News Karnataka Kannada
Wednesday, April 17 2024
Cricket
ಕರ್ನಾಟಕ

ಜೋಗ ವೀಕ್ಷಿಸಲು ಪ್ರವಾಸಿಗರ ದಂಡು

Photo Credit :

ಜೋಗ ವೀಕ್ಷಿಸಲು ಪ್ರವಾಸಿಗರ ದಂಡು

ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗದಲ್ಲಿ ಪ್ರವಾಸಿಗರ ದಂಡೇ ಹರಿದುಬಂದ ಪರಿಣಾಮ ಟ್ರಾಫಿಕ್ ಜಾಮ್ ಹಾಗೂ ಜೋಗ ಜಲಪಾತವನ್ನ ನೋಡಲು ಜನ ಗೇಟ್ ಬಳಿ ಸಾಲಿನಲ್ಲಿ ನಿಂತು ಟಿಕೇಟ್ ಪಡೆದಿರುವ ದೃಶ್ಯ ಕಂಡುಬಂದಿದೆ.

ಈ ಹಿಂದೆ ಇಂತಹ ಘಟನೆ ನಡೆದಿರಲಿಲ್ಲವೆಂದು ಸಹ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ನಂತರ ವೀಕೆಂಡ್ ನಲ್ಲಿ ಸಾಲುಗಟ್ಟಿ ಜನ ಜೋಗ್ ಜಲಪಾತ ವೀಕ್ಷಿಸಿರುವುದು ಇತಿಹಾಸವೇ ಸರಿ ಎಂದು ಹೇಳಬಹುದು.

ಲಾಕ್ ಡೌನ್ ಆದ ನಂತರ ಎರಡು ಮೂರು ತಿಂಗಳು ಪ್ರವಾಸಿಗರ ಪ್ರವೇಶಕ್ಕೆ ಬ್ರೇಕ್ ಬಿದ್ದಿತ್ತು. ಮಾರ್ಚ್ 17 ರ ನಂತರ ಜೂನ್.17 ರವರೆಗೆ ಕೊರೋನ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳು ಬಂದ್ ಆದ ಹಿನ್ನಲೆಯಲ್ಲಿ ಈ ಜೋಗ್ ಜಲಪಾತದಲ್ಲಿ ಪ್ರವಾಸಿಗರಿಗೆ ನಿಷೇಧಿಸಲಾಗಿತ್ತು. ನಂತರ ಸಾರ್ವಜನಿಕರಿಗೆ ಈ ಸ್ಥಳದಲ್ಲಿ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರೀಕ್ಷಿಸಿರುವ ಮಟ್ಟದಲ್ಲಿ ಮಳೆಯಾಗದ ಕಾರಣ ಪ್ರವಾಸಿಗರ ಜೋಗ್ ಭೇಟಿಯೂ ಸಹ ಕಡಿಮೆನೇ ಇತ್ತು.

ಆಗಸ್ಟ್ ತಿಂಗಳಿಂದ ಜೋಗ್ ನಲ್ಲಿ ಮಳೆ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಜೋಗ್ ಜಲಪಾತದ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅದು ವೀಕೆಂಡ್ ಮತ್ತು ಗಣಪತಿ ಹಬ್ಬ ಒಟ್ಟಿಗೆ ಬಂದ ಪರಿಣಾಮ ಪ್ರವಾಸಿಗರ ದಂಡು ಹರಿದುಬಂದಿದೆ. ಕೊರೋನ ಎಫೆಕ್ಟ್ ನಿಂದ ಬಸ್ ನಲ್ಲಿ ಪ್ರವಾಸಿಗರು ಬರಲು ಹೆದರುತ್ತಿರುವ ಹಿನ್ನಲೆಯಲ್ಲಿ ಎಲ್ಲರೂ ಸ್ವಂತ ವಾಹನದಲ್ಲಿ ಬರುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ ಎಂಬುದು ಅಧಿಕಾರಿಗಳ ಹೇಳಿಕೆಯಾಗಿದೆ.

ಇಂದು ಮಧ್ಯಾಹ್ನ 12 ರಿಂದ 1 ಗಂಟೆಯ ವರೆಗೆ ಜನ ಸರತಿ ಸಾಲಿನಲ್ಲಿ ನಿಂತು ಜನ ಟಿಕೇಟ್ ಪಡೆದಿದ್ದಾರೆ. ಮಾಮೂಲಿಯಾಗಿ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರವಾಸಿಗರ ಸಂಖ್ಯೆ 2000-3000 ವಿದ್ದರೆ ವೀಕೆಂಡ್ ದಿನಗಳಾದ ಶನಿವಾರ ಮತ್ತು ಭಾನುವಾರದ ಚಿತ್ರಣ ಬೇರೆನೇ ಇರುತ್ತದೆ. ಇಂದು ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಬರೊಬ್ಬರಿ 12918 ಜನ ಎನ್ನುತ್ತಾರೆ ಇಲ್ಲಿನ ಜೋಗ್ ಮ್ಯಾನೇಜ್ ಮೆಂಟ್ ಅಥಾರಿಟಿ.

ಗೇಟ್ ನಲ್ಲಿ ಮೂರು ಟಿಕೇಟ್ ಕೌಂಟರ್ ನ್ನ ತೆರೆಯಲಾಗಿತ್ತು. ಬೈಕ್ ಸವಾರರಿಗೆ, ಕಾರ್ ಪ್ರಯಾಣಿಕರಿಗೆ ಹಾಗೂ ನಡೆದುಕೊಂಡು ಬರುವ ವ್ಯಕ್ತಿಗಳಿಗೆ ಪ್ರತ್ಯೇಕ ಕೌಂಟರ್ ನ್ನ ತೆರೆಯಲಾಗಿದ್ದರೂ ಸಹ ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತು ಟಿಕೇಟ್ ಪಡೆದು ಜೋಗ್ ವೀಕ್ಷಣೆ ಮಾಡಿದ್ದಾರೆ.

ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಲಿಂಗನಮಕ್ಕಿ ಡ್ಯಾಂ ತುಂಬಿದೆ ಎಂಬ ಫೇಕ್ ವಿಡಿಯೋವೊಂದು ವೈರಲ್ ಆಗಿದ್ದ ಪರಿಣಾಮ ಇಂದಿನ ಜನಜಂಗುಳಿಗೆ ಕಾರಣವಾಗಿದೆ ಎನ್ನುತ್ತದೆ ಜೋಗ್ ನಿರ್ವಾಹಣ ಪ್ರಾಧಿಕಾರ. ಗೇಟ್ ನಲ್ಲಿ ಜನರಿಗೆ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಬಳಸಿ ಎಂದು ತಿಳುವಳಿಕೆ ನೀಡಲಾಗುತ್ತಿದ್ದರು ಸಹ ಜೋಗ್ ಜಲಪಾತದ ಬಳಿ ಹೋಗುವ ಪ್ರವಾಸಿಗರು ಮಾಸ್ಕ್ ಮರೆಯುತ್ತಿದ್ದಾರೆ. ಈ ಬಗ್ಗೆ ಪ್ರಾಧಿಕಾರ ಕ್ರಮ ಜರುಗಿಸಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು