News Karnataka Kannada
Saturday, April 13 2024
Cricket
ಕರ್ನಾಟಕ

ತಲಕಾವೇರಿಯಲ್ಲಿ ಪೂಜೆಯ ಹೊಣೆಗಾರಿಕೆ ಅಮ್ಮ ಕೊಡವ ಪುರೋಹಿತರಿಗೆ ವಹಿಸಲು ಆಗ್ರಹ

Photo Credit :

ತಲಕಾವೇರಿಯಲ್ಲಿ ಪೂಜೆಯ ಹೊಣೆಗಾರಿಕೆ ಅಮ್ಮ ಕೊಡವ ಪುರೋಹಿತರಿಗೆ ವಹಿಸಲು ಆಗ್ರಹ

ಮಡಿಕೇರಿ:  ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ತಲಕಾವೇರಿ ದೇವಾಲಯದಲ್ಲಿ ಮತ್ತು ಶ್ರೀ ಕಾವೇರಿ ಸನ್ನಿಧಿಯಲ್ಲಿ ನಿತ್ಯಪೂಜೆ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವ ಹೊಣೆಗಾರಿಕೆಯನ್ನು ಮತ್ತೆ ಅಮ್ಮ ಕೊಡವ ಜನಾಂಗದವರಿಗೆ ವಹಿಸುವಂತೆ ಅಖಿಲ ಅಮ್ಮ ಕೊಡವ ಸಮಾಜ ಆಗ್ರಹಿಸಿದೆ.

ಅಖಿಲ ಅಮ್ಮ ಕೊಡವ ಸಮಾಜದ ಗೌರವಾಧ್ಯಕ್ಷರಾದ,  ಜಿ.ಪಂ. ಸದಸ್ಯ ಬಾನಂಡ ಎನ್. ಪ್ರತ್ಯು ಅವರ ನೇತೃತ್ವದಲ್ಲಿ ಸಮಾಜದ ಅಧ್ಯಕ್ಷರಾದ ಅಚ್ಚಿಯಂಡ ಆರ್. ವೇಣುಗೋಪಾಲ್, ಉಪಾಧ್ಯಕ್ಷ ಮತ್ತು ಜಿ. ಪಂ. ಸದಸ್ಯರಾದ ಪಾಡಿಯಮಂಡ ಮುರುಳಿ ಕರುಂಬಮ್ಮಯ್ಯ, ಸಮಾಜದ ಮತ್ತೋರ್ವ ಉಪಾಧ್ಯಕ್ಷೆ ಮತ್ತು ಮಡಿಕೇರಿ ತಾ. ಪಂ. ಸದಸ್ಯೆ ಉಮಾ ಪ್ರಭು ಮತ್ತು ಅಚ್ಚಿಯಂಡ ಮಿಥುನ್ ಅವರನ್ನೊಳಗೊಂಡ ಪ್ರಮುಖರ ನಿಯೋಗ ಶುಕ್ರವಾರದಂದು  ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಅನೀಸ್  ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ.

ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇತಿಹಾಸದ ಪ್ರಕಾರ ಹಲವಾರು ದಶಕಗಳ ಹಿಂದೆ ಬ್ರಾಹ್ಮಣರ ಬದಲಾಗಿ ಕೊಡಗಿನ ಮೂಲನಿವಾಸಿಗರಾಗಿರುವ ಅಮ್ಮ ಕೊಡವ ಜನಾಂಗದ ಪುರೋಹಿತರು ಶ್ರೀಮಾತೆ ಕಾವೇರಿ ಸನ್ನಿಧಿಯಲ್ಲಿ ಪೂಜಾ ಕಾರ್ಯಗಳನ್ನು ನಡೆಸುತ್ತಿದ್ದರು. ಬದಲಾದ ಸನ್ನಿವೇಶದಲ್ಲಿ ಈ ಸ್ಥಾನವನ್ನು ಬ್ರಾಹ್ಮಣ ಪುರೋಹಿತರಿಗೆ ಅಮ್ಮ ಕೊಡವ ಜನಾಂಗದವರೇ ವಹಿಸಿದ್ದರು. ಈ ಕುರಿತು ಸಾಕಷ್ಟು ಪುರಾವೆಗಳಿವೆ. ಇದೀಗ ಮತ್ತೆ ತಲಕಾವೇರಿಯಲ್ಲಿ ಅಮ್ಮ ಕೊಡವ ಸಮುದಾಯದ ಪುರೋಹಿತರು ಪೂಜಾ ಕಾರ್ಯಗಳನ್ನು ನಡೆಸಲು ಸಿದ್ಧರಿದ್ದು, ಆದ್ದರಿಂದ ಕಾನೂನುಬದ್ಧವಾಗಿ ಇದಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರಸ್ತಾಪಿತ ಬೇಡಿಕೆಗಳ ಕುರಿತು ಪರಿಶೀಲಿಸಲಾಗುವುದು. ಜೊತೆಗೆ ಮುಜರಾಯಿ ಸೇರಿದಂತೆ ಸಂಬಂಧಿತ ಇಲಾಖೆ ಮತ್ತು ಸಮಿತಿಯೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುಖ್ಯವಾಗಿ ಈ ಕುರಿತು ಸರಕಾರದ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿರುವುದಾಗಿ ನಿಯೋಗದ ನೇತೃತ್ವ ವಹಿಸಿದ್ದ ಬಿ.ಎನ್. ಪ್ರತ್ಯು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು