News Karnataka Kannada
Wednesday, April 24 2024
Cricket
ಕರ್ನಾಟಕ

ತಲಕಾವೇರಿ ದುರಂತಕ್ಕೆ ತ್ರಿಮೂರ್ತಿಗಳು ಕಾರಣ: ವಕೀಲ ಮಾಚಯ್ಯ ಆರೋಪ

Photo Credit :

ತಲಕಾವೇರಿ ದುರಂತಕ್ಕೆ ತ್ರಿಮೂರ್ತಿಗಳು ಕಾರಣ: ವಕೀಲ ಮಾಚಯ್ಯ ಆರೋಪ

ಮಡಿಕೇರಿ: ಕಾವೇರಿಯ ಕ್ಷೇತ್ರ ತಲಕಾವೇರಿಯಲ್ಲಿ ಸಂಭವಿಸಿದ ದುರ್ಘಟನೆಗಳಿಗೆ ಅರ್ಚಕರು, ಜಿಲ್ಲಾಡಳಿತ ಮತ್ತು ಅಷ್ಟಮಂಗಲ ಪ್ರಶ್ನೆ ಎನ್ನುವ ‘ತ್ರಿಮೂರ್ತಿ’ಗಳೇ ಕಾರಣವೆಂದು ವಕೀಲ ಬಿ.ಎ.ಮಾಚಯ್ಯ ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿಯ ತಪ್ಪಲಿನ ಕಾವೇರಿ ಮಾತೆಯಲ್ಲೆ ದೋಷ ಹುಡುಕುವ ‘ಅಷ್ಟಮಂಗಲ’ ಪ್ರಶ್ನೆಯಂತಹ ಕಾರ್ಯಕ್ರಮಗಳು ಅರ್ಥಹೀನವಾಗಿದ್ದು, ಇದು ಅಕ್ರಮ ಸಂಪಾದನೆಯ ಒಂದು ಹಾದಿಯಷ್ಟೇ ಎಂದು ಟೀಕಿಸಿದರು.

ಪವಿತ್ರವಾದ ಕಾವೇರಿ ಕ್ಷೇತ್ರದಲ್ಲೆ ಶುದ್ಧ, ಅಶುದ್ಧವೆನ್ನುವ ಮಾತನಾಡುತ್ತಾ, ಕಾವೇರಿ ಮಾತೆ ಕೊಡವ, ಅಮ್ಮ ಕೊಡವರಿಗೆ ಶಾಪ ಹಾಕಿದ್ದಾಳೆ ಎಂದು ಇದೇ ತ್ರಿಮೂರ್ತಿಗಳು ಹೇಳಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ಅಷ್ಟಮಂಗಲ ಪ್ರಶ್ನೆಯ ಮೂಲಕ ಹಣವ್ಯಯ ಮಾಡುತ್ತಿರುವುದಾಗಿ ಆರೋಪಿಸಿದ ಮಾಚಯ್ಯ, ಲೋಕಕಲ್ಯಾಣಕ್ಕಾಗಿ ತೀರ್ಥರೂಪಿಣಿಯಾಗಿ ಹರಿದ ಕಾವೇರಿ ಯಾರಿಗೂ ಶಾಪ ನೀಡುವವಳಲ್ಲ. ಆಕೆಯ ಬಗ್ಗೆ ದೋಷ ಹುಡುಕುವುದನ್ನು  ಮೊದಲು ನಿಲ್ಲಿಸಲಿ ಎಂದು ಒತ್ತಾಯಿಸಿದರು.

ಕ್ಷೇತ್ರದಲ್ಲಿ ನಡೆದಿರುವ ದುರ್ಘಟನೆಗಳಿಗೆ ಜಿಲ್ಲೆಯ ಸಾರ್ವಜನಿಕರಾರು ಕಾರಣರಲ್ಲ. ಕಾವೇರಿಯ ಕ್ಷೇತ್ರದಲ್ಲಿ ಮುನ್ನೂರು ವರ್ಷಗಳಿಂದ ಅರ್ಚಕರಾಗಿ ನಡೆದುಕೊಂಡು ಬಂದವರು, ಅಷ್ಟಮಂಗಲ ಪ್ರಶ್ನೆಗಳನ್ನು ನಡೆಸಿದವರು ಹಾಗೂ ಇದಕ್ಕೆ ಬೆಂಬಲವಾಗಿ ನಿಂತ ಜಿಲ್ಲಾಡಳಿತವೇ ಕಾರಣವೆಂದು ಮಾಚಯ್ಯ ಆರೋಪಿಸಿದರು.

ಅಶ್ವತ್ಥ ಮರ ತೆಗೆದರು

ಕಾವೇರಿಯ ತೀರ್ಥ ಕುಂಡಿಕೆಯ ಬಳಿಯಲ್ಲೆ ಹಲ ದಶಕಗಳ ಹಿಂದೆ ಪುಟ್ಟದಾದ ಅಶ್ವತ್ಥ ಮರವೊಂದಿತ್ತು. ಆ ಹಂತದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿಗಳ ಸೂಚನೆಯಂತೆ, ಅವರನ್ನು ಸಂತೃಪ್ತಗೊಳಿಸುವ ಉದ್ದೇಶದಿಂದ ಆ ಮರವನ್ನು ಕಿತ್ತು ತೆಗೆದು ಕಟ್ಟೆಗಳನ್ನು ಕಟ್ಟುವ ಕೆಲಸ ಮಾಡಿರುವುದು ಮೊದಲ ಲೋಪವೆಂದು ಮಾಚಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ ಕಾವೇರಿಯ ಶಾಪ ಸ್ಥಳೀಯ ಕೊಡವರು, ಅಮ್ಮಕೊಡವರ ಮೇಲಿದೆ ಎಂದು ಹೇಳಿ ಅದರ ಪರಿಹಾರ ಕ್ರಮಗಳನ್ನು ಹೇಳಲಾಗಿತ್ತಾದರು, ಅದರ ನಿವಾರಣೆಯ ಕ್ರಮ ಇಲ್ಲಿಯವರೆಗೂ ಆಗಿಲ್ಲವೆಂದು ವ್ಯಂಗ್ಯವಾಗಿವಾಡಿದ ಅವರು, ಇದನ್ನು ಸರಿಪಡಿಸದಿರುವುದು ಈ ತ್ರಿಮೂರ್ತಿಗಳದ್ದೇ ತಪ್ಪಲ್ಲವೆ ಎಂದು ಪ್ರಶ್ನಿಸಿದರು.

ಹಾನಿಯಾಗಿದೆ ಎನ್ನುವ ಕಾರಣಕ್ಕೆ ಅಗಸ್ತ್ಯೇಶ್ವರನ ಲಿಂಗವನ್ನು ಪುನರ್ ಪ್ರತಿಷ್ಟಾಪನೆ ಮಾಡದೆ, ಅದನ್ನು ವಿಸರ್ಜಿಸಲು ಮುಂದಾದ ಕ್ರಮಗಳು ತಪ್ಪೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿವೇಕ್ ಗಣಪತಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು