News Karnataka Kannada
Sunday, April 14 2024
Cricket
ಕರ್ನಾಟಕ

ತಹಸೀಲ್ದಾರ್ ಸಹಿ ನಕಲು ಮಾಡಿದ ಗುಮಾಸ್ತ ಅಮಾನತು

Photo Credit :

ತಹಸೀಲ್ದಾರ್ ಸಹಿ ನಕಲು ಮಾಡಿದ ಗುಮಾಸ್ತ ಅಮಾನತು

ಚಾಮರಾಜನಗರ: ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಹಣದ ಆಸೆಗೆ ತಹಶೀಲ್ದಾರ್ ಸಹಿಯನ್ನೇ ನಕಲು ಮಾಡಿ ಸಿಕ್ಕಿಬಿದ್ದು ಸೇವೆಯಿಂದ ಅಮಾನತ್ತಾಗಿರುವ  ಘಟನೆ ಬೆಳಕಿಗೆ ಬಂದಿದೆ.

ಹಣದ ಆಸೆಗಾಗಿ ದ್ವಿತೀಯ ದರ್ಜೆ ಗುಮಾಸ್ತನಾಗಿರುವ ಅಬ್ದುಲ್ ಮುಜಾಹಿದ್ ಹಿಂದಿನ ತಹಶೀಲ್ದಾರ್ ಅವರ ಸಹಿಯನ್ನು ನಕಲು ಮಾಡಿರುವುದು ಖಚಿತವಾಗಿದ್ದು, ಈತನನ್ನು ಸೇವೆಯಿಂದ ಜಿಲ್ಲಾಧಿಕಾರಿ ಡಾ ಎಂ.ಆರ್. ರವಿ ಅಮಾನತುಗೊಳಿಸಿ ಆದೇಶಿಸಿ, ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಘಟನೆಯ ವಿವರ: ಚಾಮರಾಜನಗರ ತಾಲೂಕಿನ ಕಾಡಹಳ್ಳಿಯ ಮಹದೇವಸ್ವಾಮಿ ಬಿನ್ ಸಿದ್ದೂರಯ್ಯ ಎಂಬಾತ ಗ್ರಾಮದಲ್ಲಿ ಸರ್ಕಾರಕ್ಕೆ ಸೇರಿದ ಸರ್ವೇ ನಂಬರ್ 157 ರಲ್ಲಿ 20/36 ಅಳತೆಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಇದನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿರುವ ಅಬ್ದುಲ್ ಮುಜಾಹಿದ್ ಕಾಡಹಳ್ಳಿ ಗ್ರಾಮದ ಮಹದೇವಸ್ವಾಮಿರವರಿಗೆ ಹಿಂದಿನ ತಹಶೀಲ್ದಾರ್ ಸಹಿ ಹಾಕಿಸಿ ಹಣಪಡೆದಿದ್ದಾರೆ.

ಹಕ್ಕು ಪತ್ರಕ್ಕಾಗಿ ಮಹದೇವಸ್ವಾಮಿ ಪದೇ ಪದೇ ಕಚೇರಿಗೆ ಆಗಮಿಸುತ್ತಿದ್ದರು. ಅಲ್ಲದೇ, ತಮ್ಮ ಕೆಲಸಕ್ಕಾಗಿ ಗುಮಾಸ್ತ ಅಬ್ದುಲ್ ಮುಜಾಹಿದ್ ಮೇಲೆ ಒತ್ತಡ ಹೇರತೊಡಗಿದ್ದರು ಹೀಗಾಗಿ ಅಬ್ದುಲ್ ಮುಜಾಹಿದ್ ಮಹದೇಸ್ವಾಮಿಯ ಅರ್ಜಿಯ ಬಗ್ಗೆ ಕಡತ ತಯಾರಿಸಿ ತಾನೇ ಹಿಂದಿನ ತಹಶೀಲ್ದಾರರ ಸಹಿ ನಕಲು ಮಾಡಿ ಹಕ್ಕು ಪತ್ರ ನೀಡಿದ್ದಾನೆ.

ಈ ಹಕ್ಕುಪತ್ರದ ನೈಜತೆ ಬಗ್ಗೆ ಮಹದೇವಸ್ವಾಮಿಗೆ ಅನುಮಾನ ಬಂದಿದ್ದು ಇದಕ್ಕೆ ಕಾರಣ ಹಕ್ಕು ಪತ್ರದಲ್ಲಿದ್ದ ಸಹಿ. ಈ ಹಿಂದೆ ಇದ್ದ ತಹಶೀಲ್ದಾರ್ ಮಹೇಶ್ ಹೆಸರಿನಲ್ಲಿ ಸಹಿ ಇರುವುದು ಕಂಡು ಮಹದೇವಸ್ವಾಮಿ, ಈಗಿನ ತಹಸೀಲ್ದಾರ್ ಚಿದಾನಂದ ಗುರುಸ್ವಾಮಿರವರ ಗಮನಕ್ಕೆ ತಂದಿದ್ದಾರೆ.

ಈ ಹಿಂದೆ ಮಹೇಶ್ ಎಂಬ ತಹಶೀಲ್ದಾರರು ಕರ್ತವ್ಯ ನಿರ್ವಹಸುತ್ತಿದ್ದರು. ಆದರೆ, ಈಗ ಪ್ರಸ್ತುತ ಚಿದಾನಂದ ಗುರುಸ್ವಾಮಿ ಎಂಬ ತಹಶೀಲ್ದಾರರು ವರ್ಗಾವಣೆ ಆಗಿ ಬಂದಿದ್ದರೂ, ಹಕ್ಕು ಪತ್ರದಲ್ಲಿ ಹಿಂದಿನ ತಹಸೀಲ್ದಾರ್ ಮಹೇಶ್ ಅವರ ಸಹಿ ಇದ್ದುದರಿಂದ ಅನುಮಾನಗೊಂಡ ಮಹದೇವಸ್ವಾಮಿ ತಹಶೀಲ್ದಾರ್‍ಗೆ ದೂರು ಸಲ್ಲಿಸಿದ್ದರು.

ಮಹದೇವಸ್ವಾಮಿ  ನೀಡಿದ ದೂರಿನ ಅನ್ವಯ ತನಿಖೆ ನಡೆಸಿದಾಗ ಇದು ಹಿಂದಿನ ತಹಶೀಲ್ದಾರ್ ಮಹೇಶ್ ಅವರ ಸಹಿಯನ್ನು ಪೋರ್ಜರಿ ಮಾಡಿ ನೀಡಿರುವ ಹಕ್ಕು ಪತ್ರ ಎಂದ ತಿಳಿದುಬಂದಿದೆ. ಈ ಸಂಬಂಧ ಹಾಲಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾದಿಕಾರಿ ಡಾ.ಎಂ.ಆರ್.ರವಿ ವಿಚಾರಣೆ ನಡೆಸಿ ತಹಸೀಲ್ದಾರ್ ರವರ ಸಹಿ ನಕಲಿ ಮಾಡಿದ ಆರೋಪದ ಮೇರೆಗೆ ಗುಮಾಸ್ತ ಅಬ್ದುಲ್ ಮುಜಾಹಿದ್ ನನ್ನು ಸರ್ಕಾರಿ ಸೇವೆಯಿಂದ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು