸಮಾಜ ಸಣ್ಣ ನೆಲೆ ಕಂಡುಕೊಂಡಿದೆ. ಆದರೆ ಬದುಕಿನ ಹೋರಾಟ ಮುಂದುವರೆದಿದೆ ಎಂದು ಹೇಳಿದರು.

‘ಬಂಜಾರ ಭವನ’ ಈ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ಭವನ ಕಟ್ಟಡವಲ್ಲ, ಸಮಾಜದ ಜಾಗೃತಿ, ಚಿಂತನೆ, ಹೊಸ ದಿಕ್ಸೂಚಿ ಸಂಕೇತವಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು